ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರ ಸಂತ್ರಸ್ತೆ ಸ್ಥಿತಿ ಗಂಭೀರ: ಆ ಪಾಪಿಗಳು ನೇಣಿಗೇರುವುದನ್ನು ನೋಡಬೇಕು ಎಂದ ಯುವತಿ

|
Google Oneindia Kannada News

ನವದೆಹಲಿ, ಡಿಸೆಂಬರ್ 6: ಅತ್ಯಾಚಾರ ಪ್ರಕರಣದ ಆರೋಪಿಗಳು ಬೆಂಕಿ ಹಚ್ಚಿ ಸಾಯಿಸಲು ಪ್ರಯತ್ನಿಸಿದ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ದೇಹ ಶೇ 90ರಷ್ಟು ಸುಟ್ಟುಹೋಗಿದೆ. ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ. ಆದರೆ ತನ್ನ ಮೇಲೆ ದೌರ್ಜನ್ಯ ಎಸಗಿದ ಆರೋಪಿಗಳು ನೇಣುಗಂಬಕ್ಕೆ ಏರುವುದನ್ನು ನೋಡಲು ಬಯಸಿರುವುದಾಗಿ ಆಕೆ ಹೇಳಿಕೊಂಡಿದ್ದಾರೆ.

ಗುರುವಾರ 23 ವರ್ಷದ ಸಂತ್ರಸ್ತೆ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದ ನ್ಯಾಯಾಲಯಕ್ಕೆ ತೆರಳುತ್ತಿದ್ದಾಗ ಐವರು ಆರೋಪಿಗಳು ಆಕೆಯನ್ನು ಸಜಿವ ಹದನ ಮಾಡಲು ಪ್ರಯತ್ನಿಸಿದ್ದರು. ಆಕೆಯನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಆಕೆಯ ಪರಿಸ್ಥಿತಿ ತರಾ ಚಿಂತಾಜನಕವಾಗಿದೆ.

ಬೆಂಕಿಯಲ್ಲಿ ಬೆಂದ ಉನ್ನಾವೊ ರೇಪ್ ಸಂತ್ರಸ್ತೆ ಸ್ಥಿತಿ ಗಂಭೀರ ಬೆಂಕಿಯಲ್ಲಿ ಬೆಂದ ಉನ್ನಾವೊ ರೇಪ್ ಸಂತ್ರಸ್ತೆ ಸ್ಥಿತಿ ಗಂಭೀರ

ಕಳೆದ ಡಿಸೆಂಬರ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಆರೋಪಿಗಳು ಆಗಿರುವ ಇಬ್ಬರು ಸೇರಿದಂತೆ ಐವರು ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿಹಚ್ಚಿದ್ದರು. ಆರೋಪಿಗಳನ್ನು ಶುಭಂ ತ್ರಿವೇದಿ, ಶಿವಂ, ಹರಿಶಂಕರ್, ಉಮೇಶ್ ಮತ್ತು ರಾಮ್ ಕಿಶೋರ್ ಎಂದು ಗುರುತಿಸಲಾಗಿದೆ.

ಅವರು ನೇಣಿಗೇರುವುದನ್ನು ನೋಡಬೇಕು

ಅವರು ನೇಣಿಗೇರುವುದನ್ನು ನೋಡಬೇಕು

ಸಾವು ಬದುಕಿನ ನಡುವೆ ಹೋರಾಡುತ್ತಿರುವ ಸಂತ್ರಸ್ತೆ, 'ಅಣ್ಣಾ ನನ್ನನ್ನು ದಯವಿಟ್ಟು ಉಳಿಸು. ನಾನು ಸಾಯಲು ಬಯಸಿಲ್ಲ. ನನಗೆ ಈ ಗತಿ ತಂದವರು ನೇಣಿಗೆ ಏರುವುದನ್ನು ನಾನು ನೋಡಲು ಬಯಸಿದ್ದೇನೆ' ಎಂದು ಸಹೋದರನ ಬಳಿ ಹೇಳಿಕೊಂಡಿದ್ದಾರೆ.

ಯೋಗಿ ಆಡಳಿತದಲ್ಲಿ ಅತ್ಯಾಚಾರಿಗಳ ದರ್ಬಾರ್: ಜಾಮೀನು ಪಡೆದ ದಿನವೇ ಸಂತ್ರಸ್ತೆಗೆ ಬೆಂಕಿ ಇಟ್ಟ ಆರೋಪಿಯೋಗಿ ಆಡಳಿತದಲ್ಲಿ ಅತ್ಯಾಚಾರಿಗಳ ದರ್ಬಾರ್: ಜಾಮೀನು ಪಡೆದ ದಿನವೇ ಸಂತ್ರಸ್ತೆಗೆ ಬೆಂಕಿ ಇಟ್ಟ ಆರೋಪಿ

