• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವೈರಲ್ ವಿಡಿಯೋ: ಮೋದಿ ಫಿಟ್ನೆಸ್ ಆಡಿಕೊಂಡು ನಕ್ಕ ರಾಹುಲ್ ಗಾಂಧಿ

|

ನವದೆಹಲಿ, ಜೂನ್ 14: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ ಫಿಟ್ನೆಸ್ ವಿಡಿಯೋವನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಆಡಿಕೊಂಡು ನಕ್ಕ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ದೆಹಲಿಯ ಐಷಾರಾಮಿ ಹೊಟೇಲ್ ವೊಂದರಲ್ಲಿ ಜೂನ್ 13 ರಂದು ಸಂಜೆ ಅವರು ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಹಲವು ನಾಯಕರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕಮ್ಯುನಿಸ್ಟ್ ಪಕ್ಷದ ಮುಖಂಡ ಸೀತಾರಾಮ್ ಯಚೂರಿ, ಮಾಜಿ ರಾಷ್ಟ್ರಪತಿಗಳಾದ ಪ್ರತಿಭಾ ಪಾಟೀಲ್ ಮತ್ತು ಪ್ರಣಬ್ ಮುಖರ್ಜಿ ಅವರ ಎದುರಲ್ಲೇ ರಾಹುಲ್ ಗಾಂಧಿಯವರು ಮೋದಿಯವರ ವಿಡಿಯೋವನ್ನು 'ವಿಲಕ್ಷಣ, ಹಾಸ್ಯಾಸ್ಪದ' ಎಂದು ವ್ಯಂಗ್ಯಮಾಡಿ ನಕ್ಕರು.

ಮೋದಿ ಫಿಟ್ನೆಸ್ ವಿಡಿಯೋ ನೋಡಿ ಮನಸಾರೆ ನಕ್ಕ ರಾಹುಲ್ ಗಾಂಧಿ!

ಅವರ ಮಾತಿಗೆ ಜೊತೆಯಲ್ಲಿದ್ದ ಎಲ್ಲರೂ ನಕ್ಕರಾದರೂ, ಪ್ರಣಬ್ ಮುಖರ್ಜಿ ಅವರು ಮಾತ್ರ ಸ್ವಲ್ಪವೂ ನಗದೆ ಗಂಭೀರ ವದನರಾಗಿಯೇ ಇದ್ದಿದ್ದು ವಿಶೇಷ. ಇತ್ತೀಚೆಗಷ್ಟೆ ಮುಖರ್ಜಿ ಅವರು ಆರೆಸ್ಸೆಸ್ ನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂದಿದ್ದು ಕಾಂಗ್ರೆಸ್ ನಾಯಕರ ಹುಬ್ಬೇರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ವೈರಲ್ ವಿಡಿಯೋ

ಈ ವೈರಲ್ ವಿಡಿಯೋವನ್ನು ಕಾಂಗ್ರೆಸ್ಸಿನ ಬಂಡಾಯ ನಾಯಕ ಶೆಹನ್ವಾಜ್ ಪೂನಾವಾಲಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಫಿಟ್ನೆಸ್ ಕುರಿತು ಆರಂಭವಾಗಿದ್ದ ಟ್ವಿಟ್ಟರ್ ಅಭಿಯಾನದಲ್ಲಿ ಹಮ್ ಫಿಟ್ ತೋ ಇಂಡಿಯಾ ಫಿಟ್ ಎಂಬ ಹ್ಯಾಶ್ ಟ್ಯಾಗ್ ನಲ್ಲಿ ನರೇಂದ್ರ ಮೋದಿಯವರು ಫಿಟ್ನೆಸ್ ವಿಡಿಯೋ ಅಪ್ಲೋಡ್ ಮಾಡಿದ್ದರು. ಮತ್ತು ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಹಲವರಿಗೆ ಫಿಟ್ನೆಸ್ ಚಾಲೆಂಜ್ ಎಸೆದಿದ್ದರು.

ಇದು ಅವರ ಅಪ್ರಬುದ್ಧತೆ!

