• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಪಹಾರ್ ಅಗ್ನಿ ದುರಂತ: ಅನ್ಸಾಲ್ ಸೋದರರಿಗೆ NBW ಬಿಸಿ

|

ನವದೆಹಲಿ, ಮಾರ್ಚ್ 27: ಉಪಹಾರ್ ಚಿತ್ರಮಂದಿರದ ಅಗ್ನಿ ಅನಾಹುತ ಪ್ರಕರಣ ಮತ್ತೆ ಕೋರ್ಟಿನಲ್ಲಿ ವಿಚಾರಣೆಗೆ ಬಂದಿದ್ದು, ಚಿತ್ರಮಂದಿರ ಮಾಲೀಕರಿರಾದ ಅನ್ಸಾಲ್ ಸೋದರರ ವಿರುದ್ಧ ಸ್ಥಳೀಯ ನ್ಯಾಯಾಲಯವೊಂದರಿಂದ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ.

ಈ ಮುಂಚೆ ಜೈಲು ಭೀತಿಯಿಂದ ಗೋಪಾಲ್ ಸೋದರರು ಪಾರಾಗಿದ್ದ ಅನ್ಸಲ್ ಸೋದರರಿಗೆ ಕೇವಲ ಒಂದು ವರ್ಷ ಜೈಲು ಶಿಕ್ಷೆ ಘೋಷಿಸಲಾಗಿತ್ತು.ಆದರೆ, ಈಗ ಪ್ರಕರಣದ ಸಾಕ್ಷ್ಯ ನಾಶ ಮಾಡಿರುವ ಆರೋಪದ ಮೇಲೆ ಅನ್ಸಾಲ್ ಸೋದರರ ವಿರುದ್ಧ ಜಾಮೀನು ರಹಿತ ವಾರೆಂಟ್ (ಎನ್ ಬಿಡಬ್ಲ್ಯೂ) ಜಾರಿಗೊಳಿಸಿ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲವು ಆದೇಶ ನೀಡಿದೆ.

1997ರ ಜೂನ್ 13ರಂದು ಬಾರ್ಡರ್ ಚಿತ್ರ ಪ್ರದರ್ಶನ ವೇಳೆ ಸಂಭವಿಸಿದ ಅಗ್ನಿ ದುರಂತದಲ್ಲಿ 59 ಮಂದಿ ಸಾವನ್ನಪ್ಪಿದ್ದರು. 103 ಜನ ಗಾಯಗೊಂಡಿದ್ದರು.

59 ಮಂದಿ ಸಾವಿಗೆ ಕಾರಣನಾದವನಿಗೆ 1 ವರ್ಷ ಜೈಲು

ಆರೋಪಿಗಳಾದ ಸುಶೀಲ್ ಅನ್ಸಾಲ್(76) ಹಾಗೂ ಗೋಪಾಲ್ ಅನ್ಸಾಲ್(77) ಅವರು ಮುಂದಿನ ಮೂರು ತಿಂಗಳಿನಲ್ಲಿ ತಲಾ 30 ಕೋಟಿ ರು ಪಾವತಿಸುವಂತೆ 2016ರಲ್ಲಿ ಸುಪ್ರೀಂಕೋರ್ಟ್ ಸೂಚಿಸಿತ್ತು.

ಡಿಸೆಂಬರ್ 2008ರಲ್ಲಿ ಹೈಕೋರ್ಟ್ ನೀಡಿದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದ್ದು, ಇಬ್ಬರಿಗೂ ಒಂದು ವರ್ಷ ಜೈಲುವಾಸ ಹಾಗೂ ತಲಾ 30 ಕೋಟಿ ರು ದಂಡ ವಿಧಿಸಲಾಗಿತ್ತು.

20 ವರ್ಷಗಳಿಂದ ಕಾನೂನು ಹೋರಾಟ ನಡೆಸಿರುವ ಸಂತ್ರಸ್ತ ಕೃಷ್ಣಮೂರ್ತಿ ದಂಪತಿ ಅವರು ಈ ಪ್ರಕರಣದಲ್ಲಿ ಸರಿಯಾದ ನ್ಯಾಯ ಸಿಗಬೇಕು, ತಮ್ಮ ಇಬ್ಬರು ಮಕ್ಕಳ ಆತ್ಮಕ್ಕೆ ಶಾಂತಿ ಸಿಗುವ ತನಕ ಹೋರಾಟ ಮುಂದುವರೆಸುವುದಾಗಿ ಹೇಳಿದ್ದಾರೆ. ಉಪಾಹಾರ್ ದುರಂತದ ಸಂತ್ರಸ್ತರ ಸಂಘ(ಎವಿಯುಟಿ) ಕಟ್ಟಿಕೊಂಡು ನ್ಯಾಯಕ್ಕಾಗಿ ಪಟಿಯಾಲ ಹೌಸ್ ಕೋರ್ಟ್ ಮೊರೆ ಹೊಕ್ಕಿದ್ದಾರೆ.

English summary
A Delhi court on Tuesday issued Non-Bailable Warrants against Sushil Ansal and Gopal Ansal for allegedly tampering with evidence in the Uphaar cinema hall fire case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X