ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪಾಟ್ ಫಿಕ್ಸಿಂಗ್ : ವಿಜಯ್ ಮಲ್ಯ, ಪವಾರ್ ಕೂಡಾ ಭಾಗಿ

By Mahesh
|
Google Oneindia Kannada News

ಮುಂಬೈ, ಫೆ.25: ಇಂಡಿಯನ್ ಪ್ರಿಮಿಯರ್ ಲೀಗ್ ನ ವಿವಾದಿತ ತಂಡ ಚೆನ್ನೈ ಸೂಪರ್ ಕಿಂಗ್ಸ್ ಒಡೆಯ ಗುರುನಾಥ್ ಮೈಯಪ್ಪನ್ ಅವರನ್ನು ರಕ್ಷಿಸಲು ನಾಯಕ ಎಂಎಸ್ ಧೋನಿ ಹಾಗೂ ಎನ್ ಶ್ರೀನಿವಾಸನ್ ಆವರು ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದ ಬೆನ್ನಲ್ಲೇ ಇನ್ನಷ್ಟು ಸ್ಫೋಟಕ ಮಾಹಿತಿಗಳು ಹೊರ ಬಿದ್ದಿವೆ. ಬುಕ್ಕಿಗಳ ನಂಟು ಹೊಂದಿ ವಿಚಾರಣೆಗೊಳಪಡುತ್ತಿರುವ ನಟ ವಿಂದೂ ದಾರಾ ಸಿಂಗ್ ಅನೇಕ ಪ್ರಮುಖ ಹೆಸರುಗಳನ್ನು ಬಹಿರಂಗಗೊಳಿಸಿದ್ದಾರೆ.

ಬೆಟ್ಟಿಂಗ್ ಹಾಗೂ ಮ್ಯಾಚ್ ಫಿಕ್ಸಿಂಗ್ ನಲ್ಲಿ ಉದ್ಯಮಿ ವಿಜಯ್ ಮಲ್ಯ ಹಾಗೂ ಕೇಂದ್ರ ಸಚಿವ ಶರದ್ ಪವಾರ್ ಇದ್ದಾರೆ. ಮಿಕ್ಕವರಿಗೆ(ಫ್ರಾಂಚೈಸಿ ಮಾಲೀಕರು) ಅಷ್ಟಾಗಿ ಈ ಬಗ್ಗೆ ಅರಿವಿಲ್ಲ ಎಂದು ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿರುವ ಬಾಲಿವುಡ್ ನಟ ವಿಂದೂ ದಾರಾ ಸಿಂಗ್ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾರೆ.

ಮಲ್ಯ ಚಾಣಾಕ್ಷ: ವಿಜಯ್ ಮಲ್ಯ ಅವರು ತಮ್ಮ ಇತರೆ ಸಂಸ್ಥೆಗಳಲ್ಲಿ ನಷ್ಟ ಅನುಭವಿಸಿದರೂ ಐಪಿಎಲ್ ನಿಂದ ದುಡ್ಡು ಮಾಡುವುದು ಅವರಿಗೆ ಚೆನ್ನಾಗಿ ಗೊತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವಲ್ಲದೆ ಇನ್ನೂ ಅನೇಕ ತಂಡಗಳ ಮೇಲೆ ಹಣ ಹೂಡಿಕೆ ಮಾಡಿದ್ದಾರೆ. ಐಪಿಎಲ್ ಪಂದ್ಯಗಳನ್ನು ಫಿಕ್ಸ್ ಮಾಡುವ ಕನಿಷ್ಠವೆಂದರೂ 100-200 ಕೋಟಿ ರು ಗಳಿಸುತ್ತಿದ್ದಾರೆ.

