ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಆಪ್ ನಿಷೇಧ ಮಾಡಿದ ಭಾರತದ ನಿರ್ಧಾರ ಸ್ವಾಗತಿಸಿದ ಯುಎಸ್

|
Google Oneindia Kannada News

ದೆಹಲಿ, ಜುಲೈ 1: ರಾಷ್ಟ್ರೀಯ ಭದ್ರತೆಯ ಹಿತಾದೃಷ್ಟಿಯಿಂದ ಚೀನಾದ 59 ಆಪ್‌ಗಳನ್ನು ಭಾರತ ಸರ್ಕಾರ ಅಧಿಕೃತವಾಗಿ ನಿಷೇಧ ಮಾಡಿದೆ. ಚೀನಾ ವಿಚಾರದಲ್ಲಿ ಭಾರತ ಸರ್ಕಾರ ತೆಗೆದುಕೊಂಡಿರುವ ಕ್ರಮವನ್ನು ಯುಎಸ್ ಸ್ವಾಗತಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ''ಭಾರತದ ಕ್ಲೀನ್ ಅಪ್ಲಿಕೇಶನ್ ವಿಧಾನವು ಭಾರತದ ಸಾರ್ವಭೌಮತ್ವ, ಸಮಗ್ರತೆ ಮತ್ತು ರಾಷ್ಟ್ರೀಯ ಭದ್ರತೆಯನ್ನು ಹೆಚ್ಚಿಸುತ್ತದೆ'' ಎಂದು ಹೇಳಿದ್ದಾರೆ.

ಚೀನಾ ಆಪ್ ನಿಷೇಧ ಬೆನ್ನಲ್ಲೆ ಗಟ್ಟಿ ಸಂದೇಶ ರವಾನಿಸಿದ ಮೋದಿಚೀನಾ ಆಪ್ ನಿಷೇಧ ಬೆನ್ನಲ್ಲೆ ಗಟ್ಟಿ ಸಂದೇಶ ರವಾನಿಸಿದ ಮೋದಿ

''ಚೀನಿ ಕಮ್ಯುನಿಸ್ಟ್ ಪಕ್ಷದ ಕಣ್ಗಾವಲು ಹಾಗೂ ದೇಶದ ಅನುಬಂಧಗಳಾಗಿ ಕಾರ್ಯನಿರ್ವಹಿಸಬಹುದು ಎಂದು ಕೆಲವು ಮೊಬೈಲ್ ಆಪ್‌ಗಳನ್ನು ಭಾರತ ಸರ್ಕಾರ ನಿಷೇಧಿಸಿರುವುದು ಸ್ವಾಗತರ್ಹ'' ಎಂದು ಯುಎಸ್ ತಿಳಿಸಿದೆ.

Us Secretary Mike Pompeo Welcomes Indias Decision To Ban 59 Chinese Apps

ಚೀನಾದ ಜನಪ್ರಿಯ ಆಪ್‌ಗಳಾದ ಟಿಕ್‌ಟಾಕ್, ಯುಸಿ ಬ್ರೌಸರ್, ಶೇರ್ ಇಟ್, ಕ್ಲಬ್ ಫ್ಯಾಕ್ಟರಿ ಸೇರಿದಂತೆ ಒಟ್ಟು 59 ಆಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿದೆ. ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಚೀನಾ ಆಪ್‌ಗಳನ್ನು ನಿರ್ಬಂಧಿಸಿದೆ ಎಂದು ಸರ್ಕಾರ ಹೇಳಿದೆ.

ಇನ್ನು ಚೀನಾದ ಆಪ್‌ಗಳಿಗೆ ಭಾರತದಲ್ಲಿ ನಿರ್ಬಂಧ ಹೇರಿದ ಬೆನ್ನಲ್ಲೆ, ಚೈನೀಸ್ ಸಾಮಾಜಿಕ ಜಾಲತಾಣ ವೀಬೊದಲ್ಲಿ ನರೇಂದ್ರ ಮೋದಿಯ ಖಾತೆ ನಿಷ್ಕ್ರಿಯಗೊಂಡಿದೆ. 2015ರಲ್ಲಿ ಖಾತೆ ತೆರೆದಿದ್ದ ಮೋದಿ 115 ಪೋಸ್ಟ್‌ಗಳನ್ನು ಹಾಕಿದ್ದರು. ಆದ್ರೀಗ, ಎಲ್ಲ ಪೋಸ್ಟ್ ಡಿಲೀಟ್ ಮಾಡಲಾಗಿದೆ.

English summary
India's clean app approach will boost India's sovereignty and boost integrity and national security: US Secretary of State Mike Pompeo on India's decision to ban 59 Chinese apps.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X