ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಲ್ವಾನ್ ಕಣಿವೆಯಲ್ಲಿ ಕಾದಾಡಿದ್ದ ಗಾಯಾಳು ಸೈನಿಕರನ್ನ ಭೇಟಿ ಮಾಡಿದ ಮೋದಿ:ವಿಡಿಯೋ

|
Google Oneindia Kannada News

ನವದೆಹಲಿ, ಜುಲೈ 3:ಗಡಿ ವಿವಾದದ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶುಕ್ರವಾರ) ಬೆಳಿಗ್ಗೆ ಇದ್ದಕ್ಕಿದ್ದಂತೆ ಲಡಾಖ್‌ ಲೇಹ್‌ಗೆ ಆಶ್ಚರ್ಯಕರ ರೀತಿಯಲ್ಲಿ ಭೇಟಿ ನೀಡಿದ್ದರು. ಈ ಸಮಯದಲ್ಲಿ ಅವರು ಅಲ್ಲಿನ ಉನ್ನತ ಸೇನಾಧಿಕಾರಿಗಳಿಂದ ನೆಲದ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು.

Recommended Video

15 BBMP workers tested corona positive ಬಿಬಿಎಂಪಿ 15 ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕು|Oneindia Kannada

ಪಿಎಂ ಮೋದಿ ಅವರೊಂದಿಗೆ ಸಿಡಿಎಸ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ನರ್ವಾನೆ ಕೂಡ ಇದ್ದರು. ಇದರ ನಂತರ, ಜೂನ್ 15-16ರ ರಾತ್ರಿ ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಗಾಯಗೊಂಡ ಸೈನಿಕರನ್ನು ಪ್ರಧಾನಿ ಮೋದಿ ಭೇಟಿಯಾಗಿ ಅವರ ಆರೋಗ್ಯವನ್ನು ವಿಚಾರಿಸಿದರು. ತಮ್ಮ ಧೈರ್ಯಶಾಲಿ ಪುತ್ರರನ್ನು ದೇಶಕ್ಕಾಗಿ ಕಳುಹಿಸಿರುವ ಸೈನಿಕರ ಕುಟುಂಬ ಸದಸ್ಯರನ್ನೂ ಪ್ರಧಾನಿ ಮೋದಿ ಶ್ಲಾಘಿಸಿದರು.

ಪ್ರಧಾನಿ ಮೋದಿ ದಿಢೀರ್ ಲಡಾಖ್ ಭೇಟಿ ಕುರಿತು ಚೀನಾ ಹೇಳಿದ್ದೇನು?ಪ್ರಧಾನಿ ಮೋದಿ ದಿಢೀರ್ ಲಡಾಖ್ ಭೇಟಿ ಕುರಿತು ಚೀನಾ ಹೇಳಿದ್ದೇನು?

ಸೈನಿಕರನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ, 130 ಕೋಟಿ ದೇಶದ ಜನರು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತಾರೆ. ನಿಮ್ಮ ಧೈರ್ಯ ನಮ್ಮ ಇಡೀ ಹೊಸ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಅಲ್ಲದೆ, ನಿಮ್ಮ ಶಕ್ತಿಯ ಸಂದೇಶವು ಇಡೀ ಜಗತ್ತಿಗೆ ಹೋಗುತ್ತದೆ. ನಿಮ್ಮ ಶಕ್ತಿಯನ್ನು ನೋಡಿ, ಈ ಯುವಕರು ಯಾರೆಂದು, ಅವರು ಹೇಗೆ ತರಬೇತಿ ಪಡೆದಿದ್ದಾರೆಂದು ತಿಳಿಯಲು ಜಗತ್ತು ಪ್ರಯತ್ನಿಸುತ್ತದೆ ಎಂದು ಪಿಎಂ ಮೋದಿ ಹೇಳಿದರು. ಇಂದು, ಇಡೀ ಜಗತ್ತು ನಿಮ್ಮ ಶಕ್ತಿಯನ್ನು ವಿಶ್ಲೇಷಿಸುತ್ತಿದೆ. ನಿಮ್ಮನ್ನು ನೋಡುವುದರಿಂದ ನನಗೆ ಒಂದು ಶಕ್ತಿ ಬರುತ್ತದೆ ಎಂದು ಮೋದಿ ಹೇಳಿದರು.

