ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನೂ ನಿಗದಿಯಾಗದ ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ದಿನಾಂಕ

|
Google Oneindia Kannada News

ನವದೆಹಲಿ, ಮೇ 20: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ 2020 ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಪೂರ್ವಭಾವಿ ಪರೀಕ್ಷೆಗಳ ದಿನಾಂಕದ ಗೊಂದಲ ಮುಂದುವರೆದಿದೆ.

ಮೇ 31 ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಕೋವಿಡ್ ಹಿನ್ನೆಲೆಯಲ್ಲಿ ಆಯೋಗ ಸತತವಾಗಿ ನಾಲ್ಕು ಬಾರಿ ರದ್ದು ಪಡಿಸಿ, ದಿನಾಂಕ ತಿಳಿಸುವುದಾಗಿ ಹೇಳಿತ್ತು. ಆದರೆ ದಿನಾಂಕವನ್ನು ನಿಗದಿ ಮಾಡಿರಲಿಲ್ಲ.

IBPS ಕ್ಲರ್ಕ್ ಪರೀಕ್ಷೆ ಫಲಿತಾಂಶ ಪ್ರಕಟ, ಡೌನ್ಲೌಡ್ ಮಾಡೋದು ಹೇಗೆ? IBPS ಕ್ಲರ್ಕ್ ಪರೀಕ್ಷೆ ಫಲಿತಾಂಶ ಪ್ರಕಟ, ಡೌನ್ಲೌಡ್ ಮಾಡೋದು ಹೇಗೆ?

ಮೇ 4 ರಂದು ಸಭೆ ನಡೆಸಿದ್ದ ಆಯೋಗ, ಮೇ 20 ರ ನಂತರ ದಿನಾಂಕ ತಿಳಿಸುವುದಾಗಿ ಪರೀಕ್ಷಾರ್ಥಿಗಳಿಗೆ ಭರವಸೆ ನೀಡಿತ್ತು. ಈ ಬಗ್ಗೆ ತನ್ನ ವೆಬ್‌ಸೈಟಿನಲ್ಲಿ ಮಾಹಿತಿ ಪ್ರಕಟಿಸಿರುವ ಆಯೋಗ, ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಪರೀಕ್ಷೆಗಳ ದಿನಾಂಕದ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಆಗಿಲ್ಲ. ಶೀಘ್ರವೇ ಪರಿಸ್ಥಿತಿಯನ್ನು ಅವಲೋಕಿಸಿ ವೇಳಾಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದೆ.

UPSC 2020 Preliminary Exam Date To Be Announced After May 21st

ಪೂರ್ವಭಾವಿ ಪರೀಕ್ಷೆಗಳ ಬಗ್ಗೆ ಅಂತಿಮ ವೇಳಾಪಟ್ಟಿಯನ್ನು ವೆಬ್‌ಸೈಟಿನಲ್ಲಿ ಪ್ರಕಟಿಸಲಾಗುವುದು ಎಂದು ಆಯೋಗ ತಿಳಿಸಿದೆ.

English summary
UPSC 2020 Preliminary Exam Date To Be Announced After May 21st. this is the 4th time of exams are postfoning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X