ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಪ್ರವಾಸದಲ್ಲಿ ಸೆಕ್ರೆಟರಿ ಆಫ್‌ ಸ್ಟೇಟ್‌ ಮೈಕಲ್‌ ಪಾಂಪಿಯೋ

|
Google Oneindia Kannada News

ನವದೆಹಲಿ, ಅ. 22: ಸೆಕ್ರೆಟರಿ ಆಫ್‌ ಸ್ಟೇಟ್‌ ಮೈಕಲ್‌ ಆರ್‌. ಪಾಂಪಿಯೋ ಅವರು ಅಕ್ಟೋಬರ್ 25 - 30 ಅವಧಿಯಲ್ಲಿ ಭಾರತದ ನವದೆಹಲಿ, ಶ್ರೀಲಂಕಾದ ಕೊಲೊಂಬೊ, ಮಾಲ್ಡೀವ್ಸ್‌ನ ಮಾಲೆ, ಮತ್ತು ಇಂಡೋನೇಷ್ಯಾದ ಜಕಾರ್ತಕ್ಕೆ ಭೇಟಿ ನೀಡಲಿದ್ದಾರೆ ಎಂದು ವಕ್ತಾರ ಮೋರ್ಗನ್ ಆರ್ಟಗಸ್‌ ಅವರ ಹೇಳಿದ್ದಾರೆ.

ಸೆಕ್ರೆಟರಿ ಪಾಂಪಿಯೋ ಮತ್ತು ಸೆಕ್ರೆಟರಿ ಆಫ್‌ ಡಿಫೆನ್ಸ್‌ ಮಾರ್ಕ್‌ ಟಿ. ಎಸ್ಪರ್‌ ಅವರು ನವದೆಹಲಿಯಲ್ಲಿ ನಡೆಯಲಿರುವ ಮೂರನೇ ವಾರ್ಷಿಕ ಅಮೆರಿಕ-ಭಾರತ 2+2 ಸಚಿವರ ಮಟ್ಟದ ಮಾತುಕತೆಯಲ್ಲಿ ಭಾರತದ ಸಹಭಾಗಿಗಳೊಂದಿಗೆ ಭಾಗಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಅಮೆರಿಕ- ಭಾರತದ ನಡುವಿನ ಸಮಗ್ರ ಜಾಗತಿಕ ವ್ಯೂಹಾತ್ಮಕ ಸಹಭಾಗಿತ್ವ ಮತ್ತು ವಿಶ್ವಾದ್ಯಂತ ಹಾಗೂ ಇಂಡೋ-ಪೆಸಿಪಿಕ್‌ ಪ್ರಾಂತ್ಯದಲ್ಲಿ ಸ್ಥಿರತೆ ಸಮೃದ್ಧಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚರ್ಚೆ ನಡೆಯಲಿದೆ.

ಅಮೆರಿಕ ವಿದೇಶಾಂಗ ಇಲಾಖೆ ಡೆಪ್ಯುಟಿ ಸೆಕ್ರೆಟರಿ ಬೀಗನ್‌ರಿಂದ ಭಾರತ ಪ್ರವಾಸ ಅಮೆರಿಕ ವಿದೇಶಾಂಗ ಇಲಾಖೆ ಡೆಪ್ಯುಟಿ ಸೆಕ್ರೆಟರಿ ಬೀಗನ್‌ರಿಂದ ಭಾರತ ಪ್ರವಾಸ

ಸೆಕ್ರೆಟರಿ ಪಾಂಪಿಯೋ ಅವರು ತಮ್ಮ ಕೊಲೊಂಬೊ ಭೇಟಿಯ ಸಂದರ್ಭದಲ್ಲಿ, ಅಮೆರಿಕ ಮತ್ತು ಶ್ರೀಲಂಕಾಗಳ ಸಹಭಾಗಿತ್ವದಲ್ಲಿ ಮುಕ್ತ ಇಂಡೊ-ಪೆಸೆಪಿಕ್‌ ಪ್ರಾಂತ್ಯವನ್ನು ಹೊಂದುವ ಸಮಾನ ಗುರಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲಿದ್ದಾರೆ.

US Secretary of State Mike Pompeo to visit India

ಅಲ್ಲಿಂದ ಮಾಲೆಗೆ ತೆರಳಲಿರುವ ಪಾಂಪಿಯೋ, ಉಭಯ ದೇಶಗಳ ನಡುವಣ ನಿಕಟ ದ್ವಿಪಕ್ಷೀಯ ಸಂಬಂಧದ ಪುನರ್‌ ದೃಢೀಕರಣ ಮತ್ತು ಪ್ರಾಂತೀಯ ಸಾಗರೋತ್ತರ ಸುಭದ್ರತೆಯಿಂದ ಹಿಡಿದು ಭಯೋತ್ಪಾದನೆಯ ವಿರುದ್ಧದ ಹೋರಾಟದವರೆಗೆ ಅನೇಕ ವಿಷಯಗಳಲ್ಲಿ ಉಭಯ ದೇಶಗಳ ಸಹಭಾಗಿತ್ವವನ್ನು ಮುಂದುವರಿಸುವ ಬಗ್ಗೆ ಮಾತುಕತೆ ನಡೆಸಲಿದ್ದಾರೆ.

ಹಾಂಕಾಂಗ್‌ ಜಾಗಕ್ಕಾಗಿ ಬಡಿದಾಟ: ಚೀನಾ ವಿರುದ್ಧ ಅಮೆರಿಕ ಯುದ್ಧ..? ಹಾಂಕಾಂಗ್‌ ಜಾಗಕ್ಕಾಗಿ ಬಡಿದಾಟ: ಚೀನಾ ವಿರುದ್ಧ ಅಮೆರಿಕ ಯುದ್ಧ..?

ಬಳಿಕ ಜಕಾರ್ತಕ್ಕೆ ತೆರಳಲಿರುವ ಸೆಕ್ರಟರಿ ಅವರು ಅಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ತಮ್ಮ ಸಹಭಾಗಿಗಳನ್ನು ಭೇಟಿ ಮಾಡಿ ಮುಕ್ತ ಇಂಡೊ ಪೆಸಿಪಿಕ್‌ ಪ್ರಾಂತ್ಯದ ಪರಿಕಲ್ಪನೆಗೆ ಬದ್ಧತೆ ಪ್ರದರ್ಶಿಸಲಿದ್ದಾರೆ.

English summary
US Secretary of State Mike Pompeo and Deputy Esper will hold two-plus-two talks with Indian defence minister Rajnath Singh and external affairs minister S Jaishankar on October 27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X