ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸರಿಗೆ ಬಂದೂಕು ತೋರಿಸಿದ್ದ ಶಾರುಖ್‌ ಪಠಾಣ್‌ಗೆ ಭರ್ಜರಿ ಸ್ವಾಗತ

|
Google Oneindia Kannada News

ದೆಹಲಿ, ಮೇ 27: ದೆಹಲಿಯಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆ ವೇಳೆ ಪೊಲೀಸ್ ಸಿಬ್ಬಂದಿಗೆ ಗನ್ ತೋರಿಸಿದ ಆರೋಪ ಹೊತ್ತಿದ್ದ ಶಾರುಖ್ ಪಠಾಣ್ ನಾಲ್ಕು ಗಂಟೆಗಳ ಅವಧಿಗೆ ಪೆರೋಲ್ ಪಡೆಯುತ್ತಿದ್ದಂತೆ ಅವನ ಬೆಂಬಲಿಗರು ಸ್ವಾಗತಿಸಿದ ವಿಡಿಯೋ ವೈರಲ್ ಆಗಿದೆ.

ತನ್ನ ತಂದೆ ಅಸ್ವಸ್ಥರಾಗಿರುವ ಕಾರಣ ನೀಡಿ ನ್ಯಾಯಾಲಯದಿಂದ ಪೆರೋಲ್ ಪಡೆದು ಮೇ 23ರಂದು ಜೈಲಿನಿಂದ ಹೊರಬಂದ ಶಾರುಖ್ ಪಠಾಣ್ 65 ವರ್ಷದ ತಂದೆಯನ್ನು ಭೇಟಿಯಾಗಲು ತನ್ನ ನಿವಾಸಕ್ಕೆ ಆಗಮಿಸಿದ್ದ. ಈ ವೇಳೆ ಆತನ ಬೆಂಬಲಿಗರು ಭರ್ಜರಿ ಸ್ವಾಗತ ನೀಡಿದ್ದಾರೆ.

'ಪೌರತ್ವ ಸಿಗಲಿಲ್ಲ, ನಾವು ಭಾರತದಲ್ಲಿ ಇರಲ್ಲ'; ದೇಶ ಬಿಟ್ಟು ಪಾಕಿಸ್ತಾನದ ಹೊರಟವರ ಕಥೆ'ಪೌರತ್ವ ಸಿಗಲಿಲ್ಲ, ನಾವು ಭಾರತದಲ್ಲಿ ಇರಲ್ಲ'; ದೇಶ ಬಿಟ್ಟು ಪಾಕಿಸ್ತಾನದ ಹೊರಟವರ ಕಥೆ

ಎಎನ್‌ಐ ಸುದ್ಧಿ ಸಂಸ್ಥೆ ಈ ವೀಡಿಯೋ ಹಂಚಿಕೊಂಡಿದ್ದು, ಶಾರುಖ್ ಪಠಾಣ್ ಸುತ್ತ ಬೆಂಬಲಿಗರಿ ಸುತ್ತುವರೆದಿರುವುದನ್ನು ಕಾಣಬಹುದು, ಇನ್ನು ಶಾರುಖ್ ಪಠಾಣ್ ವಾಪಸ್ ಬರುವಂತೆ ಹುರಿದುಂಬಿಸುತ್ತಿದ್ದು, ಆತನ ಪರವಾಗಿ ಜನ ಘೋಷಣೆಗಳನ್ನು ಕೂಗಿದ್ದಾರೆ. ತನ್ನ ನಿವಾಸದ ಏರಿಯಾಗೆ ಪ್ರವೇಶಿಸುತ್ತಿದ್ದಂತೆ ಜನ ಆತನನ್ನು ಮನೆಯವರೆಗೂ ಹಿಂಬಾಲಿಸಿದ್ದಾರೆ.

