ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ: ಏಪ್ರಿಲ್ 30 ರವರೆಗೆ ವಿಮಾನಗಳು ಹಾರಾಡುವುದು ಡೌಟ್

|
Google Oneindia Kannada News

ನವದೆಹಲಿ, ಏಪ್ರಿಲ್ 14: ಕೊರೊನಾ ಹಾವಳಿಯಿಂದ ಕಳೆದ 10 ದಿನಗಳಿಂದ ದೇಶಿ ಹಾಗೂ ಅಂತಾರಾಷ್ಟ್ರೀಯ ವಿಮಾನ ಸೇವೆ ಸ್ಥಗೀತಗೊಂಡಿದೆ. ಸದ್ಯಕ್ಕೆ ಕೊರೊನಾ ಹಾವಳಿ ನಿಲ್ಲುವಂತೆ ಕಾಣುತ್ತಿಲ್ಲವಾದ್ದರಿಂದ ಏಪ್ರೀಲ್ 30 ರವರೆಗೆ ಭಾರತದಲ್ಲಿ ವಿಮಾನಗಳು ಹಾರಾಡುವುದಿಲ್ಲ ಎನ್ನಲಾಗಿದೆ.

ಇದಕ್ಕೆ ಪೂರಕವಾಗಿ ಏಪ್ರಿಲ್ 14 ರವರೆಗೆ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಏರ್ ಇಂಡಿಯಾ, ಏಪ್ರಿಲ್ 30 ರವರೆಗೆ ತನ್ನ ಎಲ್ಲಾ ವಿಮಾನಗಳಿಗೆ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯನ್ನು ನಿಲ್ಲಿಸುವು ನಿರ್ಧಾರ ತೆಗೆದುಕೊಂಡಿದೆ.

ಕೊರೊನಾ ಹರಡುವಿಕೆ ಬಗ್ಗೆ ವಿಜ್ಞಾನಿಗಳಿಂದ ಅಘಾತಕಾರಿ ವಿಷಯ ಬಹಿರಂಗ.!ಕೊರೊನಾ ಹರಡುವಿಕೆ ಬಗ್ಗೆ ವಿಜ್ಞಾನಿಗಳಿಂದ ಅಘಾತಕಾರಿ ವಿಷಯ ಬಹಿರಂಗ.!

"ಏರ್ ಇಂಡಿಯಾ ಬುಕಿಂಗ್ ಅನ್ನು ಈಗ ಏಪ್ರಿಲ್ 30 ರವರೆಗೆ ಮುಚ್ಚಲಾಗಿದೆ. ಏಪ್ರಿಲ್ 14 ರ ನಂತರ ಲಾಕ್‌ಡೌನ್‌ ಬಗ್ಗೆ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ನಾವು ಕಾಯುತ್ತಿದ್ದೇವೆ" ಎಂದು ಏರ್ ಇಂಡಿಯಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Up To April 30th Domestic And International Aviation Services May Stop

ಒಂದು ವೇಳೆ ಏ 14 ರ ನಂತರ ಲಾಕ್‌ಡೌನ್‌ನಲ್ಲಿ ವಿಮಾನಯಾನಕ್ಕೆ ಅವಕಾಶ ಸಿಕ್ಕರೂ ಆಗ ಪ್ರಯಾಣಕರ ಸಂಖ್ಯೆ ಅತ್ಯಂತ ಕಡಿಮೆ ಇರಲಿದೆ ಎಂದು ಅಂದಾಜಿಸಬಹುದು. ಹೀಗಾಗಿ ಮುಂಗಡ ಟಿಕೆಟ್ ಕಾಯ್ದಿರುಸುವುದನ್ನು ಏಪ್ರಿಲ್ 30 ರವೆರೆಗೆ ತಡೆಹಿಡಿಯುವುದೇ ಸೂಕ್ತ ಎಂಬ ನಿರ್ದಾರ ತೆಗೆದುಕೊಂಡಿದ್ದೇವೆ ಎಂದು ಏರ್ ಇಂಡಿಯಾ ತಿಳಿಸಿದೆ. ಏರ್‌ ಇಂಡಿಯಾ ಸೇರಿದಂತೆ ಇನ್ನುಳಿದ ದೇಶಿ ವಿಮಾನಯಾನ ಸಂಸ್ಥೆಗಳು ಇದೇ ಹಾದಿ ತುಳಿಯಬಹುದು ಎನ್ನಲಾಗಿದೆ.

English summary
Up To April 30th Domestic And International Aviation Services May Stop ahead of corona lockdown in india. reports says.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X