ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಪಾಕಿಸ್ತಾನದ ನಡುವೆ ನೇರ ಮಾತುಕತೆಯೊಂದೇ ಪರಿಹಾರ: ಅಮೆರಿಕ

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 23: ಕಾಶ್ಮೀರದ ವಿಷಯದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನೇರ ಮಾತುಕತೆ ನಡೆದರೆ ಮಾತ್ರವೇ ಸಮಸ್ಯೆಗೆ ಪರಿಹಾರ ದೊರಕುತ್ತದೆ ಎಂದು ಅಮೆರಿಕ ಹೇಳಿದೆ.

ಭಯೋತ್ಪಾದನೆಯ ನಿಗ್ರಹದ ವಿಷಯದಲ್ಲೂ ಭಾರತ ಪಾಕಿಸ್ತಾನದೊಂದಿಗೆ ನೇರ ಮಾತುಕತೆಗೆ ಸಿದ್ಧವಾಗಬೇಕು. ಲಷ್ಕರ್ ಇ ತೊಯಿಬಾ, ಜೈಶ್ ಇ ಮೊಹಮ್ಮದ್ ಸಂಘಟನೆಗಳಿಗೆ ಪಾಕಿಸ್ತಾನವೇ ಹೊಣೆ. ಅವನ್ನು ನಿಯಂತ್ರಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿಲ್ಲ. ಇದರಿಂದಾಗಿಯೇ ಗಡಿನುಯಂತ್ರಣ ರೇಖೆ ಬಳಿ ನಿರಂತರವಾಗಿ ಹಿಂಸೆ ನಡೆಯುತ್ತಿದೆ ಎಂದು ಅಮೆರಿಕ ದೂರಿದೆ.

ಕಪ್ಪುಪಟ್ಟಿಗೆ ಹೋಗದಿದ್ದರೂ ಪಾಕಿಸ್ತಾನಕ್ಕೆ ಅಮೆರಿಕದಿಂದ ಭಾರೀ ಆಘಾತ!ಕಪ್ಪುಪಟ್ಟಿಗೆ ಹೋಗದಿದ್ದರೂ ಪಾಕಿಸ್ತಾನಕ್ಕೆ ಅಮೆರಿಕದಿಂದ ಭಾರೀ ಆಘಾತ!

1972 ರ ಶಿಮ್ಲಾ ಒಪ್ಪಂದದಂತೆ ಭಾರತ ಮತ್ತು ಪಾಕಿಸ್ತಾನದ ನಡುವೆ ನೇರ ಮಾತುಕತೆ ನಡೆಯ ಬೇಕಿದೆ. ಇದರಿಂದ ಉಭಯ ದೇಶಗಳ ನಡುವಿನ ಸಂಬಮಧ ಮತ್ತಷ್ಟು ಹದಗೆಟ್ಟುವುದು ತಪ್ಪುತ್ತದೆ ಎಂದು ಅದು ಹೇಳಿದೆ.

 US Tells Direct dialogue between India, Pakistan can reduce tensions

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ಭಾರತ ಸರ್ಕಾರದ ನಿರ್ಧಾರದ ನಂಯತರ ಉಭಯ ದೇಶಗಳ ನಡುವೆ ಯುದ್ಧದ ವಾತಾವರಣ ಸೃಷ್ಟಿಯಾಗಿತ್ತು. ಈ ಸಂದರ್ಭದಲ್ಲೂ ಅಮೆರಿಕ ಮಧ್ಯಸ್ಥಿಕೆ ವಹಿಸುವ ಉತ್ಸುಕತೆ ತೋರಿತ್ತು. ಈಗಾಗಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವು ಬಾರಿ ಮಧ್ಯಸ್ಥಿಕೆಯ ಪ್ರಸ್ತಾಪವನ್ನಿಟ್ಟಿದ್ದರೂ ಭಾರತ ಮಾತ್ರ, ಜಮ್ಮು ಮತ್ತು ಕಾಶ್ಮೀರ ಭಾರತದ ಆಂತರಿಕ ವಿಷಯ. ಇದರಲ್ಲಿ ಮೂರನೇ ದೇಶ ತಲೆಹಾಕುವ ಅಗತ್ಯವಿಲ್ಲ ಎಂದಿತ್ತು. ಈ ವಿಷಯವನ್ನು ದ್ವಿಪಕ್ಷೀಯವಾಗಿಯೇ ಬಗೆಹರಿಸಿಕೊಳ್ಳುತ್ತೇವೆ ಎಂದಿತ್ತು.

English summary
United States Tells Direct dialogue between India, Pakistan can reduce tensions
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X