ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಚುವಲ್‌ ಶೃಂಗಸಭೆ: 7 ಒಪ್ಪಂದಗಳಿಗೆ ಸಹಿ ಮಾಡಿದ ಭಾರತ-ಆಸ್ಟ್ರೇಲಿಯಾ

|
Google Oneindia Kannada News

ವರ್ಚುವಲ್‌ ಶೃಂಗಸಭೆ ಮೂಲಕ ಭೇಟಿಯಾಗಿದ್ದ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಇಂದು ಪ್ರಮುಖ ಏಳು ಒಪ್ಪಂದಗಳಿಗೆ ಸಹಿ ಹಾಕಿದರು.

Recommended Video

ಸಾಮಾಜಿಕ ಅಂತರ ಕಾಯ್ದುಕೊಂಡು ಡಾನ್ಸ್ ಮಾಡಿದ ಕ್ವಾರಂಟೈನ್ ಜನ | Quarantine Dance

ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ವರ್ಚುವಲ್‌ ಶೃಂಗಸಭೆಯಲ್ಲಿ ಭಾಗವಹಿಸಿ ಮಾತುಕತೆ ನಡೆಸಿದರು. ಆ ನಂತರ ಮ್ಯೂಚುಯಲ್ ಲಾಜಿಸ್ಟಿಕ್ಸ್ ಸಪೋರ್ಟ್ ಅರೇಂಜ್‌ಮೆಂಟ್‌ (ಎಂಎಲ್ಎಸ್ಎ) ಒಪ್ಪಂದಕ್ಕೆ ಸಹಿ ಹಾಕಿದರು. ಪ್ರಮುಖವಾಗಿ ಉಭಯ ರಾಷ್ಟ್ರಗಳ ಸೇನೆ, ಮಿಲಿಟರಿ ನೆಲೆಗಳ ಹಂಚಿಕೆ, ಸಂಗ್ರಹಣೆ, ಸೌಲಭ್ಯಗಳ ಬಳಕೆ, ತರಬೇತಿ ಸೇವೆಗಳು, ಬಿಡಿಭಾಗಗಳು, ದುರಸ್ತಿ, ನಿರ್ವಹಣೆ, ವಿಮಾನ ನಿಲ್ದಾಣ ಮತ್ತು ಬಂದರು ಸೇವೆಗಳನ್ನು ಪರಸ್ಪರ ಒದಗಿಸಲು ಒಪ್ಪಂದ ಮಾಡಿಕೊಂಡಿವೆ.

ಬಿಸಿ ಬಿಸಿ ಸಮೋಸಾ, ಮಾವಿನ ಕಾಯಿ ಚಟ್ನಿ ತಯಾರಿಸಿದ ಆಸ್ಟ್ರೇಲಿಯಾ ಪಿಎಂ!ಬಿಸಿ ಬಿಸಿ ಸಮೋಸಾ, ಮಾವಿನ ಕಾಯಿ ಚಟ್ನಿ ತಯಾರಿಸಿದ ಆಸ್ಟ್ರೇಲಿಯಾ ಪಿಎಂ!

ಈ ಎಲ್ಲಾ ಒಪ್ಪಂದಗಳ ಜೊತೆಗೆ ವ್ಯಾಪಾರ, ರಕ್ಷಣಾ, ಶಿಕ್ಷಣ ಮತ್ತು ಕೋವಿಡ್‌-19 ಬಿಕ್ಕಟ್ಟು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆದಿದೆ. ಭಾರತ ಮತ್ತು ಆಸ್ಟ್ರೇಲಿಯಾದ ಸಶಸ್ತ್ರ ಪಡೆಗಳಿಗೆ ಆಹಾರ, ನೀರು, ಸಾರಿಗೆ, ತೈಲ, ಬಟ್ಟೆ, ಸಂವಹನ ಮತ್ತು ವೈದ್ಯಕೀಯ ಸೇವೆಗಳನ್ನು ಒದಗಿಸುವ ಮೂಲಕ ಪರಸ್ಪರ ಸಹಾಯ ಮಾಡಲು ಎಂಎಲ್ಎಸ್ಎ (mutual logistic support agreement) ಸಹಕಾರಿಯಾಗಲಿದೆ. ಭಾರತ ಈಗಾಗಲೇ ಯುಎಸ್, ಫ್ರಾನ್ಸ್ ಮತ್ತು ಸಿಂಗಾಪುರದೊಂದಿಗೆ ಇದೇ ರೀತಿಯ ಒಪ್ಪಂದಗಳಿಗೆ ಸಹಿ ಹಾಕಿದೆ.

Virtual Bilateral Meet: India And Australia Sign 7 Agreement

ಈ ಸಂದರ್ಭದಲ್ಲಿ ಮಾರಿಸನ್‌ ಅವರು ಮೋದಿ ಅವರ ನಾಯಕತ್ವಕ್ಕೆ ಧನ್ಯವಾದ ಅರ್ಪಿಸಿದರು. ಜಿ-20, ಇಂಡೋ-ಪೆಸಿಫಿಕ್‌ ಪ್ರದೇಶದ ವಿಚಾರಗಳಲ್ಲಿ ಮೋದಿ ಅವರು ವಹಿಸಿದ ಪಾತ್ರದ ಬಗ್ಗೆ ಮಾರಿಸನ್‌ ಶ್ಲಾಘಿಸಿದರು. ಅಂತೆಯೇ ಭದ್ರತಾ ಮತ್ತು ನೌಕಾ ಒಪ್ಪಂದಗಳ ಮೂಲಕ ಆಸ್ಟ್ರೇಲಿಯಾ-ಭಾರತ ನಡುವಿನ ಸ್ನೇಹ ಸಂಬಂಧ ಮತ್ತಷ್ಟು ಗಾಢವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಈ ಸಹಯೋಗದಿಂದ ನಾವು ಇನ್ನೂ ಉತ್ತಮವಾದದನ್ನು ಸಾಧಿಸಲಿದ್ದೇವೆ ಎಂದು ಹೇಳಿದರು.

ಭಾರತ ಆಸ್ಟ್ರೇಲಿಯಾ ವರ್ಚುವಲ್ ದ್ವಿಪಕ್ಷೀಯ ಸಭೆ: ಇದೇ ಮೊದಲುಭಾರತ ಆಸ್ಟ್ರೇಲಿಯಾ ವರ್ಚುವಲ್ ದ್ವಿಪಕ್ಷೀಯ ಸಭೆ: ಇದೇ ಮೊದಲು

ಚೀನಾದ ಉಪಟಳ ಹೆಚ್ಚಾಗಿದ್ದರಿಂದ ಆಸ್ಟ್ರೇಲಿಯಾದೊಂದಿಗಿನ ಈ ಮಾತುಕತೆಗೆ ಭಾರತ ಹೆಚ್ಚು ಒತ್ತು ನೀಡಿತ್ತು.

English summary
India and Australia on Thursday elevated their ties to a comprehensive strategic partnership sing 7 agreement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X