ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವೆಲ್ಲ ಒಂದಾಗದಿದ್ದರೆ ಇದೇ ಕೊನೆ ಲೋಕಸಭೆ ಚುನಾವಣೆ: ನಾಯ್ಡು

|
Google Oneindia Kannada News

ನವದೆಹಲಿ, ಫೆಬ್ರವರಿ 13: ನಾವು ಅಪಾಯದಲ್ಲಿ ಇದ್ದೇವೆ. ಅಪಾಯದಲ್ಲಿ ಇರುವ ಪ್ರಜಾಪ್ರಭುತ್ವ ಹಾಗೂ ಈ ದೇಶವನ್ನು ನಾವು ರಕ್ಷಿಸಲೇಬೇಕಿದೆ. ಈಗ ನಾವೆಲ್ಲರೂ ಒಗ್ಗಟ್ಟಾಗದೇ ಇದ್ದರೆ ಈ ಚುನಾವಣೆಯೇ ನಮ್ಮ ಪಾಲಿಗೆ ಕೊನೆಯಾಗಲಿದೆ. ನಾಳೆ ಯಾವುದೇ ಚುನಾವಣೆಯೇ ಇರುವುದಿಲ್ಲ ಎಂದು ದೆಹಲಿಯಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬುಧವಾರ ಹೇಳಿದ್ದಾರೆ.

ಒಂದು ದಿನದ ಉಪವಾಸ ಅಂತ್ಯಗೊಳಿಸಿದ ಚಂದ್ರಬಾಬುನಾಯ್ಡುಒಂದು ದಿನದ ಉಪವಾಸ ಅಂತ್ಯಗೊಳಿಸಿದ ಚಂದ್ರಬಾಬುನಾಯ್ಡು

ಇದೇ ವೇಳೆ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತನಾಡಿ, ಮುಂಬರುವ ದಿನಗಳಲ್ಲಿ ನಾವೆಲ್ಲ ಒಂದಾಗಿ ಹೋರಾಡೋಣ. ನಮ್ಮ ಜತೆಗೆ ಕಾಂಗ್ರೆಸ್, ಸಿಪಿಎಂನ ಹೋರಾಟ ರಾಜ್ಯಗಳಲ್ಲಿ ಇರುತ್ತದೆ. ರಾಷ್ಟ್ರ ಮಟ್ಟದಲ್ಲಿ ನಾವೆಲ್ಲ ಒಟ್ಟಾಗಿ ಹೋರಾಡೋಣ. ಅವರು ನನ್ನ ವಿರುದ್ಧ ಹೋರಾಡಲಿ, ಪರವಾಗಿಲ್ಲ. ಈ ದೇಶದ ಹಿತಕ್ಕಾಗಿ ನನ್ನ ಜೀವ ಅಥವಾ ಪಕ್ಷವನ್ನು ತ್ಯಾಗ ಮಾಡುವುದಕ್ಕೆ ಸಿದ್ಧ ಎಂದು ಹೇಳಿದ್ದಾರೆ.

Chandrababu Naidu

ಎನ್.ಚಂದ್ರಬಾಬು ನಾಯ್ಡು, ಫಾರೂಕ್ ಅಬ್ದುಲ್ಲಾ, ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್ ಇವರೆಲ್ಲ ಸೇರಿ ಶರದ್ ಪವಾರ್ ರ ಮನೆಯಲ್ಲಿ ಬುಧವಾರದಂದೇ ಸಭೆ ಸೇರಿ ಚರ್ಚೆ ನಡೆಸಲಿದ್ದಾರೆ.

English summary
We are in danger, we have to protect this nation, democracy is under threat. If all of us are not united, this is the last election for all of us, tomorrow there won't be any election, said Andhra Pradesh CM & TDP chief N Chandrababu Naidu in Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X