ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸದಲ್ಲಿ ಕೈಕೊಟ್ಟ ಇಂಧನ ವಿಸ್ತಾರ ವಿಮಾನ ಪೈಲಟ್ ಮಾಡಿದ್ದೇನು?

|
Google Oneindia Kannada News

ನವದೆಹಲಿ, ಜುಲೈ 17: ಮುಂಬೈನಿಂದ ದೆಹಲಿಯತ್ತ ತೆರಳುತ್ತಿದ್ದ 153 ಜನರನ್ನು ಹೊತ್ತಿದ್ದ ವಿಸ್ತಾರ ವಿಮಾನವು ಏಕಾಏಕಿ ಲಕ್ನೋನಲ್ಲಿ ಲ್ಯಾಡಿಂಗ್ ಮಾಡಿದೆ.

ಇದರಿಂದ ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ವಿಮಾನ ಸಿಬ್ಬಂದಿ ಬಂದು ಇಂಧನ ಖಾಲಿಯಾಗಿದೆ. ಹಾಗಾಗಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ . ಯಾರೂ ಗಾಬರಿಗೊಳ್ಳುವುದು ಬೇಡ ಎಂದು ಹೇಳಿದಾಗ ಸ್ವಲ್ಪ ನಿರಾಳವಾಗಿತ್ತು. ಲಕ್ನೋನಲ್ಲಿ 10 ನಿಮಿಷಗಳ ಲ್ಯಾಂಡಿಂಗ್ ಬಳಿಕ ಇಂಧನ ಭರ್ತಿ ಮಾಡಿಕೊಂಡು ಮತ್ತೆ ಹಾರಾಟ ನಡೆಸಿತ್ತು.

ಏರ್ ಕೆನಡಾ ವಿಮಾನ ತುರ್ತು ಲ್ಯಾಂಡಿಂಗ್:35 ಪ್ರಯಾಣಿಕರಿಗೆ ಗಾಯಏರ್ ಕೆನಡಾ ವಿಮಾನ ತುರ್ತು ಲ್ಯಾಂಡಿಂಗ್:35 ಪ್ರಯಾಣಿಕರಿಗೆ ಗಾಯ

ಕೇವಲ ಇಂಧನ ಕಡಿಮೆ ಇರುವುದು ಮಾತ್ರವಲ್ಲ ಹವಾಮಾನ ವೈಪರಿತ್ಯವೂ ಒಂದು ಕಾರಣವಾಗಿತ್ತು. ಹಾಗಾಗಿ 153 ಪ್ರಯಾಣಿಕರಿದ್ದ ವಿಮಾನವನ್ನು ಲಕ್ನೋನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿಸಲಾಯಿತು.

Vistara Flight emergency landing in Lucknow

ಇದ್ದ ಇಂಧನದಲ್ಲಿ ಇನ್ನೂ 10 ನಿಮಿಷಗಳ ಕಾಲ ಮಾತ್ರ ವಿಮಾನ ಹಾರಾಟ ನಡೆಸಬಹುದಿತ್ತು. 300 ಕೆಜಿ ತೂಕ ಇಂಧನ ಹೊಂದಿದೆ ಹಾಗಾಗಿ ಹಾರಾಟ ನಡೆಸಲು ಕಷ್ಟವಾಗುತ್ತಿತ್ತು. ಹಾಗಾಗಿ ತಕ್ಷಣವೇ ಪೈಲಟ್ 'ಫ್ಯೂಲ್ ಮೇಡೇ' ಘೋಷಿಸಿದರು.

ಏರ್ ಟ್ರಾಫಿಕ್ ನಿಯಂತ್ರಿಸಲು ತಕ್ಷಣ ಸೂಚನೆ ನೀಡಲಾಯಿತು. ಆಸುಪಾಸು ಬೇರೆ ವಿಮಾನಗಳು ಬರದಂತೆ ತಡೆಯಲು ಏರ್ ಕಂಟ್ರೋಲ್ ರೂಮ್‌ಗೆ ತಕ್ಷಣವೇ ಮಾಹಿತಿ ನೀಡಲಾಯಿತು. ಇಂಧನ ಕೊರತೆಯಾಗಿದ್ದರಿಂದ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಲಕ್ನೋನಲ್ಲಿ ಇಳಿಸಲಾಯಿತು. ಖಾನ್‌ಪುರ ಅಥವಾ ಪ್ರಯಾಗ್‌ರಾಜ್‌ನಲ್ಲಿ ಇಳಿಸುವ ಸಾಧ್ಯತೆಗಳೂ ಹೆಚ್ಚಿದ್ದವು.

