• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಮ್ಮ ಊಟ ನಾವು ತಂದಿದ್ದೇವೆ ಸ್ವಾಮಿ, ನೀವು ಕೊಡೋದು ಬೇಡ: ರೈತರ ಸ್ವಾಭಿಮಾನದ ನುಡಿ

|

ನವದೆಹಲಿ, ಡಿಸೆಂಬರ್ 03: ನಮ್ಮ ಊಟವನ್ನು ನಾವು ತಂದುಕೊಂಡಿದ್ದೇವೆ ಸ್ವಾಮಿ, ನೀವು ಕೊಡುವುದು ಬೇಡ ಎಂದು ರೈತರು ಸ್ವಾಭಿಮಾನ ಮೆರೆದಿದ್ದಾರೆ.

ಕಳೆದ ಒಂದು ವಾರದಿಂದ ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿ ರೈತರು ದೆಹಲಿ ಚಲೋ ಕೈಗೊಂಡಿದ್ದರು. ಇದೀಗ ಕೇಂದ್ರ ಸರ್ಕಾರವು ಸಂಧಾನಕ್ಕೆಂದು ಕರೆದಿತ್ತು.

ದೆಹಲಿ: ರೈತರೊಂದಿನ ಸಂಧಾನ ಸಭೆಗೂ ಮುನ್ನ ಅಮರೀಂದರ್, ಶಾ ಭೇಟಿ

ಸಭೆಯ ಸಂದರ್ಭದಲ್ಲಿ ಸರ್ಕಾರ ನೀಡಿದ ಊಟವನ್ನು ರೈತರು ತಿರಸ್ಕರಿಸಿದ್ದು, ನಮ್ಮ ಅನ್ನವನ್ನು ನಾವು ತಂದಿದ್ದೇವೆ, ನೀವು ಕೊಡುವ ಊಟ ಬೇಡ ಎಂದು ನಿರಾಕರಿಸಿ ಸ್ವಾಭಿಮಾನವನ್ನು ತೋರಿಸಿದ್ದಾರೆ.

ಸರ್ಕಾರ ನೀಡುವ ಆಹಾರ, ಟೀ ಯಾವುದೂ ನಮಗೆ ಬೇಡ, ನಾವು ನಮ್ಮ ಊಟವನ್ನು ತಂದುಕೊಂಡಿದ್ದೇವೆ. ದೆಹಲಿಯ ವಿಜ್ಞಾನ ಭವನದಲ್ಲಿ ಸಭೆ ನಡೆಯುತ್ತಿದೆ.

ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಕೃಷಿ ಕಾಯ್ದೆ ವಿರುದ್ಧ ರೈತರು ನಡೆಸುತ್ತಿರುವ ಹೋರಾಟವು 7ನೇ ದಿನಕ್ಕೆ ಕಾಲಿಟ್ಟಿದೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆಯೂ ಸಪ್ಟೆಂಬರ್ ನಲ್ಲಿ ನಡೆದ ಸಂಸತ್ ಅಧಿವೇಶನದಲ್ಲಿ ವಿವಾದಾತ್ಮಕ ಮಸೂದೆಯನ್ನು ಅಂಗೀಕರಿಸಲಾಗಿತ್ತು. ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ನವೆಂಬರ್.26ರಂದು ರೈತರು ದಿಲ್ಲಿ ಚಲೋ ಪ್ರತಿಭಟನೆ ಕೈಗೊಂಡರು.

ಕಳೆದ ಶುಕ್ರವಾರ ದೆಹಲಿ ಗಡಿ ಪ್ರದೇಶವನ್ನು ಪ್ರವೇಶಿಸಿದ ರೈತರು ಕೇಂದ್ರ ಸರ್ಕಾರಕ್ಕೆ ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು. ಡಿಸೆಂಬರ್.03ರ ಗುರುವಾರ ನಡೆಯಲಿರುವ ಸಭೆಯಲ್ಲೇ ಕೇಂದ್ರ ಸರ್ಕಾರವು ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು ಎಂದು ರೈತ ಮುಖಂಡರು ಈಗಾಗಲೇ ಷರತ್ತು ವಿಧಿಸಿದ್ದಾರೆ.

ನವೆಂಬರ್.26ರಿಂದ ರೈತರ ಪ್ರತಿಭಟನೆ ಆರಂಭಗೊಂಡಿದ್ದು, ಇದುವರೆಗೂ ನಡೆಸಿದ ಮೂರು ಸಂಧಾನ ಸಭೆಗಳು ವಿಫಲವಾಗಿವೆ.

English summary
Farmers refused to break bread with the government during the talks on farm laws today. At the lunch break, farmers said "no" to the food offered by the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X