ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರಣ ದಂಡನೆ ವಿರೋಧಿಗಳ ಸಾಲಿಗೆ ವರುಣ್ ಗಾಂಧಿ

By Mahesh
|
Google Oneindia Kannada News

ನವದೆಹಲಿ,ಆಗಸ್ಟ್ .2:ಭಾರತದಲ್ಲಿ ಮರಣ ದಂಡನೆ, ಗಲ್ಲು ಶಿಕ್ಷೆ ರದ್ದುಗೊಳಿಸಿ ಎಂಬ ಕೂಗಿದೆ ಬಿಜೆಪಿ ಮುಖಂಡ ವರುಣ್ ಗಾಂಧಿ ದನಿಗೂಡಿಸಿದ್ದಾರೆ, ಗಲ್ಲು ಶಿಕ್ಷೆ ವಿರೋಧಿಸುವವರ ಸಾಲಿಗೆ ಬಿಜೆಪಿ ಸಂಸದ ವರುಣ್ ಗಾಂಧಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಇದು ನನ್ನ ಅಭಿಪ್ರಾಯ ಮಾತ್ರ ಎಂದು ವರುಣ್ ಸ್ಪಷ್ಟನೆ ನೀಡಿದ್ದಾರೆ.

ಇಲ್ಲಿ ತನಕ ಗಲ್ಲಿಗೇರುವವರಲ್ಲಿ ಶೇ.94ರಷ್ಟು ದಲಿತ ಹಾಗೂ ಅಲ್ಪಸಂಖ್ಯಾತರಾಗಿರುವುದು ಆತಂಕಕಾರಿ ಎಂದು ಔಟ್‌ಲುಕ್ ನಿಯತಕಾಲಿಕದಲ್ಲಿ ಬರೆದಿರುವ ಲೇಖನದಲ್ಲಿ ವರುಣ್ ಪ್ರತಿಪಾದಿಸಿದ್ದಾರೆ. ಕೆಲ ದಿನಗಳ ಹಿಂದೆ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಕೂಡಾ ಗಲ್ಲುಶಿಕ್ಷೆಯನ್ನು ವಿರೋಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Varun Gandhi

ಮರಣ ದಂಡನೆಗೊಳಗಾದವರ ವಿವರಗಳನ್ನು ಪರಿಶೀಲಿಸುವಾಗ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತುಳಿಯಲ್ಪಟ್ಟವರೇ ಶೇ.75ರಷ್ಟಿರುವುದು ಗಮನಕ್ಕೆ ಬರುತ್ತದೆ. ಮರಣ ದಂಡನೆಯು ಪ್ರತಿಹಿಂಸೆಯನ್ನು ಕಾನೂನುಬದ್ಧಗೊಳಿಸುತ್ತದೆ ಅಷ್ಟೇ. ಅದನ್ನು ರದ್ದುಗೊಳಿಸುವ ಅಗತ್ಯವಿದೆ. ಐತಿಹಾಸಿಕವಾಗಿ ಮರಣದಂಡನೆಯು ಪ್ರಜಾಪೀಡನೆಗೆ ಸಾಧನವಾಗಿತ್ತು ಮತ್ತು ಈಗಲೂ ಅದರ ಬಳಕೆ ಕಾಲ ವಿರೋಧಾತ್ಮಕವಾಗಿದೆ.

ಮರಣ ದಂಡನೆಗೆ ಗುರಿಯಾದವರನ್ನು ನೇಣಿಗೇರಿಸುವ ವಧಾಕಾರ ನಾಗರಿಕ ಸಮಾಜಕ್ಕೊಂದು ಅವಮಾನ ಎಂದೂ ಅವರು ಬಣ್ಣಿಸಿದ್ದಾರೆ. ಮುಂಬೈ ಸರಣಿ ಬಾಂಬ್ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್‌ನನ್ನು ಗಲ್ಲಿಗೇರಿಸಿರುವ ಹಿನ್ನೆಲೆಯಲ್ಲಿ ವರುಣ್‌ರ ಈ ಅಭಿಪ್ರಾಯ ಹೊರಬಿದ್ದಿದೆ.

ಮರಣ ದಂಡನೆಗಳಿಂದ ಅಪರಾಧ ಪ್ರವೃತ್ತಿ ತಗ್ಗುತ್ತದೆ ಎನ್ನುವುದು ಸಾಬೀತಾಗಿಲ್ಲ ಎಂದಿರುವ ಅವರು,ಭಾರತವು ಬದಲಾಗುತ್ತಿರುವ ಜಾಗತಿಕ ಚಿತ್ರಣವನ್ನು ಗುರುತಿಸುವ ಮತ್ತು ಮರಣ ದಂಡನೆಯನ್ನು ರದ್ದುಗೊಳಿಸುವ ಅಗತ್ಯವಿದೆ ಎಂದು ವಾದಿಸಿದ್ದಾರೆ.(ಐಎಎನ್ಎಸ್)

English summary
Bharatiya Janata Party MP Varun Gandhi on Saturday came out against the death penalty, noting most of the death row convicts are Dalits or from the minorities. His pary distanced itself from the stand, calling it his personal view.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X