ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿ ರಾಜಕೀಯ ಜೀವನ ಕುರಿತ 'ಮೋದಿ@20: ಡ್ರೀಮ್ಸ್ ಮೀಟ್ ಡೆಲಿವರಿ' ಪುಸ್ತಕ ಬಿಡುಗಡೆ

|
Google Oneindia Kannada News

ನವದೆಹಲಿ ಮೇ 11: ದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಬರೆದಿರುವ 'ಮೋದಿ@20: ಡ್ರೀಮ್ಸ್ ಮೀಟ್ ಡೆಲಿವರಿ' ಎಂಬ ಪುಸ್ತಕವನ್ನು ಇಂದು ಬಿಡುಗಡೆಗೊಳಿಸಲಾಯಿತು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಪುಸ್ತಕ ಬಿಡುಗಡೆ ಮಾಡಿದ್ದಾರೆ.

ಬಿಜೆಪಿ ಪಕ್ಷದಲ್ಲಿ ಹಾಗೂ ಸರ್ಕಾರದಲ್ಲಿ ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತಿರುವ ಏಕೈಕ ನಾಯಕ ಮೋದಿ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು.

"ಮೋದಿ @ 20: ಡ್ರೀಮ್ಸ್ ಮೀಟ್ ಡೆಲಿವರಿ" ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಮೋದಿಯವರ ನೇತೃತ್ವದಲ್ಲಿ ಬಿಜೆಪಿ ದೇಶದ ಮೂಲೆ ಮೂಲೆಗಳನ್ನು ತಲುಪಿ ದೇಶದಲ್ಲಿ ಯಶಸ್ವಿ ಪಕ್ಷವಾಗಿ ಹೊರಹೊಮ್ಮಿದೆ ಎಂದರು.

ಭಾರತದ ಜನರು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಅಪಾರ ನಂಬಿಕೆ ಹೊಂದಿದ್ದಾರೆ. ಯಾವುದೇ ಕುಟುಂಬದ ಹಿನ್ನೆಲೆಯಿಲ್ಲದೆ ಬಂದು ರಾಷ್ಟ್ರದ ನಾಯಕರಾಗಿರುವುದು ಬಹಳ ಮಹತ್ವದ್ದಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪುಸ್ತಕ ಬಿಡುಗಡೆ ವೇಳೆ ಹೇಳಿದರು.

ಬಡ ಕುಟುಂಬದಿಂದ ಬಂದ ಮೋದಿ

ಬಡ ಕುಟುಂಬದಿಂದ ಬಂದ ಮೋದಿ

ಉದ್ಘಾಟನಾ ಸಮಾರಂಭದಲ್ಲಿ ಗೃಹ ಸಚಿವ ಅಮಿತ್ ಶಾ ಕೂಡ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಬಡ ಕುಟುಂಬದಿಂದ ಬಂದು ಪ್ರಧಾನಿಯಾಗಿರುವ ಮೋದಿಯವರ 5 ದಶಕಗಳ ಜೀವನ, ಪಕ್ಷದ ಕಾರ್ಯಕರ್ತನಿಂದ ಹಿಡಿದು ಅತ್ಯಂತ ಜನಪ್ರಿಯ ನಾಯಕನಾಗುವರಿಗೂ ಹಾಗೂ ಮೋದಿ ಸಾಮಾಜಿಕ ಕಾರ್ಯಕರ್ತನ ಕುರಿತಾದ ಈ ಪುಸ್ತಕವನ್ನು ಪ್ರಧಾನಿ ಮೋದಿಯವರ "ಗೀತಾ" ಎಂದು ಬಣ್ಣಿಸಿದ್ದಾರೆ.

ಈ ಪುಸ್ತಕವನ್ನು ರೂಪಾ ಪಬ್ಲಿಕೇಷನ್ಸ್ ಪ್ರಕಟಿಸಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಬುದ್ಧಿಜೀವಿಗಳು ಮತ್ತು ತಜ್ಞರು ಬರೆದಿರುವ ತುಣುಕುಗಳ ಸಂಕಲನವಿದೆ. ಭಾರತದ ಸರ್ವತೋಮುಖ ಅಭಿವೃದ್ಧಿಯಲ್ಲಿ ನಂಬಿಕೆ ಇರುವವರಿಗೆ ಅದರಲ್ಲೂ ಸಮಾಜ ಸೇವೆಯಲ್ಲಿ ದುಡಿಯುವವರಿಗೆ ಈ ಪುಸ್ತಕವು ಗೀತೆಯಾಗಿ ಬರಲಿದೆ ಎಂದು ಅಮಿತ್ ಶಾ ತಿಳಿಸಿದರು.

