ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ನಾಗರಿಕ ಸೇವಾ ಪರೀಕ್ಷೆಗಳು ಮತ್ತೆ ಮುಂದೂಡಿಕೆ

|
Google Oneindia Kannada News

ನವದೆಹಲಿ, ಮೇ 4: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಈ ವರ್ಷದ ಕೇಂದ್ರ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯನ್ನು ಮತ್ತೆ ಮುಂದೂಡಿದೆ.

ಯುಪಿಎಸ್‌ಸಿ ಅಧ್ಯಕ್ಷ ಅರವಿಂದ ಸಕ್ಸೇನಾ ಅವರ ಅಧ್ಯಕ್ಷತೆಯಲ್ಲಿ ಆಯೋಗದ ಸಭೆ ಸೋಮವಾರ ಜರುಗಿತು. ಕೇಂದ್ರ ಸರ್ಕಾರದಿಂದ ಮುಂದಿನ ಸೂಚನೆ ಬರುವವರೆಗೂ ಪರೀಕ್ಷೆಗಳನ್ನು ಮುಂದೂಡಲು ಸಭೆ ತೀರ್ಮಾನಿಸಿತು. ಈ ಮೊದಲು ಪರೀಕ್ಷೆಯನ್ನು ಮೇ 31 ರಂದು ನಡೆಸಲು ನಿರ್ಧರಿಸಲಾಗಿತ್ತು.

Fake: UPSC ಪರೀಕ್ಷೆ 2020 ರದ್ದಾಗಿರುವ ವರದಿ ನಂಬಬೇಡಿ! Fake: UPSC ಪರೀಕ್ಷೆ 2020 ರದ್ದಾಗಿರುವ ವರದಿ ನಂಬಬೇಡಿ!

ಕೇಂದ್ರ ಸರ್ಕಾರ ಲಾಕ್‌ಡೌನ್ ಅನ್ನು ಮೇ 4 ರಿಂದ ಎರಡು ವಾರಗಳವರೆಗೆ ವಿಸ್ತರಿಸಿದ ನಂತರ ಯುಪಿಎಸ್‌ಸಿ ಈ ನಿರ್ಧಾರ ಕೈಗೊಂಡಿದೆ. ಮೇ 20 ರೊಳಗೆ ಲಾಕ್‌ಡೌನ್ ಮೌಲ್ಯಮಾಪನ ಮಾಡಿದ ನಂತರ ದಿನಾಂಕದಂದು ಪರೀಕ್ಷೆಗೆ ಕರೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

UPSC Again Postponed 2020 Preliminary Exams Date

ಯುಪಿಎಸ್ಸಿ ಮಾಡಬೇಕಾದದ್ದನ್ನು ಮಾಡಿದೆ. ಕೋವಿಡ್ -19 ಹರಡುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ, ಅಂತಹ ದೊಡ್ಡ ಪ್ರಮಾಣದ ಪರೀಕ್ಷೆಯನ್ನು ನಡೆಸುವುದು ಕಾರ್ಯಸಾಧ್ಯವಲ್ಲ. ಪರೀಕ್ಷಾರ್ಥಿಗಳು ಆತಂಕಗೊಳ್ಳುವ ಅವಶ್ಯಕತೆ ಇಲ್ಲ ಎಂದು ಯುಪಿಎಸ್‌ಸಿ ತಿಳಿಸಿದೆ.

ಆಯೋಗವು ಈ ವಾರ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಬೇಕಾಗಿತ್ತು, ಆದರೆ ಪ್ರಸ್ತುತ ಕೊರೊನಾ ಬಿಕ್ಕಟ್ಟಿನ ದೃಷ್ಟಿಯಿಂದ ಪರೀಕ್ಷಾ ಪ್ರಕ್ರಿಯೆಯನ್ನು ಮುಂದೂಡಲು ಆಯೋಗ ನಿರ್ಧರಿಸಿತು.

English summary
UPSC Again Postponed 2020 Preliminary Exams Date. Meeting held in upsc office today headed by upsc president arvind saksena,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X