"ಯಾಕೆ? ಯಾಕೆ ಎಲ್ಲರೂ ರಾಹುಲ್ ಗಾಂಧಿ ಅವರಿಂಮದ ಪ್ರಬುದ್ಧತೆ ಬಯಸುತ್ತೀರಿ? ಇಡೀ ವಿಶ್ವವೂ ಭಾರತಕ್ಕೆ ಸಾಕಷ್ಟು ಗೌರವ ನೀಡುತ್ತಿರುವುದಕ್ಕೆ ಯೋಗವೂ ಒಂದು ಕಾರಣ. ಆದರೆ ರಾಹುಲ್ ಗಾಂಧಿ ಅವರಿಗೆ ಅದರ ಮಹತ್ವ ಗೊತ್ತಿಲ್ಲ ಎಂದರೆ ಅದು ಅವರ ತಪ್ಪು, ಭಾರತದ ಜನರಿಗೆ ಗೊತ್ತಾಗುತ್ತಿದೆ ಅವರು ಎಷ್ಟು ಅಪ್ರಬುದ್ಧರು ಎಂಬುದು" ಎಂದು ಈ ವಿಡಿಯೋಕ್ಕೆ ನೇಹಾ ಕುಮಾರಿ ಎಂಬುವವರು ಪ್ರತಿಕ್ರಿಯೆ ನೀಡಿದ್ದಾರೆ.

ರಾಹುಲ್ ಗಾಂಧಿ ಹೇಳಿದ್ದು ಸರಿಯಾಗಿದೆ!

ನಮ್ಮ ದೇಶದಲ್ಲಿ ಚರ್ಚೆ ನಡೆಸುವುದಕ್ಕೆ ಸಾಕಷ್ಟು ಸಮಸ್ಯೆಗಳಿವೆ. ರೈತರ ಸಮಸ್ಯೆ, ಭಯೋತ್ಪಾದನೆ, ಸೈನಿಕರ ಸಾವು ಇತ್ಯಾದಿ. ಆದರೆ ನಮ್ಮ ಪ್ರಧಾನಿ ತಮ್ಮ ಭಕ್ತರನ್ನು ಮೂರ್ಖರನ್ನಾಗಿ ಮಾಡುವುದಕ್ಕೆ ಫಿಟ್ನೆಸ್ ವಿಡಿಯೋ ಹಾಕಿದ್ದಾರೆ, ರಾಹುಲ್ ಗಾಂಧಿ ಹೇಳಿದ್ದು ಸರಿಯಾಗಿದೆ. ಇದು ವಿಲಕ್ಷಣವೇ ಎಂದು ರಾಹುಲ್ ಗಾಂದಿಯವರನ್ನು ಬೆಂಬಲಿಸಿದ್ದಾರೆ ಸಂಜುಕ್ತಾ ಬಸು.

ರಾಹುಲ್ ಹಾಗೆ ಹೇಳಿದ್ದೇಕೆ ಗೊತ್ತಾ?

ರಾಹುಲ್ ಗಾಂಧಿ ಅವರು ನರೇಂದ್ರ ಮೋದಿಯವರ ಫಿಟ್ನೆಸ್ ಚಾಲೆಂಜ್ ಅನ್ನು 'ವಿಲಕ್ಷಣ' ಎಂದಿದ್ದಕ್ಕೆ ಕಾರಣವೇನು ಗೊತ್ತೆ? ಅವರಿಗೆ ಈಗಲೂ 'ಪಂಚತತ್ವ' ಎಂಬುದನ್ನು ಸರಿಯಾಗಿ ಉಚ್ಚಾರ ಮಾಡಲು ಬರುವುದಿಲ್ಲ, ಅದಕ್ಕೇ! ಎಂದಿದ್ದಾರೆ ಬಿಜೆಪಿಯ ಅಮಿತ್ ಮಾಳವೀಯ.

ಸೈನಿಕರಿಗೆ ಸಂತಾಪ ಸೂಚಿಸಲು ಮೋದಿಗೆ ಸಮಯವಿಲ್ಲ!

ಫಿಟ್ನೆಸ್ ವಿಡಿಯೋ ಚಿತ್ರೀಕರಿಸಲು ಪ್ರಧಾನಿ ಮೋದಿಯವರಿಗೆ 2-3 ಗಂಟೆ ಸಮಯವಿರುತ್ತದೆ. ಆದರೆ ಗಡಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಲು ಸಮಯವಿರುವುದಿಲ್ಲ ಎಂದು ಅಣಕಿಸಿದ್ದಾರೆ ತಪನ್ ಶರ್ಮಾ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A video of Rahul Gandhi's Iftar party in a luxury hotel in Delhi, in which he is making humour of PM Modi's fitness video becomes viral on social media now.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more