ಮೋದಿ ನಾನು ಜೊತೆಯಾಗಿ 3 ದಶಕ ಕಳೆದಿದ್ದೇವೆ

ಮೋದಿ ನಾನು ಜೊತೆಯಾಗಿ 3 ದಶಕ ಕಳೆದಿದ್ದೇವೆ

ನರೇಂದ್ರ ಮೋದಿಯವರ ಐದು ದಶಕಗಳ ಪಯಣದ ಜೊತೆಯಲ್ಲಿ ನಾನು ಮೂರು ದಶಕಗಳನ್ನು ಅವರ ಜೊತೆ ಸಂಘಟನೆಯಲ್ಲಿಯೇ ಕಳೆದಿದ್ದೇನೆ. ಮೋದಿ ಪ್ರಯಾಣದ ಆರಂಭಿಕ ಭಾಗವೆಂದರೆ ಜೀವನದ ಕಠಿಣ ಕೆಲಸ, ಸಮಸ್ಯೆಗಳನ್ನು ವಿಶ್ಲೇಷಿಸುವುದು ಮತ್ತು ನಂತರ ಪರಿಹಾರಗಳನ್ನು ಕಂಡುಹಿಡಿಯುವುದು. ಇಂದು ಇಡೀ ಜಗತ್ತು ಅವರ ನಾಯಕತ್ವವನ್ನು ಒಪ್ಪಿಕೊಳ್ಳುತ್ತಿದೆ. ಭೂಕಂಪ ಪೀಡಿತ ರಾಜ್ಯವನ್ನು ನಿರ್ವಹಿಸಲು ಪ್ರಧಾನಿ ಮೋದಿಯನ್ನು ಸಿಎಂ ಮಾಡಿದಾಗ ಅವರಿಗೆ ಪಂಚಾಯ್ತಿ ನಡೆಸಿದ ಅನುಭವವೂ ಇರಲಿಲ್ಲದ್ದರೂ ಮೋದಿ ಸ್ಥಿರವಾದ ವಿಜಯಗಳನ್ನು ಗೆದ್ದರು ಮತ್ತು ರಾಜ್ಯವನ್ನು ಸಾಕಷ್ಟು ಸಮರ್ಥವಾಗಿ ನಡೆಸಿದರು," ಎಂದು ಅಮಿತ್ ಶಾ ಹೇಳಿದರು.

ರಾಜಕೀಯ ಪೂರ್ವದ ಮೋದಿಯ ಅಧ್ಯಯನ

ರಾಜಕೀಯ ಪೂರ್ವದ ಮೋದಿಯ ಅಧ್ಯಯನ

ಮೋದಿ ಸುಮಾರು 13 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿದ್ದರು ಮತ್ತು ಕಳೆದ ಎಂಟು ವರ್ಷಗಳಿಂದ ದೇಶದ ಪ್ರಧಾನಿಯಾಗಿದ್ದಾರೆ. ಕಳೆದ 20 ವರ್ಷಗಳ ಅವರ ರಾಜಕೀಯ ಜೀವನ್ನವನ್ನು ಎಲ್ಲರೂ ನೋಡಿದ್ದಾರೆ. ಆದರೆ ಅದಕ್ಕೂ ಮೊದಲಿನ 30 ವರ್ಷಗಳ ಮೋದಿ ಅವರನ್ನು ಅಧ್ಯಯನ ಮಾಡದೇ ಇದ್ದಾರೆ ಎಲ್ಲವೂ ಅಪೂರ್ಣವಾಗಿಯೇ ಉಳಿಯಲಿದೆ ಎಂದು ಅಭಿಪ್ರಾಯಪಟ್ಟರು.

 ಲೇಖಕರನ್ನು ಅಭಿನಂದಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಲೇಖಕರನ್ನು ಅಭಿನಂದಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಸಮಾರಂಭದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಪುಸ್ತಕದ ಲೇಖಕರನ್ನು ಅವರ ವಿಶ್ಲೇಷಣೆ ಮತ್ತು ಘನ ಪ್ರಸ್ತುತಿಗಾಗಿ ಅಭಿನಂದಿಸಿದರು. ಪ್ರಧಾನಿ ಮೋದಿಯವರ 20 ವರ್ಷಗಳ ಪಯಣವನ್ನು ಲೇಖಕರು ಕೌಶಲ್ಯದಿಂದ ಬರೆದಿದ್ದಾರೆ ಎಂದು ಹೇಳಿದರು. ಕಳೆದ 20 ವರ್ಷಗಳಲ್ಲಿ ನರೇಂದ್ರ ಭಾಯಿ ದಾಮೋದರದಾಸ್ ಮೋದಿ ಅವರು ವಿಶಿಷ್ಟ ಸ್ಥಾನವನ್ನು ಸೃಷ್ಟಿಸಿದ್ದಾರೆ ಎಂದು ಉಪರಾಷ್ಟ್ರಪತಿ ಹೇಳಿದರು.

English summary
The book Written on Prime Minister Narendra Modi 'Modi @ 20: Dreams Meet Delivery' was launched at the Science Hall in Delhi by Vice President Venkaiah Naidu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X