ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಧರ ಬದುಕಲ್ಲಿ ಆಟವಾಡುತ್ತಿದೆಯಾ ದೆಹಲಿ ಅಭಿವೃದ್ಧಿ ಪ್ರಾಧಿಕಾರ?

|
Google Oneindia Kannada News

ನವದೆಹಲಿ, ಡಿಸೆಂಬರ್ 23: ಅಂಧತ್ವದ ನೋವನ್ನೂ ಬದಿಗೊತ್ತಿ, ನನ್ನಾದರೂ ಸಾಧಿಸಲೇಬೇಕೆಂಬ ತುಡಿತದೊಂದಿಗೆ ದೆಹಲಿಯ ಹಾಸ್ಟೆಲ್ ವೊಂದರಲ್ಲಿ ವಾಸವಿದ್ದ ಅಂಧರ ಬದುಕಿನೊಂದಿಗೆ ದೆಹಲಿ ಅಭಿವೃದ್ಧಿ ಪ್ರಾಧಿಕಾರ(ಡಿಡಿಎ )ವೇ ಆಟವಾಡುತ್ತಿದೆಯಾ?

ಕನಸು ಕಟ್ಟಿಕೊಂಡು ಗೋವಾಕ್ಕೆ ಬಂದಿದ್ದ ಕನ್ನಡಿಗರ ಬದುಕು ಮೂರಾಬಟ್ಟೆಕನಸು ಕಟ್ಟಿಕೊಂಡು ಗೋವಾಕ್ಕೆ ಬಂದಿದ್ದ ಕನ್ನಡಿಗರ ಬದುಕು ಮೂರಾಬಟ್ಟೆ

ಡಿ.15 ರಂದು ಏಕಾಏಕಿ ಬಂದು, 'ಹತ್ತು ನಿಮಿಷಗಳಲ್ಲಿ ನಿಮ್ಮ ಕೋಣೆಗಳನ್ನು ಖಾಲಿ ಮಾಡಿಕೊಳ್ಳಿ, ಈ ಕಟ್ಟಡವನ್ನು ಕೆಡವುತ್ತಿದ್ದೇವೆ' ಎಂದರೆ, ಆ ಅಂಧರು ಎಲ್ಲಿಗೆ ಹೋಗಬೇಕು? ಇಲ್ಲಿನ ವೀರೇಂದ್ರ ನಗರದಲ್ಲಿ ಕಳೆದ 17 ವರ್ಷಗಳಿಂದ ಇರುವ ಹಾಸ್ಟೆಲ್ ವೊಂದರಲ್ಲಿ ಸದ್ಯಕ್ಕೆ 20 ಕ್ಕೂ ಹೆಚ್ಚು ಅಂಧ ವಿದ್ಯಾರ್ಥಿಗಳು ವಾಸವಿದ್ದಾರೆ. ಆದರೆ ಯಾವ ಮುನ್ಸೂಚನೆಯೂ ಇಲ್ಲದೆ ಈ ಹಾಸ್ಟೆಲ್ ಅನ್ನು ಡಿಡಿಎ ಕೆಡವಿ ಹಾಕಿದೆ!

Visually impaired students left homeless after DDA demolition drive

ಡಿಡಿಎಯ ಈ ನಿರ್ಧಾರದಿಂದ ಕಂಗಾಲಾದ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ಟೆಂಟ್ ನೀಡಿ ಅಲ್ಲಿಯೇ ವಾಸವಿರುದಂತೆ ಹೇಳಲಾಗಿದೆ. ಆದರೆ ಈ ಚಳಿಯಲ್ಲಿ ಆ ವಿದ್ಯಾರ್ಥಿಗಳು ಟೆಂಟ್ ನಲ್ಲಿ ಬದುಕುವುದು ಹೇಗೆ? ಹಾಸ್ಟೆಲ್ ಅನ್ನು ಬೇರೆಡೆ ಸ್ಥಳಾಂತರಿಸುತ್ತೇವೆ ಎಂದು ಡಿಡಿಎ ಭರವಸೆ ನೀಡಿತ್ತು. ಆದರೆ ಹಾಸ್ಟೆಲ್ ಅನ್ನು ನೆಲಸಮಗೊಳಿಸಿ ಆಗಲೇ ಹತ್ತು ದಿನವಾಗುತ್ತ ಬಂದರೂ ಸ್ಥಳಾಂತರದ ಬಗ್ಗೆ ಮಾತೇ ಇಲ್ಲ. ಅಂಧರ ಬದುಕನ್ನು ಶಾಶ್ವತವಾಗಿ ಕತ್ತಲು ಮಾಡಲು ಹೊರಟಿರುವ ದೆಹಲಿ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಕೂಗು ಎದ್ದಿದೆ.

English summary
The Delhi Development Authority (DDA) has allegedly demolished a hostel for visually impaired students in Virendra Nagar, leaving its occupants homeless. The 17-year-old hostel housed around 20 students, who have alleged that they were not given prior information or time to gather belongings before the authority officials came to the immediate order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X