 ಪೊಲೀಸರಿಗೆ ಗನ್ ತೋರಿಸಿದ್ದ ಪಠಾಣ್

ಪೊಲೀಸರಿಗೆ ಗನ್ ತೋರಿಸಿದ್ದ ಪಠಾಣ್

2020ರ ಮಾರ್ಚ್‌ 3ರಂದು ಈಶಾನ್ಯ ದೆಹಲಿಯಲ್ಲಿ ಸಿಎಎ ವಿರೋಧಿಸಿ ನಡೆಯುತ್ತಿದ್ದ ಹಿಂಸಾಚಾರದ ವೇಳೆ ಪೊಲೀಸ್ ಅಧಿಕಾರಿ ದೀಪಕ್ ದಹಿಯಾಗೆ ಗುರಿಯಿಟ್ಟು ಬಂದೂಕು ತೋರಿಸಿದ್ದ ಪ್ರಕರಣದಲ್ಲಿ ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು.

ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರದ ಸಂದರ್ಭದಲ್ಲಿ ಗುಂಡು ಹಾರಿಸಿದ ಆರೋಪಿಯು ಕೆಂಪು ಟೀ ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿರುವ ಫೋಟೋ ವೈರಲ್ ಆಗಿತ್ತು. ಈ ಘಟನೆ ದೇಶಾದ್ಯಂತ ವ್ಯಾಪಕ ಸುದ್ದಿಯಾಗಿತ್ತು. ಆದರೆ ಆತನ ವಕೀಲರು ಪಠಾಣ್‌ಗೆ ಪೋಲೀಸರನ್ನು ಕೊಲ್ಲುವ ಉದ್ದೇಶವಿರಲಿಲ್ಲ ಮತ್ತು ಆತ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ ಎಂದು ವಾದಿಸಿದ್ದರು.

 ಪಠಾಣ್‌ಗೆ ಮಧ್ಯಂತರ ಜಾಮೀನು ನಿರಾಕರಣೆ

ಪಠಾಣ್‌ಗೆ ಮಧ್ಯಂತರ ಜಾಮೀನು ನಿರಾಕರಣೆ

ಮಾರ್ಚ್‌ನಲ್ಲಿ ಶಾರುಖ್ ಪಠಾಣ್‌ 20 ದಿನಗಳ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ. ಸಾರ್ವಜನಿಕ ಸಾಕ್ಷಿಯನ್ನು ಇನ್ನೂ ಪರಿಶೀಲನೆ ನಡೆಸಬೇಕಾಗಿದೆ ಎಂದು ಕಾರಣ ನೀಡಿ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.

ತನಗೆ ಜಾಮೀನು ನೀಡುವಂತೆ ಈ ಹಿಂದೆ ದೆಹಲಿ ಹೈಕೋರ್ಟ್‌ಗೆ ಮನವಿ ಮಾಡಿದ್ದ. 65 ವರ್ಷದ ತಂದೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ತಂದೆಯನ್ನು ನೋಡಿಕೊಳ್ಳಲು, ತಂದೆಯ ಆರೈಕೆ ಮಾಡಲು ಯಾರೂ ಇಲ್ಲ. ಹೀಗಾಗಿ ಮಾನವೀಯತೆ ಆಧಾರದಲ್ಲಿ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದ.

 ಕೋವಿಡ್ ಕಡಿಮೆಯಾದ ಬಳಿಕ ಸಿಎಎ ಜಾರಿ: ಅಮಿತ್ ಶಾ ಕೋವಿಡ್ ಕಡಿಮೆಯಾದ ಬಳಿಕ ಸಿಎಎ ಜಾರಿ: ಅಮಿತ್ ಶಾ

