ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರಲ್ಲಿ ಒಬ್ಬರೇ ಹೋಗುವಾಗಲೂ ಮಾಸ್ಕ್ ಧರಿಸುವುದು ಕಡ್ಡಾಯ

|
Google Oneindia Kannada News

ನವದೆಹಲಿ, ಏಪ್ರಿಲ್ 7: ಕಾರಿನಲ್ಲಿ ಒಬ್ಬನೇ ವ್ಯಕ್ತಿ ಚಾಲನೆ ಮಾಡಿಕೊಂಡು ಹೋಗುವಾಗಲೂ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ದೆಹಲಿ ಹೈಕೋರ್ಟ್ ಬುಧವಾರ ಹೇಳಿದೆ. ಯಾವುದೇ ವಾಹನವು ಕೋವಿಡ್ ನಿಯಮಾವಳಿಗಳು ಅನ್ವಯವಾಗಬಹುದಾದ 'ಸಾರ್ವಜನಿಕ ಸ್ಥಳ' ಎಂದು ಕೋರ್ಟ್ ವ್ಯಾಖ್ಯಾನಿಸಿದೆ. ವಾಹನದ ಒಳಗೆ ಮತ್ತು ಹೊರಗೆ ಇರುವ ವ್ಯಕ್ತಿಗಳಿಗೆ ಮಾಸ್ಕ್ ಒಂದು 'ಸುರಕ್ಷಾ ಕವಚ' ಆಗಿರುತ್ತದೆ ಎಂದು ತನ್ನ ಆದೇಶದಲ್ಲಿ ತಿಳಿಸಿದೆ.

ಒಬ್ಬರೇ ಚಾಲನೆ ಮಾಡುವಾಗ ಮಾಸ್ಕ್ ಧರಿಸದೆ ಇರುವುದಕ್ಕೆ ದಂಡ ವಿಧಿಸುವ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಈ ತೀರ್ಪು ನೀಡಿದ್ದಾರೆ.

ವಿಡಿಯೋ; ಮಾಸ್ಕ್‌ ಜಾರಿದ್ದಕ್ಕೆ ಆಟೋ ಚಾಲಕನನ್ನು ಅಮಾನುಷವಾಗಿ ಥಳಿಸಿದ ಪೊಲೀಸರುವಿಡಿಯೋ; ಮಾಸ್ಕ್‌ ಜಾರಿದ್ದಕ್ಕೆ ಆಟೋ ಚಾಲಕನನ್ನು ಅಮಾನುಷವಾಗಿ ಥಳಿಸಿದ ಪೊಲೀಸರು

'ನೀವು ಒಬ್ಬರೇ ಕಾರಿನಲ್ಲಿ ಇದ್ದಾಗಲೂ ಮಾಸ್ಕ್ ಧರಿಸುವುದಕ್ಕೆ ಆಕ್ಷೇಪ ಏಕೆ? ಅದು ಇರುವುದು ನಿಮ್ಮ ಸುರಕ್ಷತೆಗಾಗಿ. ಸಾಂಕ್ರಾಮಿಕದ ಬಿಕ್ಕಟ್ಟು ಏರಿಕೆಯಾಗುತ್ತಿದೆ. ವ್ಯಕ್ತಿ ಲಸಿಕೆ ಪಡೆದಿರಲಿ ಅಥವಾ ಪಡೆಯದೆ ಇರಲಿ, ಅವರು ಮಾಸ್ಕ್ ಧರಿಸಲೇಬೇಕು' ಎಂದು ನ್ಯಾಯಮೂರ್ತಿ ಹೇಳಿದರು.

