ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಅಧ್ಯಕ್ಷ ಒಬಾಮಾ ಭಾರತ ಪ್ರವಾಸ ವೇಳಾಪಟ್ಟಿ

By Mahesh
|
Google Oneindia Kannada News

ನವದೆಹಲಿ, ಜ.22: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಭಾರತ ಪ್ರವಾಸಕ್ಕೆ ದಿನಗಣನೆ ಆರಂಭವಾಗಿದೆ. ಜ.25ರಿಂದ ಒಬಾಮಾ ಅವರ ಮೂರು ದಿನಗಳ ಪ್ರವಾಸ ಆರಂಭಗೊಳ್ಳಲಿದೆ.

ಭಾರತದ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭಕ್ಕೆ ಆಗಮಿಸುತ್ತಿರುವ ಪ್ರಥಮ ಅಮೆರಿಕ ಅಧ್ಯಕ್ಷ ಹಾಗೂ ಭಾರತಕ್ಕೆ ಎರಡನೇ ಬಾರಿಗೆ ಭೇಟಿ ನೀಡುತ್ತಿರುವ ಅಧ್ಯಕ್ಷ ಎಂಬ ಟ್ಯಾಗ್ ಧರಿಸಿ ಒಬಾಮಾ ಬರುತ್ತಿದ್ದಾರೆ. [ಪ್ರಧಾನಿ ಮೋದಿ ಅಮೆರಿಕ ಪ್ರವಾಸ ವೇಳಾಪಟ್ಟಿ]

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕ ಪ್ರಗತಿ, ಪರಮಾಣು ಒಪ್ಪಂದ, ವಿದೇಶಿ ಬಂಡವಾಳ ಹೂಡಿಕೆ, ರಕ್ಷಣಾ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ.

ಒಬಾಮಾ ಜೊತೆಗೆ ಯಾರು ಬರಲಿದ್ದಾರೆ?: ಭಾರತ ಪ್ರವಾಸದ ವೇಳೆ ಒಬಾಮಾ ಜೊತೆಗೆ ಅಮೆರಿಕ ಅಲ್ಪ ಸಂಖ್ಯಾತರ ಸಚಿವೆ ನ್ಯಾನ್ಸಿ ಪೆಲೊಸಿ, ವೈದ್ಯ ಅಮಿ ಬೆರಾ, ನ್ಯೂಯಾರ್ಕ್ ವಿದೇಶಾಂಗ ಸಚಿವ ಜೋಸೆಫ್ ಕ್ರೌಲಿ, ವಾಣಿಜ್ಯ ಕಾರ್ಯದರ್ಶಿ ಪೆನ್ನಿ ಪ್ರಿಟ್ಸ್‌ಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಧ್ಯಕ್ಷ ಸುಸಾನ್ ಇ ರೈಸ್ ಮತ್ತು ಒಬಾಮಾ ಸಲಹೆಗಾರ ಜಾನ್ ಪೊಡೆಸ್ತಾ, ಅಮೆರಿಕ ವಿದೇಶಾಂಗ ಸಚಿವ ಮೈಕೆಲ್ ಫ್ರೊಮನ್ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ. ಇವರನ್ನು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಸ್ವಾಗತಿಸಲಿದ್ದಾರೆ. [ಬರಾಕ್ ಒಪ್ಪಿದ ಒಬಾಮಾರಿಂದ ಭಾರತದ ನಿರೀಕ್ಷೆಗಳೇನು?]

US President Barack Obama's India visit Itinerary

ಒಬಾಮಾ ಭೇಟಿ ವೇಳಾಪಟ್ಟಿ ಹೀಗಿದೆ:
ಜ.25- ಭಾನುವಾರ
* ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 10 ಗಂಟೆಗೆ ಬರಾಕ್ ಒಬಾಮಾ ಆಗಮನ.
* ರಾಷ್ಟ್ರಪತಿ ಭವನದಿಂದ ರಾಜ್ ಘಾಟ್‌ಗೆ ಭೇಟಿ. ರಾಷ್ಟ್ರಪಿತ ಮಹಾತ್ಮಗಾಂಧಿ ಸ್ಮಾರಕಕ್ಕೆ ನಮನ.
* ಹೈದರಾಬಾದ್‌ ಹೌಸ್ ನಲ್ಲಿ ಸಭೆ : ದೇಶದ ಗಡಿ ವಿಚಾರ, ಆರ್ಥಿಕತೆ, ಹವಾಮಾನ ಬದಲಾವಣೆ, ಬಂಡವಾಳ, ರಕ್ಷಣೆ ಮತ್ತು ಭದ್ರತಾ ಸಹಕಾರ ಸೇರಿದಂತೆ ಪ್ರಾದೇಶಿಕ ಜಾಗತಿಕ ಸಮಸ್ಯೆ ಬಗ್ಗೆ ಚರ್ಚೆ
* ಪ್ರಧಾನಿ ಮೋದಿ ಅವರಿಂದ ಒಬಾಮಾ ಅವರಿಗೆ ಭೋಜನ ಕೂಟ ವ್ಯವಸ್ಥೆ
* ಸಂಜೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನೇತೃತ್ವದಲ್ಲಿ ಡಿನ್ನರ್. [ಮೋದಿ, ಒಬಾಮಾಗೆ ನಿಮ್ಮ ಪ್ರಶ್ನೆ, ಸಲಹೆ ಕಳಿಸಿ]

ಜ.26-ಸೋಮವಾರ
* ಗಣರಾಜ್ಯೋತ್ಸವ ದಿನದಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯೊಂದಿಗೆ ಪರೇಡ್ ಮೈದಾನಕ್ಕೆ ಭೇಟಿ.
* ಭಾರತ ಹಾಗೂ ಅಮೆರಿಕ ದೇಶದ ಎಲ್ಲಾ ವ್ಯವಹಾರಿಕ ನಾಯಕರೊಂದಿಗೆ ಚರ್ಚೆ. ಜಂಟಿ ಸುದ್ದಿಗೋಷ್ಠಿ ಸಾಧ್ಯತೆ.

ಜ.27- ಮಂಗಳವಾರ
* ಒಬಾಮಾ ಪ್ರವಾಸದ ಕೊನೆಯ ದಿನ ಬೆಳಗ್ಗೆ ಭಾರತ ಮತ್ತು ಅಮೆರಿಕ ಭವಿಷ್ಯದ ಅಭಿವೃದ್ಧಿ ಕುರಿತಾಗಿ ಸಾರ್ವಜನಿಕ ಭಾಷಣ.
* ವಿಶ್ವವಿಖ್ಯಾತ ಆಗ್ರಾದ ತಾಜ್‌ಮಹಲ್‌ಗೆ ಭೇಟಿ ಪತ್ನಿ ಮಿಚೆಲ್ ಒಬಾಮಾ ಜೊತೆ
* ದೆಹಲಿ ವಿಮಾನ ನಿಲ್ದಾಣದಿಂದ ಅಮೆರಿಕಕ್ಕೆ ನಿರ್ಗಮನ.

English summary
US President Barack Obama's itinerary in India: Brack Obama's visit to the India may have a great political significance, but what concerns the world is how the two leaders embrace each other.He is the first US president to attend the Republic Day function.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X