ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ.1 ರೊಳಗೆ KYC ಅಪ್ಡೇಟ್ ಮಾಡದಿದ್ದರೆ ನಿಮ್ಮ ಬ್ಯಾಂಕ್ ಖಾತೆ ಸ್ಥಗಿತ!

|
Google Oneindia Kannada News

ನವದೆಹಲಿ, ಅಕ್ಟೋಬರ್ 10: ನಿಮ್ಮ ಕೆವೈಸಿ (Know Your Customer) ವಿವರವನ್ನು ಜನವರಿ 1 ರ ಒಳಗೆ ಬ್ಯಾಂಕ್ ಗಳಿಗೆ ನೀಡದೆ ಇದ್ದರೆ ನಿಮ್ಮ ಖಾತೆ ಸ್ಥಗಿತಗೊಳ್ಳಲಿದೆ!

ಹೌದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯದ ಹೊಸ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಎಲ್ಲಾ ಬ್ಯಾಂಕ್ ಖಾತೆದಾರರೂ ತಮ್ಮ KYC ವಿವರವನ್ನು ಆಯಾ ಬ್ಯಾಂಕ್ ಗಳಿಗೆ ನೀಡುವುದು ಕಡ್ಡಾಯವಾಗಿದೆ. ಅಕಸ್ಮಾತ್ KYC ವಿವರವನ್ನು ನೀಡುವಲ್ಲಿ ವಿಫಲರಾದರೆ ಅಂಥವರ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಆರ್ಬಿಐ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಎಸ್ಬಿಐ ಎಟಿಎಂ ವಿಥ್ ಡ್ರಾ ರಗಳೆ ಬಿಡಿ, ಕಾರ್ಡ್ ಇಲ್ಲದೆ ಕ್ಯಾಶ್ ಪಡೆಯಿರಿಎಸ್ಬಿಐ ಎಟಿಎಂ ವಿಥ್ ಡ್ರಾ ರಗಳೆ ಬಿಡಿ, ಕಾರ್ಡ್ ಇಲ್ಲದೆ ಕ್ಯಾಶ್ ಪಡೆಯಿರಿ

ಇದಕ್ಕೆ ಸಂಬಂಧಿಸಿದಂತೆ ನೀವು ಖಾತೆಯನ್ನು ಹೊಂದಿರುವ ಬ್ಯಾಂಕ್ ಗಳು ಈಗಾಗಲೇ ನಿರಂತರವಾಗಿ ತಮ್ಮ ಗ್ರಾಹಕರಿಗೆ ಎಸ್ಸೆಮ್ಮೆಸ್, ಇ ಮೇಲ್ ಗಳ ಮೂಲಕ ಮಾಹಿತಿ ನೀಡುತ್ತಿವೆ. ಎಸ್ ಬಿಐ, ಐಡಿಬಿಐ, ಐಸಿಐಸಿಐ ಸೇರಿದಂತೆ ಎಲ್ಲ ಪ್ರತಿಷ್ಠಿತ ಬ್ಯಾಂಕುಗಳೂ ಮೆಸೇಜ್ ಕಳಿಸುತ್ತಿವೆ.

Update Your KYC Before January 1 To Avoid Your Account Being Freezed

ಅಕ್ಟೋಬರ್ 01ರಿಂದ ಎಸ್ಬಿಐ ಎಟಿಎಂ ವಿಥ್ ಡ್ರಾದಲ್ಲಿ ಭಾರಿ ಬದಲಾವಣೆಅಕ್ಟೋಬರ್ 01ರಿಂದ ಎಸ್ಬಿಐ ಎಟಿಎಂ ವಿಥ್ ಡ್ರಾದಲ್ಲಿ ಭಾರಿ ಬದಲಾವಣೆ

ಜನವರಿ 1 ರೊಳಗೆ ಯಾರ್ಯಾರು ಕೆವೈಸಿ ವಿವರ ನೀಡುವುದಿಲ್ಲವೋ ಅವರ ಖಾತೆಗಳನ್ನು ಬ್ಯಾಂಕ್ ಸ್ಥಗಿತಗೊಳಿಸಲಿದೆ. ಒಂದೊಮ್ಮೆ ಖಾತೆ ಸ್ಥಗಿತಗೊಂಡರೆ ಗ್ರಾಹಕರು ಆ ಖಾತೆಯಿಂದ ಹಣ ತೆಗೆಯುವುದಕ್ಕಾಗಲೀ, ಆ ಖಾತೆಗೆ ಹಣ ಜಮೆ ಮಾಡುವುದಕ್ಕಾಗಲೀ ಸಾಧ್ಯವಿಲ್ಲ ಎಂದು ಬ್ಯಾಂಕುಗಳು ತಿಳಿಸಿವೆ.

English summary
Banks may freeze your accounts if you don't update your KYC before January 1
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X