Vehicle A Public Place, Wearing Mask Must Even If Driving Alone: Delhi High Court

ಈ ರೀತಿ ಮಾಸ್ಕ್ ಧರಿಸುವುದು ಕೋವಿಡ್ ವಿರುದ್ಧ ಸುರಕ್ಷಿತವಾಗಿರಲು ಮಾಡಬಹುದಾದ ಕನಿಷ್ಠ ಪ್ರಯತ್ನ ಎಂದ ಅವರು, ವಿಜ್ಞಾನಿಗಳು ಮತ್ತು ಜಗತ್ತಿನಾದ್ಯಂತ ಸರ್ಕಾರಗಳ ಸಲಹೆಗಳನ್ನು ಉಲ್ಲೇಖಿಸಿದರು.

ಟ್ರಾಫಿಕ್ ಸಿಗ್ನಲ್‌ನಲ್ಲಿ ಕಾರ್ ನಿಲ್ಲಿಸಿದಾಗ ಚಾಲಕರು ಆಗಾಗ್ಗೆ ಕಾರಿನ ಕಿಟಕಿ ಗಾಜುಗಳನ್ನು ಇಳಿಸುತ್ತಾರೆ. ಕೊರೊನಾ ವೈರಸ್ ಆ ಸಂದರ್ಭದಲ್ಲಿಯೂ ಅಪಾಯಕಾರಿಯಾಗಿರುತ್ತದೆ. ಅದು ಯಾರಿಗೆ ಬೇಕಾದರೂ ತಗುಲಬಹುದು ಎಂದು ನ್ಯಾಯಾಲಯ ಹೇಳಿತು.

ಮಾಸ್ಕ್‌ ಧರಿಸದಿರುವುದು ಕೂಡ ಒಂದು ರೀತಿಯ ಅಪರಾಧ: ಶಿವರಾಜ್ ಸಿಂಗ್ಮಾಸ್ಕ್‌ ಧರಿಸದಿರುವುದು ಕೂಡ ಒಂದು ರೀತಿಯ ಅಪರಾಧ: ಶಿವರಾಜ್ ಸಿಂಗ್

ಒಬ್ಬರೇ ಕಾರ್‌ನಲ್ಲಿ ತೆರಳುವಾಗ ತಡೆದಿದ್ದ ದೆಹಲಿ ಪೊಲೀಸರು, ಮಾಸ್ಕ್ ಧರಿಸದ ಕಾರಣಕ್ಕೆ 500 ರೂಪಾಯಿ ದಂಡ ವಿಧಿಸಿದ್ದನ್ನು ಪ್ರಶ್ನಿಸಿ ವಕೀಲ ಸೌರಭ್ ಶರ್ಮಾ ಮತ್ತು ಇಬ್ಬರು ಹೈಕೋರ್ಟ್‌ಗೆ ಅರ್ಜಿಗಳನ್ನು ಸಲ್ಲಿಸಿದ್ದರು. ಚಾಲಕರೊಬ್ಬರೇ ಇರುವಾಗ ಮಾಸ್ಕ್ ಧರಿಸಬೇಕು ಎಂಬ ನಿಯಮ ಇಲ್ಲ. ಆದರೆ ತನ್ನದೇ ನಿಯಮಗಳನ್ನು ರೂಪಿಸಿ, ಜನರ ಮೇಲೆ ವಿಧಿಸಲು ಎಲ್ಲ ರಾಜ್ಯಗಳಿಗೂ ಅಧಿಕಾರವಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ನ್ಯಾಯಾಲಯಕ್ಕೆ ತಿಳಿಸಿತ್ತು.

ಎಲ್ಲ ಸಾರ್ವಜನಿಕ ಮತ್ತು ಖಾಸಗಿ ವಾಹನಗಳಲ್ಲಿ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯ. ಈ ಬಗ್ಗೆ ಕಳೆದ ವರ್ಷದ ಏಪ್ರಿಲ್‌ನಲ್ಲಿಯೇ ಆದೇಶ ಹೊರಡಿಸಿರುವುದಾಗಿ ದೆಹಲಿಯ ಎಎಪಿ ಸರ್ಕಾರ ವಾದಿಸಿತ್ತು.

English summary
Any vehicle is a public place and mask is compulsory even if a person is driving alone in a car says Delhi High Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X