ಶೇ 90ರಷ್ಟು ಸುಟ್ಟು ಹೋಗಿದೆ

ಶೇ 90ರಷ್ಟು ಸುಟ್ಟು ಹೋಗಿದೆ

ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿರುವ ಸಂತ್ರಸ್ತೆಯನ್ನು ಉತ್ತರ ಪ್ರದೇಶದಿಂದ ದೆಹಲಿಯ ಸಫ್ದಾತ್‌ಜಂಗ್ ಆಸ್ಪತ್ರೆಗೆ ಗುರುವಾರ ಸಂಜೆ ಏರ್‌ಲಿಫ್ಟ್ ಮಾಡಲಾಗಿತ್ತು. 'ಮುಂದಿನ 24-48 ಗಂಟೆಗಳ ಅವಧಿ ಅತ್ಯಂತ ಗಂಭೀರವಾಗಿದೆ. ಆಕೆ ಈಗ ವೆಂಟಿಲೇಟರ್‌ನಲ್ಲಿ ಇದ್ದಾರೆ. ನಾವು ನಮ್ಮ ಪ್ರಯತ್ನ ಮಾಡುತ್ತಿದ್ದೇವೆ. ಆಕೆಯ ದೇಹ ಶೇ 90ರಷ್ಟು ಸುಟ್ಟು ಹೋಗಿದೆ' ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಒಬ್ಬ ಆರೋಪಿಯನ್ನು ಮಾತ್ರ ಬಂಧಿಸಿದ್ದರು

ಒಬ್ಬ ಆರೋಪಿಯನ್ನು ಮಾತ್ರ ಬಂಧಿಸಿದ್ದರು

ಉನ್ನಾವೊ ಬಳಿ ಗ್ರಾಮವೊಂದರಲ್ಲಿ 23 ರ ಯುವತಿಯ ಮೇಲೆ ಇಬ್ಬರು ಯುವಕರು ಅತ್ಯಾಚಾರ ಎಸಗಿ ಅದನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು. ಇದರ ಬಗ್ಗೆ ಯುವತಿಯು ಮಾರ್ಚ್‌ ನಲ್ಲಿಯೇ ದೂರು ದಾಖಲಿಸಿದ್ದರು. ಇಬ್ಬರ ವಿರುದ್ಧ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದರು. ಪೊಲೀಸರು ಎಫ್‌ಐಆರ್ ದಾಖಲಿಸಿದ ಕೆಲವು ದಿನಗಳ ನಂತರ ಒಬ್ಬ ಆರೋಪಿಯನ್ನು ಮಾತ್ರವೇ ಬಂಧಿಸಿದ್ದರು. ಮತ್ತೊಬ್ಬನನ್ನು ಈ ವರೆಗೂ ಬಂಧಿಸಿಲ್ಲ. ಒಬ್ಬ ಆರೋಪಿಗೆ 10 ದಿನಗಳ ಹಿಂದೆ ಜಾಮೀನು ಸಿಕ್ಕಿದೆ.

ಉನ್ನಾವೋ ಅತ್ಯಾಚಾರ ಸಂತ್ರಸ್ಥೆ ಬಿಚ್ಚಿಟ್ಟ ಆ ಕರಾಳ ದಿನದ ನೆನಪು...ಉನ್ನಾವೋ ಅತ್ಯಾಚಾರ ಸಂತ್ರಸ್ಥೆ ಬಿಚ್ಚಿಟ್ಟ ಆ ಕರಾಳ ದಿನದ ನೆನಪು...

ಕುಟುಂಬಕ್ಕೆ ನಿರಂತರ ಬೆದರಿಕೆ

ಕುಟುಂಬಕ್ಕೆ ನಿರಂತರ ಬೆದರಿಕೆ

ನ್ಯಾಯಾಲಯದ ವಿಚಾರಣೆಯಲ್ಲಿ ಭಾಗವಹಿಸಲು ಬರುವ ವೇಳೆಯಲ್ಲಿ ಇಬ್ಬರು ಆರೋಪಿಗಳು ಸೇರಿದಂತೆ ಐದು ಮಂದಿ ಆಕೆ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು. ಆಕೆಯ ಮೇಲೆ ಹಲವು ಬಾರಿ ಹತ್ಯೆಯ ಪ್ರಯತ್ನಗಳು ನಡೆದಿದ್ದವು. ಪೋಷಕರು ಮತ್ತು ಆಕೆಗೆ ಬೆಂಬಲವಾಗಿ ನಿಂತಿರುವ ಸಂಬಂಧಿಕರಿಗೆ ನಿರಂತರ ಬೆದರಿಕೆ ಕರೆಗಳು ಬರುತ್ತಿವೆ ಎಂದು ಆರೋಪಿಸಲಾಗಿದೆ. ಆಕೆ ಪ್ರಯಾಣಿಸುತ್ತಿದ್ದ ಕಾರ್‌ಗೆ ಟ್ರಕ್ ಡಿಕ್ಕಿ ಹೊಡೆಸಿ ಕೊಲ್ಲುವ ಪ್ರಯತ್ನವೂ ನಡೆದಿತ್ತು.

English summary
Unnao rape survivor who is fighting between life and death said, she want to see the accused getting a death sentence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X