ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fake: ಲಾಕ್‌ಡೌನ್‌ನಿಂದ ರೈಲು ಬೋಗಿ ನಡುವೆ ಕುಳಿತು ಮಹಿಳೆ ಪ್ರಯಾಣ

|
Google Oneindia Kannada News

ದೆಹಲಿ, ಮೇ 19: ಪುಟ್ಟ ಮಗುವಿನ ಜೊತೆ ರೈಲು ಬೋಗಿಗಳ ನಡುವೆ ಕುಳಿತು ಪ್ರಯಾಣ ಮಾಡುತ್ತಿರುವ ಕಾರ್ಮಿಕ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Recommended Video

ಶಿವಮೊಗ್ಗದಲ್ಲಿ ಇಬ್ಬರು ಮುಸ್ಲಿಂ ಯುವಕರನ್ನು ಅರೆಸ್ಟ್ ಮಾಡಿದ್ಯಾಕೆ?

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರು ಟ್ರಕ್, ಲಾರಿ, ಹೆದ್ದಾರಿಗಳಲ್ಲಿ ನಡೆದುಕೊಂಡು ಸ್ವಂತ ಊರುಗಳಿಗೆ ಹೋಗುತ್ತಿದ್ದಾರೆ. ಪುಟ್ಟ ಪುಟ್ಟ ಮಕ್ಕಳ ಜೊತೆ, ಗಂಟುಮೂಟೆ ಕಟ್ಟಿಕೊಂಡು ಕಾಲ್ನಡಿಗೆಯಲ್ಲಿ ಸಾಗುತ್ತಿರುವ ಕಾರ್ಮಿಕರ ದೃಶ್ಯಗಳು ಕರುಳು ಹಿಂಡುವಂತಿದೆ.

Fake: ಅಂಗಡಿ, ಮಳಿಗೆಗೆ ಸಮಯ ನಿಗದಿಯಾಗಿದೆಯೆ?Fake: ಅಂಗಡಿ, ಮಳಿಗೆಗೆ ಸಮಯ ನಿಗದಿಯಾಗಿದೆಯೆ?

ಇಂತಹ ಸಂದರ್ಭದಲ್ಲಿ ತನ್ನ ಪ್ರಾಣವನ್ನು ಲೆಕ್ಕಿಸಿದ ಕಾರ್ಮಿಕ ಮಹಿಳೆಯೊಬ್ಬರು ರೈಲು ಬೋಗಿಗಳ ನಡುವೆ ಕುಳಿತು ಹೋಗುತ್ತಿರುವ ಅಪಾಯಕಾರಿ ವಿಡಿಯೋ ಹೆಚ್ಚು ಗಮನ ಸೆಳೆದಿದೆ. ಆದರೆ, ಇದು ಭಾರತ ಮೂಲದ ವಿಡಿಯೋ ಅಲ್ಲ ಎಂದು ಎಫ್ ಬಿ ಐ ಸ್ಪಷ್ಟಪಡಿಸಿದೆ.

Video Of Woman Travelling With Infant Is Not From India

ಇದು ಲಾಕ್‌ಡೌನ್‌ ಸನ್ನಿವೇಶದ ವಿಡಿಯೋ ಅಲ್ಲ, ಇದು ಬಾಂಗ್ಲಾದೇಶ ಮೂಲದ ವಿಡಿಯೋ. 2016ರಲ್ಲಿ ಈ ವಿಡಿಯೋ ವೈರಲ್ ಆಗಿತ್ತು ಎಂದು ಎಫ್ ಬಿ ಐ ತಿಳಿಸಿದೆ. ಇಂತಹ ವಿಡಿಯೋಗಳನ್ನು ಹರಡಿಸಬೇಡಿ ಮತ್ತು ಸಾರ್ವಜನಿಕರು ನಂಬಬೇಡಿ ಎಂದು ಎಚ್ಚರಿಸಿದೆ.

ಕಳೆದ ಎರಡ್ಮೂರು ತಿಂಗಳಿನಿಂದ ಪ್ರಮುಖ ನಗರಗಳಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರು, ಊರುಗಳಿಗೆ ತೆರಳಲು ಕಷ್ಟಪಡುತ್ತಿದ್ದಾರೆ. ರಾತ್ರಿ-ಹಗಲು ಎನ್ನದೇ ನಡೆದುಕೊಂಡು ಹೋಗುತ್ತಿದ್ದಾರೆ. ಅಕ್ರಮವಾಗಿ ಆಂಬುಲೆನ್ಸ್, ಟ್ರಕ್, ಲಾರಿಗಳಲ್ಲಿ ಪ್ರಯಾಣ ಮಾಡಿರುವ ಘಟನೆಯೂ ವರದಿಯಾಗಿದೆ. ಇದೆಲ್ಲದ ಮಧ್ಯೆ ಸರ್ಕಾರದಿಂದ ಶ್ರಮಿಕ್ ರೈಲು ಮತ್ತು ಬಸ್ಸಿನ ವ್ಯವಸ್ಥೆಯೂ ಆಗಿದೆ.

English summary
Fake: Video of woman travelling with infant is not from India says press information bureau.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X