ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಕಾರು-ಕಂಬದಿಂದ ತಲೆ ರಕ್ಷಿಸಿದ ಹೆಲ್ಮೆಟ್

|
Google Oneindia Kannada News

ವೇಗವಾಗಿ ಬರುತ್ತಿದ್ದ ಬೈಕ್ ಸವಾರನೊಬ್ಬ ಕಾರು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಪಲ್ಟಿ ಹೊಡೆದು ಬಿದ್ದಿದ್ದಾನೆ. ಹೀಗೆ ಆಘಾತಕ್ಕೊಳಗಾದ ಮತ್ತು ದಿಗ್ಭ್ರಮೆಗೊಂಡ ಸವಾರನು ಅಪಘಾತದ ನಂತರ ನಿಧಾನವಾಗಿ ಎದ್ದೇಳಲು ಪ್ರಯತ್ನಿಸುತ್ತಾನೆ. ಮೇಲೇಳುವ ಹೊತ್ತಿಗೆ ಅವನ ತಲೆ ಮೇಲೆ ವಿದ್ಯುತ್ ಕಂಬವೊಂದು ಬಿದ್ದಿದೆ. ಆಗಲೂ ಬೈಕ್ ಸವಾರ ಎದ್ದು ನಿಂತಿದ್ದಾನೆ. ಏನ್ ಆಶ್ಚರ್ಯ ನೋಡಿ. ಈ ಆಶ್ಚರ್ಯಕ್ಕೆ ಕಾರಣ ಸವಾರ ಧರಿಸಿದ್ದ ಹೆಲ್ಮೆಟ್. ಒಂದು ವೇಳೆ ಸವಾರ ಹೆಲ್ಮೆಟ್ ಧರಿಸಿಲ್ಲವಾಗಿದ್ದರೆ ಆತ ಮೇಲೇಳುವುದಿರಲಿ ಆತನ ಪ್ರಾಣ ಪಕ್ಷ ಬಿದ್ದ ರಬಸಕ್ಕೆ ಹಾರಿಹೋಗುತ್ತಿತ್ತು. ಹೆಲ್ಮೆಟ್ ಬಳಕೆ ಹಾಗೂ ಜಾಗೃತಿ ಮೂಡಿಸಲು ದೆಹಲಿ ಪೊಲೀಸರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಸಂಚಾರಿ ನಿಯಮಗಳು ಪಾಲಿಸಲು ಎಷ್ಟೇ ಒತ್ತಡ ಹೇರಿದರು ಜನ ಅದರ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ಆದರೆ ಸವಾರರ ಜೀವ ರಕ್ಷಣೆಗೆ ಹೆಲ್ಮೆಟ್ ಎಷ್ಟು ಮುಖ್ಯ ಎನ್ನುವ ಬಗ್ಗೆ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ದೆಹಲಿ ಪೊಲೀಸರು ಅದರ ಮಹತ್ವವನ್ನು ತಿಳಿಸಿದ್ದಾರೆ.

ಬೈಕ್ ಒಂದು 7 ಮಂದಿ ಪ್ರಯಾಣ: ವಿಡಿಯೋ ವೈರಲ್ ಬೈಕ್ ಒಂದು 7 ಮಂದಿ ಪ್ರಯಾಣ: ವಿಡಿಯೋ ವೈರಲ್

ದ್ವಿಚಕ್ರ ವಾಹನ ಸವಾರನನ್ನು ಹೆಲ್ಮೆಟ್‌ ಒಂದಲ್ಲ ಎರಡು ಬಾರಿ ರಕ್ಷಿಸಿದೆ. ಒಂದು ಕಾರು ಮತ್ತು ವಿದ್ಯುತ್ ಕಂಬದಿದ. ದೆಹಲಿ ಪೊಲೀಸರು ಟ್ವಿಟರ್‌ನಲ್ಲಿ ಹಂಚಿಕೊಂಡ ವಿಡಿಯೊದಲ್ಲಿ ಅದನ್ನು ಸಂದೇಶಕ್ಕಾಗಿ ಬಳಸಿದ್ದಾರೆ. ಬೈಕ್ ಅಪಘಾತ ಮತ್ತು ಸವಾರನ ಸವಾರನ ತಲೆಯ ಮೇಲೆ ದೀಪದ ಕಂಬ ಬಿದ್ದರೂ ಹೆಲ್ಮೆಟ್‌ನಿಂದ ಮುಂದಾಗುವ ದುರಂತವನ್ನು ತಪ್ಪಿಸಿದಂತಾಗಿದೆ. ಎರಡು ಘಟನೆಗಳು ಕೆಲವೇ ಸೆಕೆಂಡುಗಳಲ್ಲಿ ನಡೆದಿವೆ.

Video: Helmet saves head from car-pole

ವಿಡಿಯೊದ ಕೊನೆಯಲ್ಲಿ ಶೀರ್ಷಿಕೆ ಹೀಗಿದೆ: 'ಹೆಲ್ಮೆಟ್ ಧರಿಸುವುದರಿಂದ ನಿಮ್ಮನ್ನು ಒಮ್ಮೆ, ಎರಡು ಬಾರಿ, ಮೂರು ಬಾರಿ ಅಥವಾ ಅನೇಕ ಬಾರಿ ಉಳಿಸಬಹುದು' ಎಂದು ಬರೆಯಲಾಗಿದೆ. ಬೈಕ್‌ಗೆ ಡಿಕ್ಕಿ ಹೊಡೆದ ನಂತರ ವಿದ್ಯುತ್ ಕಂಬ ಹಾನಿಗೊಳಗಾಗಿದ್ದು, ಸವಾರನ ತಲೆಯ ಮೇಲೆ ಬಿದ್ದಿದೆ. 17 ಗಂಟೆಗಳ ಹಿಂದೆ ಹಂಚಿಕೊಂಡ ವಿಡಿಯೊ 26,000 ಕ್ಕೂ ಹೆಚ್ಚು ಲೈಕ್‌ಗಳನ್ನು ಸಂಗ್ರಹಿಸಿದೆ ಮತ್ತು 5,000 ಕ್ಕೂ ಹೆಚ್ಚು ಬಾರಿ ಮರುಟ್ವೀಟ್ ಆಗಿದೆ. ಟ್ವಿಟ್ಟರ್ ವಿಡಿಯೊದಲ್ಲಿ ಕಾಮೆಂಟ್ ಮಾಡುವಾಗ ಸವಾರ ಎಷ್ಟು ಅದೃಷ್ಟಶಾಲಿ ಎಂದು ಜನರು ಪ್ರತಿಕ್ರಿಯಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪೂರ್ಣ ಮುಖವನ್ನು ಮುಚ್ಚುವ ಹೆಲ್ಮೆಟ್‌ಗಳನ್ನು ಸರಿಯಾಗಿ ಧರಿಸಿದರೆ ಮಾರಣಾಂತಿಕ ಗಾಯಗಳನ್ನು ಶೇಕಡಾ 64 ರಷ್ಟು ಮತ್ತು ಮೆದುಳಿನ ಗಾಯಗಳನ್ನು ಶೇಕಡಾ 74 ರಷ್ಟು ಕಡಿಮೆ ಮಾಡುತ್ತದೆ.

English summary
Delhi Police has shared a video explaining the importance of helmets to bikers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X