ಐಪಿಎಲ್ ಆರಂಭಿಸಿದ ಲಲಿತ್ ಮೋದಿ ಅವರು ಭಾರತ ಬಿಟ್ಟು ದಕ್ಷಿಣ ಅಫ್ರಿಕಾಕ್ಕೆ ಟೂರ್ನಿಯನ್ನು ಕರೆದೊಯ್ದು ಯಶಸ್ವಿಗೊಳಿಸಿದ್ದು ಶರದ್ ಪವಾರ್ ಹಾಗೂ ಕಾಂಗ್ರೆಸ್ ನಾಯಕರಿಗೆ ಇಷ್ಟವಾಗಿರಲಿಲ್ಲ. ಮೋದಿ, ಶಶಿ ತರೂರ್, ಕೊಚ್ಚಿ ತಂಡದ ಕಥೆ ಎಲ್ಲರಿಗೂ ಗೊತ್ತೇ ಇದೆ.

Vindu Dara Singh alleges IPL fixed, Vijay Mallya also into betting

ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಹಾಗೂ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ನಡುವಿನ ಕಿತ್ತಾಟದ ಫಲವೇ ಪಂದ್ಯಗಳ ಫಿಕ್ಸಿಂಗ್ ಗೆ ನಾಂದಿ ಹಾಡಿತು. ಇಡೀ ಐಪಿಎಲ್ ಪಂದ್ಯಗಳ ಮ್ಯಾಚ್ ಫಿಕ್ಸಿಂಗ್ ಪ್ರಕರಣವಾಗಿದೆ ಎಂದು ಝೀ ಮೀಡಿಯಾ ಕಾರ್ಪೊಗೆ ಸಿಂಗ್ ತಿಳಿಸಿದ್ದಾರೆ. ಪವಾರ್ ಅವರನ್ನು ಪ್ರಶ್ನಿಸಲು ಹೋದರೆ ನಿಮ್ಮ ಚಾನೆಲ್ ಬಂದ್ ಆಗುತ್ತದೆ ಎಂದು ಎಚ್ಚರಿಕೆಯನ್ನು ವಿಂದೂ ನೀಡಿದ್ದಾರೆ.

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣವನ್ನು ಮುಚ್ಚಿಹಾಕಲು ಭಾರತ ಹಾಗೂ ಚೆನ್ನೈ ತಂಡದ ನಾಯಕ ಎಂಎಸ್ ಧೋನಿ ಯತ್ನಿಸಿದ್ದಾರೆ ಎಂದು ಐಪಿಎಲ್ ನ ಉಚ್ಚಾಟಿತ ಆಯುಕ್ತ ಲಲಿತ್ ಮೋದಿ ಗಂಭೀರ ಆರೋಪ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. [ಗುರು ಸಿಎಸ್ ಕೆ ಬಾಸ್ ಅಲ್ವಂತೆ ಗುರೂ]

ಐಪಿಎಲ್ ನಿಯಮದ ಪ್ರಕಾರ ಯಾವುದೇ ತಂಡದ ಮಾಲೀಕರು, ಫ್ರಾಂಚೈಸಿ ಸದಸ್ಯರು ಕಳ್ಳಾಟದಲ್ಲಿ ಭಾಯಾಗಿದ್ದರೆ ಅಥವಾ ಐಪಿಎಲ್ ನಿಯಮ ಮೀರಿ ವರ್ತಿಸಿದ್ದರೆ ಅವರನ್ನು ಹಾಗೂ ಅವರು ಪ್ರತಿನಿಧಿಸುವ ತಂಡವನ್ನು ವಜಾಗೊಳಿಸಬಹುದಾಗಿದೆ. ಆದರೆ, ಇಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಾಗಲಿ, ಗುರುನಾಥ್ ಹಾಗೂ ಧೋನಿಗಾಗಲಿ ಯಾವುದೇ ಹಾನಿಯಾಗಿಲ್ಲದಿರುವುದು ದುರಂತ ಎಂದು ಮೋದಿ ಹೇಳಿದ್ದರು.

English summary
IPL is “100 percent fixed” and that he is only aware of one owner who is directly involved in betting, Vijay Mallya.“Barring Vijay Mallya nobody knows anything. Mallya is himself involved in betting, he earns 100-200 crores in IPL,” said Vindu Dara Singh who allegedly involved in the 2013 IPL spot-fixing scam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X