ಹೆಸರಿಸದೆ ಚೀನಾಕ್ಕೆ ಸಂದೇಶ ನೀಡುವಂತೆ ಪ್ರತಿಕ್ರಿಯಿಸುವಾಗ, ನಾವು ಯಾವತ್ತೂ ವಿಶ್ವದ ಯಾವುದೇ ಶಕ್ತಿಯ ಮುಂದೆ ತಲೆಬಾಗಲಿಲ್ಲ ಮತ್ತು ಎಂದಿಗೂ ಕುಗ್ಗುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು. ನಿಮ್ಮಂತಹ ಪ್ರಬಲರು ನಮ್ಮ ಸೈನ್ಯದಲ್ಲಿರುವುದರಿಂದ ನಾನು ಈ ವಿಷಯವನ್ನು ಮಾತನಾಡಲು ಸಮರ್ಥನಾಗಿದ್ದೇನೆ ಎಂದು ಅವರು ಹೇಳಿದರು. ನಾನು ನಿಮಗೆ ನಮಸ್ಕರಿಸುತ್ತೇನೆ ಮತ್ತು ನಿಮಗೆ ಜನ್ಮ ನೀಡಿದ ತಾಯಂದಿರಿಗೆ ಗೌರವ ಸಲ್ಲಿಸುತ್ತೇನೆ, ಅವರು ನಿಮ್ಮನ್ನು ಬೆಳೆಸಿದರು ಮತ್ತು ದೇಶಕ್ಕೆ ನೀಡಿದರು ಎಂದು ಮುಕ್ತಕಂಠದಿಂದ ಸೈನಿಕರ ಕುಟುಂಬವನ್ನು ಶ್ಲಾಘಿಸಿದರು.

Video:PM Narendra Modi Met Soldiers Who Were Injured In Galwan Valley Clash

ಈ ಮೊದಲು, ಸೇನಾ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಪಿಎಂ ಮೋದಿ, "ನಾವು ಶ್ರೀಕೃಷ್ಣನ ಕೊಳಲನ್ನು ಇಷ್ಟಪಡುವ ಜನರು, ಆದರೆ ಕೈಯಲ್ಲಿ ಸುದರ್ಶನ ಚಕ್ರವನ್ನು ಹೊಂದಿರುವ ಅದೇ ಶ್ರೀಕೃಷ್ಣನನ್ನೂ ನಾವು ಪೂಜಿಸುತ್ತೇವೆ" ಎಂದು ಹೇಳಿದರು. ಚೀನಾಕ್ಕೆ ಸವಾಲು ಹಾಕಿದ ಪಿಎಂ ಮೋದಿ, ಈಗ ವಿಸ್ತರಣೆಯ ಹಂತ ಮುಗಿದಿದೆ, ಈಗೇನಿದ್ದರು ಅಭಿವೃದ್ಧಿಯ ಸಮಯ, ವಿಸ್ತರಣೆಯಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದರು.

ಗಾಲ್ವನ್‌ ಕಣಿವೆಯಲ್ಲಿ ಭಾರತ-ಚೀನಾ ಯೋಧರ ನಡುವೆ ಸಂಘರ್ಷ ನಡೆದು ಎರಡು ವಾರಗಳ ಬಳಿಕ ಅಲ್ಲಿಗೆ ತೆರಳಿ ಪರಿಸ್ಥಿತಿ ಅವಲೋಕಿಸಿದ ಪ್ರಧಾನಿಯವರು ಯೋಧರನ್ನು ಉದ್ದೇಶಿಸಿ ಈ ಮಾತುಗಳನ್ನಾಡಿದರು.

English summary
Earlier today, Prime Minister Narendra Modi met soldiers who were injured in Galwan Valley Clash of June 15 and delivered a message to them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X