ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ವಾಯುಪಡೆಯ ಮುಂದಿನ ಮುಖ್ಯಸ್ಥರಾಗಿ ವಿ.ಆರ್. ಚೌಧರಿ ನೇಮಕ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 21: ನುರಿತ ಹಾಗೂ ಅನುಭವಿ ಪೈಲಟ್ ಏರ್​ ಮಾರ್ಷಲ್ ವಿವೇಕ್ ರಾಮ್ ಚೌಧರಿಯವರನ್ನು ಭಾರತೀಯ ವಾಯುಪಡೆಯ ಮುಖ್ಯಸ್ಥರ ಹುದ್ದೆಗೆ ನೇಮಿಸಲು ಭಾರತ ಸರ್ಕಾರ ನಿರ್ಧರಿಸಿದೆ.

ವಾಯುಪಡೆಯ ಹಾಲಿ ಮುಖ್ಯಸ್ಥರಾದ ಏರ್​ಚೀಫ್ ಮಾರ್ಷಲ್ ಆರ್​.ಕೆ.ಎಸ್. ಬಧೌರಿಯಾ ಇದೇ ಸೆಪ್ಟೆಂಬರ್ 30ರಂದು ನಿವೃತ್ತರಾಗಲಿದ್ದು, ಅವರ ನಂತರ ವಾಯುಪಡೆ ಮುಖ್ಯಸ್ಥರ ಹುದ್ದೆಯನ್ನು ವಿ.ಆರ್. ಚೌಧರಿ ನಿರ್ವಹಿಸಲಿದ್ದಾರೆ.

ಪ್ರಸ್ತುತ ವಾಯುಪಡೆಯ ಉಪ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ವಿ.ಆರ್. ಚೌಧರಿ, ಮಿಗ್​- 29 ಯುದ್ಧ ವಿಮಾನದ ನಿಪುಣ ಪೈಲಟ್ ಎಂದೇ ಹೆಸರಾಗಿದ್ದಾರೆ. ಆಗಸ್ಟ್ 1, 2020ರಿಂದಲೂ ಚೌಧರಿ ಪಶ್ಚಿಮ ಏರ್​ ಕಮಾಂಡ್​ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಿಸೆಂಬರ್ 29, 1982ರಂದು ಫೈಟರ್ ಪೈಲಟ್ ಆಗಿ ನಿಯೋಜಿತರಾದ ಚೌಧರಿ, 39 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ 3800 ಗಂಟೆಗಳ ಹಾರಾಟದ ಅನುಭವ ಹೊಂದಿದ್ದಾರೆ.

vr chaudhari is appointment as the next chief of the indian air force

ಭಾರತ ಸರ್ಕಾರದ ರಕ್ಷಣಾ ಇಲಾಖೆಯ ವಕ್ತಾರರು, ಏರ್​ ಮಾರ್ಷಲ್ ವಿವೇಕ್ ರಾಮ್ ಚೌಧರಿ ಅವರ ಪದೋನ್ನತಿಯನ್ನು ದೃಢಪಡಿಸಿದ್ದಾರೆ. "ಪ್ರಸ್ತುತ ವಾಯುಪಡೆಯ ಉಪ ಮುಖ್ಯಸ್ಥರಾಗಿರುವ ಏರ್​ ಮಾರ್ಷಲ್ ವಿ.ಆರ್. ಚೌಧರಿಯವರನ್ನು ವಾಯುಪಡೆಯ ಮುಖ್ಯಸ್ಥರಾಗಿ ನೇಮಿಸಲು ಸರ್ಕಾರ ನಿರ್ಧರಿಸಿದೆ. ಆರ್​.ಕೆ.ಎಸ್. ಬಧೌರಿಯಾ ಸೆ.30ರಂದು ನಿವೃತ್ತರಾಗಲಿದ್ದಾರೆ,'' ಎಂದು ತಿಳಿಸಿದ್ದಾರೆ.

English summary
The Government of India has decided to appoint Air Marshal Vivek Ram Chaudhuri as the next Chief of the Indian Air Force.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X