ಕೊನೆಗೂ ಭಾರತಕ್ಕೆ ತೆರೆದುಕೊಂಡ ಪಾಕಿಸ್ತಾನದ ಏರೋಸ್ಪೇಸ್ ಕೊನೆಗೂ ಭಾರತಕ್ಕೆ ತೆರೆದುಕೊಂಡ ಪಾಕಿಸ್ತಾನದ ಏರೋಸ್ಪೇಸ್

ಮಾರ್ಗ ಮಧ್ಯದಲ್ಲಿ ಲಕ್ನೋನಲ್ಲಿ ಹವಾಮಾನ ಸುಧಾರಿಸಿದೆ.ಅಲ್ಲಿಯೇ ಲ್ಯಾಂಡಿಂಗ್ ಮಾಡಿದರೆ ಉತ್ತಮ ಎನ್ನುವ ಸೂಚನೆಯೊಂದಿಗೆ ಪೈಲಟ್ ವಿಮಾನವನ್ನು ಲಕ್ನೋನಲ್ಲಿ ಲ್ಯಾಂಡಿಂಗ್ ಮಾಡಿಸಿದ್ದರು.

ಕಾನೂನು ಪ್ರಕಾರ ವಿಮಾನ ಹಾರಾಟಕ್ಕೂ ಮುನ್ನ ಇಂಧನವನ್ನು ಪರೀಕ್ಷಿಸಿಕೊಳ್ಳಲೇ ಬೇಕು. ಆದರೂ ಅದು ಹೇಗೆ ಇಂಧನ ಕೊರತೆ ಕಾಣಿಸಿತು ಎನ್ನುವ ಕುರಿತು ತನಿಖೆ ನಡೆಯುತ್ತಿದೆ.

ಇನ್ನು ಮುಂದಾದರೂ ವಿಮಾನ ಹಾರಾಟಕ್ಕೂ ಮುನ್ನ ಇಂಧನವನ್ನು ಪರೀಕ್ಷೆ ಮಾಡುವುದು ಮರೆಯಬಾರದು. ಯಾಕೆಂದರೆ ಪೈಲಟ್ ಕೈಯಲ್ಲಿ ನೂರಾರು ಪ್ರಯಾಣಿಕರ ಜೀವ ಅಡಗಿರುತ್ತದೆ.

ಇತ್ತೀಚೆಗಷ್ಟೇ ಏರ್ ಕೆನಡಾದ ವಿಮಾನವೊಂದು ಮೋಡಗಳ ರಾಶಿಗೆ ಡಿಕ್ಕಿ ಹೊಡೆದ ಪರಿಣಾಮ 35 ಪ್ರಯಾಣಿಕರು ಸಣ್ಣಪುಟ್ಟ ಗಾಯಕ್ಕೊಳಗಾಗಿದ್ದರು.

ಎಸಿ 33 ವಿಮಾನವು ಬ್ಯಾಂಕೋವರ್‌ನಿಂದ ಸಿಡ್ನಿಗೆ ಹೊರಟಿತ್ತು. ಹವಾಯಿ ದ್ವೀಪದಿಂದ ಹೊರಟ ಎರಡು ಗಂಟೆ ಅವಧಿಯಲ್ಲಿ ಮೋಡಗಳಿಗೆ ವಿಮಾನ ಡಿಕ್ಕಿ ಹೊಡೆದಿತ್ತು.

ಪರಿಣಾಮವಾಗಿ ಪ್ರಯಾಣಿಕರು ವಿಮಾನದಲ್ಲಿಯೇ ಕೂತ ಸೀಟಿನಿಂದ ಎದ್ದು ಹಾರಿ ಬಿದ್ದಿದ್ದರು. ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ.

ಇದರಿಂದ 269ಪ್ರಯಾಣಿಕರಿದ್ದ ವಿಮಾನದಲ್ಲಿ 35 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ವಿಮಾನದಲ್ಲಿ 15 ಮಂದಿ ಸಿಬ್ಬಂದಿಗಳಿದ್ದರು.

English summary
Vistara Flight emergency landing in Lucknow for 10 minutes because of Fuel remaining and bad weather condition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X