ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಷ್ಣೋ ದೇವಿ ಭಕ್ತರಿಗೆ ಖುಷಿ ಸುದ್ದಿ ನೀಡಿದ ಮೋದಿ ಸರ್ಕಾರ

|
Google Oneindia Kannada News

ನವದೆಹಲಿ, ಜೂನ್ 27: ಜಮ್ಮು ಮತ್ತು ಕಾಶ್ಮೀರದ ಕಾತ್ರಾದಲ್ಲಿರುವ ವೈಷ್ಣೋದೇವಿ ದೇವಸ್ಥಾನದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದು. ದಕ್ಷಿಣ ಭಾರತದಿಂದಲೂ ಇಲ್ಲಿಗೆ ಭಕ್ತರು ತೆರಳುತ್ತಾರೆ. ಉತ್ತರ ಭಾರತದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚು. ಈಗ ಇಲ್ಲಿಗೆ ಭೇಟಿ ನೀಡುವ ಭಕ್ತರಿಗೆ ಸಂತಸದ ಸುದ್ದಿ ಸಿಕ್ಕಿದೆ.

ದೇಶದ ಮಹತ್ವಾಕಾಂಕ್ಷಿ, ಮೊದಲ ಸ್ವದೇಶಿ ನಿರ್ಮಿತ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಕಾತ್ರಾ ಜಿಲ್ಲೆಗೂ ಸೇವೆ ನೀಡಲಿದೆ. ದೆಹಲಿಯಿಂದ ಕಾತ್ರಾಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಪರ್ಕ ಕಲ್ಪಿಸಲಿದ್ದು, ರಸ್ತೆ ಮಾರ್ಗದಲ್ಲಿ ಸಂಚರಿಸಲು ಕಷ್ಟಪಡಬೇಕಾದ ಭಕ್ತರಿಗೆ ಇದು ನೆಮ್ಮದಿ ತಂದಿದೆ.

ಒಂದೂ ಟ್ರಿಪ್ ತಪ್ಪಿಸದೆ 1 ಲಕ್ಷ ಕಿಮೀ ಪ್ರಯಾಣ ಪೂರೈಸಿದ ವಂದೇ ಭಾರತ್ಒಂದೂ ಟ್ರಿಪ್ ತಪ್ಪಿಸದೆ 1 ಲಕ್ಷ ಕಿಮೀ ಪ್ರಯಾಣ ಪೂರೈಸಿದ ವಂದೇ ಭಾರತ್

ಶೀಘ್ರದಲ್ಲಿಯೇ ಈ ಮಾರ್ಗದಲ್ಲಿ ಪ್ರಾಯೋಗಿಕ ರೈಲು ಸಂಚಾರ ನಡೆಯಲಿದೆ. ಇದರ ವಾಣಿಜ್ಯ ಓಡಾಟ ಆರಂಭವಾದ ಬಳಿಕ ಪ್ರಯಾಣಿಕರು ಕೇವಲ ಎಂಟು ಗಂಟೆಯಲ್ಲಿ ದೆಹಲಿಯಿಂದ ಕಾತ್ರಾ ತಲುಪಬಹುದು ಎಂದು ಅಂದಾಜಿಸಲಾಗಿದೆ. ಉಳಿದಂತೆ ಸಾಮಾನ್ಯ ರೈಲುಗಳಲ್ಲಿ ಕಾತ್ರಾಕ್ಕೆ ತೆರಳಲು 10-12 ಗಂಟೆ ಬೇಕಾಗುತ್ತದೆ.

vande bharat express to run between delhi and katra vaishno devi temple

ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾದ ಬಳಿಕ ವಂದೇ ಭಾರತ್ ಎಕ್ಸ್‌ಪ್ರೆಸ್ ನವದೆಹಲಿಯ ರೈಲು ನಿಲ್ದಾಣದಿಂದ ಜಮ್ಮು ಮತ್ತು ಕಾಶ್ಮೀರದೆಡೆಗೆ ಸಂಚಾರ ಆರಂಭಿಸಲಿದೆ. ಗಂಟೆಗೆ 130 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯವುಳ್ಳ ಈ ರೈಲು, ಅಂಬಾಲ, ಲೂಧಿಯಾನ ಮತ್ತು ಜಮ್ಮು ತಾವಿಯಲ್ಲಿ ನಿಲ್ದಾಣ ಹೊಂದಿದೆ. ಬಳಿಕ ಇದು ಕಾತ್ರಾ ತಲುಪಲಿದೆ.

