ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಭೀತಿ: ವರ್ಕ್ ಫ್ರಮ್ ಹೋಮ್ ಸೂಚಿಸಿದ ವೋಲ್ವೋ ಕಾರ್ ಇಂಡಿಯಾ

|
Google Oneindia Kannada News

ದೆಹಲಿ, ಮಾರ್ಚ್ 17: ದೇಶದೆಲ್ಲೆಡೆ ಕೊರೊನಾ ವೈರಸ್ ಭೀತಿ ಹೆಚ್ಚುತ್ತಿರುವ ಕಾರಣ, ವೋಲ್ವೋ ಕಾರ್ ಇಂಡಿಯಾ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಸೂಚಿಸಿದೆ. ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆ ಮುಂಜಾಗ್ರತೆ ಕ್ರಮವಾಗಿ ಕಾರ್ಮಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟಿಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸಂಸ್ಥೆ ಅಧಿಕೃತವಾಗಿ ತಿಳಿಸಿದೆ.

ಅಗತ್ಯವಾದ ಮೂಲಸೌಕರ್ಯಗಳು ಪ್ರಗತಿಯಲ್ಲಿರುವುದರಿಂದ ಮೈಕ್ರೋಸಾಫ್ಟ್ ಮತ್ತು ಸ್ಕೈಪ್ ಮೂಲಕ ಚರ್ಚೆ ಮಾಡಲಾಗುತ್ತೆ. ತಕ್ಷಣದಿಂದಲೇ ಎಲ್ಲ ಕಾರ್ಮಿಕರು ಮನೆಯಿಂದ ಕೆಲಸ ಮಾಡಿ ಎಂದು ವೋಲ್ವೋ ಕಾರ್ ಇಂಡಿಯಾ ನೌಕಕರಿಗೆ ವಿನಂತಿಸಿಕೊಂಡಿದೆ.

ಗುಡ್ ನ್ಯೂಸ್: ಕೊರೊನಾ ವೈರಸ್ ಗೆ ಲಸಿಕೆ, ಮನುಷ್ಯರ ಮೇಲೆ ಪ್ರಯೋಗ ಆರಂಭ!ಗುಡ್ ನ್ಯೂಸ್: ಕೊರೊನಾ ವೈರಸ್ ಗೆ ಲಸಿಕೆ, ಮನುಷ್ಯರ ಮೇಲೆ ಪ್ರಯೋಗ ಆರಂಭ!

ವೋಲ್ವೋ ಕಾರ್ ಇಂಡಿಯಾ ಸಂಸ್ಥೆಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಪ್ರಯಾಣಗಳನ್ನು ಕಳೆದ ಫೆಬ್ರವರಿ ತಿಂಗಳಲ್ಲಿ ನಿರ್ಬಂಧಿಸಲಾಗಿತ್ತು. ಪ್ರಸ್ತುತ ಬೆಂಗಳೂರು ಕಚೇರಿ ಹೊರತುಪಡಿಸಿ ಉಳಿದ ಎಲ್ಲ ಕಚೇರಿಗಳಲ್ಲಿಯೂ ಭೇಟಿ ರದ್ದು ಮಾಡಲಾಗಿದೆ.

Volvo Car India Asks Employees To Work From Home

ನೌಕರರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ಉದ್ದೇಶದಿಂದ ಸಾಮಾಜಿಕ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಳ್ಳಬೇಕು. ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಮತ್ತು ಅಗತ್ಯವಿದ್ದರೆ ತಕ್ಷಣದ ವೈದ್ಯಕೀಯ ಸಹಾಯವನ್ನು ಪಡೆಯಲು ಒತ್ತಾಯಿಸಿದ್ದೇವೆ ಎಂದು ವೋಲ್ವೋ ಕಾರ್ ಇಂಡಿಯಾ ತಿಳಿಸಿದೆ.

ದಂಪತಿಯ 'ಅಮರ' ಪ್ರೀತಿ ಕೊಂದ ಕೊರೊನಾ: ಶಾಪವಿಟ್ಟ ನೆಟ್ಟಿಗರುದಂಪತಿಯ 'ಅಮರ' ಪ್ರೀತಿ ಕೊಂದ ಕೊರೊನಾ: ಶಾಪವಿಟ್ಟ ನೆಟ್ಟಿಗರು

ಸ್ವೀಡಿಷ್ ಐಷಾರಾಮಿ ಕಾರು ಕಂಪನಿ ವೋಲ್ವೋ 2007 ರಲ್ಲಿ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸಿತು. ಪ್ರಸ್ತುತ ಅಹಮದಾಬಾದ್, ಬೆಂಗಳೂರು, ಚಂಡೀಘಡ್ ಚೆನ್ನೈ, ಕೊಯಮತ್ತೂರು, ದೆಹಲಿ, ನೋಯ್ಡಾ, ಹೈದರಾಬಾದ್, ಕೊಚ್ಚಿ, ಕೋಲ್ಕತಾ, ಲಕ್ನೋ ಸೇರಿದಂತೆ ದೇಶದ ಹಲವು ಪ್ರಮುಖ ನಗರಗಳಲ್ಲಿ ಶಾಖೆ ಹೊಂದಿದೆ.

English summary
Volvo Car India today announced work from home as a safety measure for its employees, considering the number of Coronavirus (COVID-19) cases have risen to over 100 in the past few days across the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X