ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂದೇ ಭಾರತ್ ಮಿಷನ್: ವಿದೇಶದಿಂದ ಬಂದವರೆಷ್ಟು?

|
Google Oneindia Kannada News

ನವದೆಹಲಿ, ಮೇ 11: ಕೊರೊನಾ ಲಾಕ್‌ಡೌನ್‌ನಿಂದಾಗಿ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಕೆಲಸವನ್ನು (Vande Bharath Mission) ಕೇಂದ್ರ ಸರ್ಕಾರ ಬಿರುಸಿನಿಂದ ನಡೆಸಿದೆ.

ಕಳೆದ ಮೇ 7 ರಿಂದ ಇಲ್ಲಿಯವರೆಗೆ 4000 ಭಾರತೀಯರನ್ನು ವಿದೇಶಗಳಿಂದ ಭಾರತಕ್ಕೆ ಕರೆತರಲಾಗಿದೆ ಎಂದು ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಪುಣ್ಯಾ ಸಲೀಲ ಶ್ರೀವಾತ್ಸವ ಇಂದು ತಿಳಿಸಿದ್ದಾರೆ. ಇದಕ್ಕಾಗಿ 23 ವಿಮಾನಗಳು ಬಳಕೆಯಾಗಿವೆ ಎಂದು ಅವರು ತಿಳಿಸಿದ್ದಾರೆ.

ವಂದೇ ಭಾರತ್ ಮಿಷನ್: ಲಂಡನ್ To ಬೆಂಗಳೂರು ಯಶಸ್ವಿವಂದೇ ಭಾರತ್ ಮಿಷನ್: ಲಂಡನ್ To ಬೆಂಗಳೂರು ಯಶಸ್ವಿ

ಅಲ್ಲದೇ ಕೊರೊನಾ ಲಾಕ್‌ಡೌನ್‌ ನಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ಕಳುಹಿಸಿ ಕೊಡಲು 468 ವಿಶೇಷ ಶ್ರಮಿಕ್ ರೈಲುಗಳನ್ನು ಓಡಿಸಲಾಗಿದೆ. ಐದು ಲಕ್ಷಕ್ಕಿಂತ ಹೆಚ್ಚು ಕಾರ್ಮಿಕರು ಈ ರೈಲುಗಳಲ್ಲಿ ಪ್ರಯಾಣಿಸಿದ್ದಾರೆ ಎಂದು ಶ್ರೀವಾತ್ಸವ್ ತಿಳಿಸಿದ್ದಾರೆ. ನಿನ್ನೆ ಒಂದೇ ದಿನ ದೇಶಾದ್ಯಂತ 101 ಶ್ರಮಿಕ್ ರೈಲುಗಳು ಸಂಚರಿಸಿವೆ ಎಂದು ತಿಳಿಸಿದ್ದಾರೆ.

 Vande Bharath Mission: Around 4000 Indians Have Been Brought Back

ಕೊರೊನಾ ಲಾಕ್‌ಡೌನ್ ನಿಂದಾಗಿ ವಿದೇಶಗಳಲ್ಲಿ ಸಿಲುಕಿರುವ ಸುಮಾರು 2 ಲಕ್ಷ ಭಾರತೀಯರನ್ನು ಕರೆತರಲು ಭಾರತ ಸರ್ಕಾರ ವಿಶೇಷ ಕಾರ್ಯಾಚರಣೆ ಆರಂಭಿಸಿದೆ. ಮೊದಲ ಹಂತದಲ್ಲಿ 12 ದೇಶಗಳಿಂದ ಸುಮಾರು 15 ಸಾವಿರ ಭಾರತೀಯರನ್ನು 64 ವಿಮಾನಗಳಲ್ಲಿ ಕರೆತರಲಿದೆ. ಮೇ 7 ರಿಂದ ಈ ಕಾರ್ಯಾಚರಣೆ ಆರಂಭವಾಗಿದೆ.

English summary
Vande Bharath Mission: Around 4000 Indians Have Been Brought Back. Says Union Home Ministry Joint Secretary Punya Salila Srivastava.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X