ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉನ್ನಾವೋ ಅತ್ಯಾಚಾರ ಕೇಸ್: ಬಿಜೆಪಿ ನಾಯಕ ಕುಲ್‌ದೀಪ್‌ ಸೇಂಗರ್‌ಗೆ 10 ವರ್ಷ ಜೈಲು

|
Google Oneindia Kannada News

ದೆಹಲಿ, ಮಾರ್ಚ್ 13: ಉತ್ತರ ಪ್ರದೇಶದ ಉಚ್ಚಾಟಿತ ಬಿಜೆಪಿ ನಾಯಕ ಕುಲ್‌ದೀಪ್‌ ಸಿಂಗ್ ಸೇಂಗರ್ ಗೆ ದೆಹಲಿ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿ 10 ಲಕ್ಷ ದಂಢ ಪಾವತಿಸುವಂತೆ ಆದೇಶ ನೀಡಿದೆ.

ಉನ್ನಾವೋ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಬಾಲಕಿ ತಂದೆಯ ಕೊಲೆಗೆ ಕುಲ್‌ದೀಪ್‌ ಸಿಂಗ್ ಸೇಂಗರ್ ಕಾರಣ ಎಂದು ದೆಹಲಿ ಜಿಲ್ಲಾ ನ್ಯಾಯಾಲಯ ನಿರ್ಧರಿಸಿ, ಶಿಕ್ಷೆಯ ಪ್ರಮಾಣ ಘೋಷಣೆ ಮಾಡಿದೆ.

ಉನ್ನಾವೋ ಅತ್ಯಾಚಾರ ತೀರ್ಪು; ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲಉನ್ನಾವೋ ಅತ್ಯಾಚಾರ ತೀರ್ಪು; ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ

2017ರಲ್ಲಿ ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯ ಬಂಗೇರಮಾವು ಕ್ಷೇತ್ರದ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್‌ ಹಾಗೂ ಆತನ ಸಹಚರರು 17 ವರ್ಷದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ಕುಲ್‌ದೀಪ್‌ ಸಿಂಗ್ ಸೇಂಗರ್ ಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು.

Kuldeep Singh Sengar To 10 years Jail For Death Of Victims Father

ಅತ್ಯಾಚಾರ ಘಟನೆ ನಡೆದ ಬಳಿಕ ಸಂತ್ರಸ್ತೆ ಬಾಲಕಿಯ ತಂದೆ ನಿರಂತರವಾಗಿ ಪೊಲೀಸರ ಬಳಿ ದೂರು ದಾಖಲಿಸುವಂತೆ ಒತ್ತಡ ಹೇರುತ್ತಿದ್ದರು. ಆದರೆ, ಪೊಲೀಸರು ದೂರು ಸ್ವೀಕರಿಸಿರಲಿಲ್ಲ. ಕೊನೆಗೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಅಡಿ ಬಾಲಕಿ ತಂದೆಯನ್ನು ಬಂಧಿಸಿ ಲಾಕಪ್‌ನಲ್ಲಿ ಇಟ್ಟರು. ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯ ತಂದೆ ಪೊಲೀಸರ ಕಿರುಕುಳದಿಂದ ಮೃತಪಟ್ಟರು.

ಉನ್ನಾವೋ ಅತ್ಯಾಚಾರ; ಬಿಜೆಪಿ ಉಚ್ಚಾಟಿತ ಶಾಸಕ ಕುಲದೀಪ್ ಸೆಂಗಾರ್‌ಗೆ ಜೀವಾವಧಿ ಶಿಕ್ಷೆಉನ್ನಾವೋ ಅತ್ಯಾಚಾರ; ಬಿಜೆಪಿ ಉಚ್ಚಾಟಿತ ಶಾಸಕ ಕುಲದೀಪ್ ಸೆಂಗಾರ್‌ಗೆ ಜೀವಾವಧಿ ಶಿಕ್ಷೆ

ಬಳಿಕ ಈ ಪ್ರಕರಣ ಮತ್ತಷ್ಟು ಗಂಭೀರತೆ ಪಡೆದುಕೊಂಡಿತ್ತು. ಅಲಹಬಾದ್‌ನಿಂದ ದೆಹಲಿ ಕೋರ್ಟ್‌ಗೆ ಈ ಕೇಸ್‌ ವರ್ಗಾವಣೆ ಆಗಿತ್ತು. ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಕುಲ್‌ದೀಪ್‌ ಸಿಂಗ್ ಸೇಂಗರ್‌ಗೆ ಈಗ ಬಾಲಕಿಯ ತಂದೆ ಹತ್ಯೆ ಪ್ರಕರಣದಲ್ಲಿ 10 ವರ್ಷ ಹೆಚ್ಚುವರಿ ಘೋಷಿಸಲಾಗಿದೆ.

English summary
Unnao Rape case: Delhi court has sentenced all convicts including expelled BJP MLA Kuldeep Singh Sengar to 10 yrs imprisonment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X