ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವಿರುದ್ಧ ಹೋರಾಡಲು 100 ಕೋಟಿ ಘೋಷಿಸಿದ ವೇದಾಂತ್ ಫೌಂಡೇಶನ್

|
Google Oneindia Kannada News

ದೆಹಲಿ, ಮಾರ್ಚ್ 23: ಜಾಗತಿಕ ಸಾಂಕ್ರಾಮಿಕ ಪಿಡುಗ ಕೊರೊನಾ ವೈರಸ್‌ ವಿರುದ್ಧ ಹೋರಾಡಲು ಖ್ಯಾತ ಉದ್ಯಮಿ, ವೇದಾಂತ ಲಿಮಿಟೆಡ್ ಸಂಸ್ಥಾಪಕ ಅನಿಲ್ ಅಗರ್ವಾಲ್ 100 ಕೋಟಿ ನೀಡುವುದಾಗಿ ಘೋಷಿಸಿದ್ದಾರೆ.

ಈ ಹಣದಿಂದ ದಿನಗೂಲಿ ಕಾರ್ಮಿಕರು, ನಿರ್ಮಾಣ ಕಾರ್ಮಿಕರು, ಕಂಪನಿಗಳಲ್ಲಿ ದುಡಿಯುವ ಕೆಲಸಗಾರರಿಗೆ ಬಳಸಬಹುದು ಎಂದು ತಮ್ಮ ಟ್ವಿಟ್ಟರ್ ನಲ್ಲಿ ಸಲಹೆ ನೀಡಿದ್ದಾರೆ.

ಕಾರು ತಯಾರಿಕೆ ಬಿಟ್ಟು ವೆಂಟಿಲೇಟರ್ಸ್ ತಯಾರಿಕೆಗೆ ಮುಂದಾದ ಮಹೀಂದ್ರಾ ಕಾರು ತಯಾರಿಕೆ ಬಿಟ್ಟು ವೆಂಟಿಲೇಟರ್ಸ್ ತಯಾರಿಕೆಗೆ ಮುಂದಾದ ಮಹೀಂದ್ರಾ

'ಕೊರೊನಾ ವೈರಸ್‌ ವಿರುದ್ಧ ಹೋರಾಡಲು ನಾನು 100 ಕೋಟಿ ಮೀಸಲಿಡುತ್ತಿದ್ದೇನೆ. ದೇಶಕ್ಕೆ ಅಗತ್ಯವಿರುವ ಸಮಯದಲ್ಲಿ ಈ ಹಣ ಬಳಕೆಯಾಗಬೇಕಿದೆ. ದಿನಗೂಲಿ ಕಾರ್ಮಿಕರು, ಕಂಪನಿಯಲ್ಲಿ ಕೆಲಸ ಮಾಡುವ ಕೆಲಸಗಾರರು ಬಹಳ ಕಷ್ಟ ಸನ್ನಿವೇಶ ಎದುರಿಸುತ್ತಿದ್ದಾರೆ. ಅವರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದೇನೆ. ನಮ್ಮಿಂದ ಸಾಧ್ಯವಾದ ಸಹಾಯ ಮಾಡುತ್ತಿದ್ದೇನೆ'' ಎಂದು ಹೇಳಿದ್ದಾರೆ.

ಇನ್ನು ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಯಾವ ಉದ್ಯೋಗಿಗೂ ವೇತನ ಕಡಿತಗೊಳಿಸುವುದಿಲ್ಲ, ತಾತ್ಕಾಲಿಕವಾಗಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೂ ಯಾವುದೇ ತೊಂದರೆಯಾಗಲ್ಲ ಎಂದು ಭರವಸೆ ನೀಡಿದ್ದಾರೆ.

Vedanta Chairman Committed 100 Cr To Fight CoronaVirus

ಮಹೀಂದ್ರಾ ಗ್ರೂಪ್ ಮಾಲೀಕ ಆನಂದ್ ಮಹೀಂದ್ರಾ ಕೂಡ ಕೊರೊನಾ ವಿರುದ್ಧ ಹೋರಾಡಲು ನೆರವು ನೀಡುವುದಾಗಿ ಘೋಷಿಸಿದ್ದರು. ಸದ್ಯ ಕಾರು ತಯಾರಿಸುವುದನ್ನು ನಿಲ್ಲಿಸಿ ವೆಂಟಿಲೇರ್ಸ್ ತಯಾರಿಸಲು ಮುಂದಾಗಿರುವ ಬಗ್ಗೆ ಮಾಹಿತಿ ನೀಡಿದರು. ತನ್ನ ರೆಸಾರ್ಟ್‌ ಒಂದನ್ನು ಸೋಂಕಿತರ ಚಿಕಿತ್ಸೆಗಾಗಿ ನೀಡಲು ನಿರ್ಧರಿಸಿರುವುದಾಗಿ ಆನಂದ್ ಮಹೀಂದ್ರಾ ತಿಳಿಸಿದ್ದಾರೆ.

ಈ ಹಿಂದೆ ಜನವರಿಯಲ್ಲಿ, ಅಲಿಬಾಬಾ ಸಂಸ್ಥಾಪಕ ಜ್ಯಾಕ್ ಮಾ ತಮ್ಮ 'ಜಾಕ್ ಮಾ ಫೌಂಡೇಶನ್ ಮೂಲಕ ಯುಎಸ್‌, ಏಷ್ಯಾನ್, ಆಫ್ರಿಕನ್ ದೇಶಗಳ ಚಿಕಿತ್ಸೆಗಾಗಿ 14.4 ಮಿಲಿಯನ್ ದೇಣಿಗೆ ನೀಡಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿತ್ತು. ಫೆಬ್ರವರಿಯಲ್ಲಿ, ಬಿಲ್ ಗೇಟ್ಸ್ ಮತ್ತು ಅವರ ಪತ್ನಿ ಮೆಲಿಂಡಾ ಗೇಟ್ಸ್ ಆಫ್ರಿಕಾ ಮತ್ತು ದಕ್ಷಿಣ ಏಷ್ಯಾ ದೇಶಗಳಿಗೆ ಪ್ರತ್ಯೇಕ ಕೊಠಡಿ ಮತ್ತು ಚಿಕಿತ್ಸೆಯ ಪ್ರಯತ್ನಗಳನ್ನು ಸುಧಾರಿಸಲು 100 ಮಿಲಿಯನ್ ಘೋಷಿಸಿದ್ದರು.

English summary
Founder-Chairman of Vedanta Resources Ltd Anil Agarwal announces to donate Rs 100 cr towards fighting Coronavirus Pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X