ಮಂಗಳೂರು-ಚೆನ್ನೈ ನಡುವೆ ವಂದೇ ಭಾರತ್ ರೈಲು ಸಂಚಾರ ಮಂಗಳೂರು-ಚೆನ್ನೈ ನಡುವೆ ವಂದೇ ಭಾರತ್ ರೈಲು ಸಂಚಾರ

ರೈಲ್ವೆ ಸಚಿವಾಲಯದ ಯೋಜನೆ ಪ್ರಕಾರ ರೈಲು ದೆಹಲಿಯಿಂದ ಬೆಳಿಗ್ಗೆ 6 ಗಂಟೆಗೆ ಹೊರಡಲಿದ್ದು, 8.10ಕ್ಕೆ ಅಂಬಾಲ ತಲುಪಲಿದೆ. ಅಲ್ಲಿ ಎರಡು ನಿಮಿಷ ಮಾತ್ರ ನಿಲುಗಡೆಯಾಗಲಿದ್ದು, 9.22ಕ್ಕೆ ಲೂಧಿಯಾನಕ್ಕೆ ಹೋಗಲಿದೆ. ಅಲ್ಲಿ ಕೂಡ ಕೇವಲ ಎರಡು ನಿಮಿಷ ನಿಲುಗಡೆ ಇರಲಿದೆ. ನಂತರ ಜಮ್ಮು ತಾವಿಗೆ ಮಧ್ಯಾಹ್ನ 12.40ಕ್ಕೆ ಮುಟ್ಟಲಿದೆ. ಅಲ್ಲಿಂದ ಕಾತ್ರಾಕ್ಕೆ ಮಧ್ಯಾಹ್ನ 2 ಗಂಟೆಗೆ ಸೇರಲಿದೆ.

ಅದೇ ರೀತಿ ವಾಪಸ್ ಬರುವಾಗ ಮಧ್ಯಾಹ್ನ 3 ಗಂಟೆಗೆ ಹೊರಟು, ಜಮ್ಮು ತಾವಿಗೆ ಸಂಜೆ 4.18ಕ್ಕೆ ತಲುಪಲಿದೆ. ಬಳಿಕ ಲೂಧಿಯಾನಕ್ಕೆ 7.36 ಮತ್ತು ಅಂಬಾಲಕ್ಕೆ 8.56ಕ್ಕೆ ತಲುಪಿ, ನವದೆಹಲಿಯ ನಿಲ್ದಾಣವನ್ನು ರಾತ್ರಿ 11 ಗಂಟೆಗೆ ಸೇರಲಿದೆ. ಮರಳುವಾಗಲೂ ಮೊದಲ ಮೂರು ನಿಲ್ದಾಣಗಳಲ್ಲಿ ತಲಾ ಎರಡು ನಿಮಿಷ ಮಾತ್ರ ನಿಲುಗಡೆ ಇರಲಿದೆ.

ಕಲ್ಲು ಹೊಡೆದು 'ವಂದೇ ಭಾರತ್' ರೈಲಿನ ಗಾಜು ಪುಡಿಮಾಡಿದ ಕಿಡಿಗೇಡಿಗಳು ಕಲ್ಲು ಹೊಡೆದು 'ವಂದೇ ಭಾರತ್' ರೈಲಿನ ಗಾಜು ಪುಡಿಮಾಡಿದ ಕಿಡಿಗೇಡಿಗಳು

ಮೇಕ್ ಇನ್ ಇಂಡಿಯಾ ಯೋಜನೆಯ ಮೊದಲ ರೈಲಾದ ವಂದೇ ಭಾರತ್ ಎಕ್ಸ್‌ಪ್ರೆಸ್, ಪ್ರಸ್ತುತ ದೆಹಲಿ ಮತ್ತು ವಾರಣಾಸಿ ನಡುವೆ ಸಂಚರಿಸುತ್ತಿದೆ. ಇದರಲ್ಲಿ ಸ್ವಯಂಚಾಲಿತ ಬಾಗಿಲು, 180 ಡಿಗ್ರಿ ತಿರುಗುವ ಆಸನಗಳು, ವೈಫೈ ಹಾಗೂ ಮನರಂಜನೆಯ ಸಾಧನಗಳು ಇದರಲ್ಲಿವೆ.

English summary
In a good news for Vaishno Devi piligrims, Modi government has decided to start Vande Bharat express trail service to Katra from New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X