 ತಂದೆಯನ್ನು ಭೇಟಿಯಾಗಲು ಪೆರೋಲ್ ಪಡೆದಿದ್ದ

ತಂದೆಯನ್ನು ಭೇಟಿಯಾಗಲು ಪೆರೋಲ್ ಪಡೆದಿದ್ದ

ಮಾರ್ಚ್‌ 22ರಂದು ತನ್ನ ತಂದೆಯ ಆಂಜಿಯೋಗ್ರಫಿ ಚಿಕಿತ್ಸೆ ವೇಳೆ ಆಸ್ಪತ್ರೆಯಲ್ಲಿ ಹಾಜರಿರಲು ಕಸ್ಟಡಿ ಪೆರೋಲ್ ನೀಡಲಾಗಿತ್ತು. ಆದರೆ ಚಿಕಿತ್ಸೆ ವೇಳೆ ಶಾರುಖ್ ಪಠಾಣ್‌ಗೆ ತನ್ನ ತಂದೆಯನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಇದೇ ಕಾರಣ ನೀಡಿ ತನ್ನ ತಂದೆಗೆ ಭೇಟಿಯಾಗಲು ಕೋರಿ ಹೊಸ ಅರ್ಜಿ ಸಲ್ಲಿಸಿದ್ದ 'ಮಾನವೀಯತೆ' ಆಧಾರದ ಮೇಲೆ ಮೇ 23ರಂದು ನ್ಯಾಯಾಲಯ 4 ಗಂಟೆಗಳ ಕಸ್ಟಡಿ ಪೆರೋಲ್ ನೀಡಿತ್ತು.

"ಈ ಸಂದರ್ಭಗಳಲ್ಲಿ, ನ್ಯಾಯಾಲಯವು ಮಾನವೀಯತೆ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಬಯಸುತ್ತದೆ ಮತ್ತು ಹೀಗಾಗಿ, ಪ್ರಸ್ತುತ ಅರ್ಜಿಯನ್ನು ಷರತ್ತುಗಳ ಮೇಲೆ ಅನುಮತಿಸಲಾಗಿದೆ. ಅದರಂತೆ, ಅರ್ಜಿದಾರ/ ಆರೋಪಿ ಶಾರುಖ್ ಪಠಾಣ್‌ಗೆ ಮೇ 23ಕ್ಕೆ ನಾಲ್ಕು ಗಂಟೆಗಳ ಕಾಲ ಕಸ್ಟಡಿ ಪೆರೋಲ್ ಅನ್ನು ನೀಡಲಾಗುತ್ತದೆ. ನಿಯಮಗಳ ಪ್ರಕಾರ ಅವನನ್ನು ನಿವಾಸಕ್ಕೆ ಕರೆದೊಯ್ಯುವ ಮತ್ತು ಅವನು ಹೇಳಿದ ಮನೆಯಲ್ಲಿ ಅವನ ಹೆತ್ತವರನ್ನು ಭೇಟಿಯಾಗಲು ಅನುಮತಿಸಬೇಕು, "ಎಂದು ನ್ಯಾಯಾಲಯ ಹೇಳಿತ್ತು.

ನ್ಯಾಯಾಲಯದ ಸೂಚನೆ ಉಲ್ಲಂಘಿಸಿದ ಶಾರುಖ್

ಪೆರೋಲ್ ಮೇಲೆ ಪೊಲೀಸ್‌ ಸಿಬ್ಬಂದಿ ಸಮ್ಮುಖದಲ್ಲಿ ತಂದೆಯನ್ನು ಮತ್ತು ಕುಟುಂಬಸ್ಥರನ್ನು ಭೇಟಿ ಮಾಡಲು ಮಾತ್ರ ನ್ಯಾಯಾಲಯ ಅವಕಾಶ ನೀಡಿತ್ತು. ಆದರೆ ಪೆರೋಲ್ ಮೇಲೆ ಸ್ವಗ್ರಾಮಕ್ಕೆ ಆಗಮಿಸಿದ ಶಾರುಕ್‌ಗೆ ಸ್ಥಳೀಯರು ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ.

ವೈರಲ್ ಆಗಿರುವ ವೀಡಿಯೋದಲ್ಲಿ ಪಠಾಣ್ ಸುತ್ತ ಅನೇಕ ಜನ ನೆರೆದಿದ್ದಾರೆ. ಆತನ ಪರ ಘೋಷಣೆಗಳನ್ನು ಕೂಗಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಕೂಡ ಅಸಹಾಯಕರಾಗಿರುವುದನ್ನು ಕಾಣಬಹುದು.

English summary
Shahrukh Pathan, who was accused of pointing a gun at police personnel during a CAA protest in Delhi, was greeted by his supporters as he received parole for four hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X