ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿರಣ್ ಬೇಡಿ ಕುರಿತ ಕುತೂಹಲಕಾರಿ ವಿಷಯಗಳು...

By Kiran B Hegde
|
Google Oneindia Kannada News

ನವದೆಹಲಿ, ಜ. 19: ಒಂದು ಕಾಲದ ಸೂಪರ್ ಕಾಪ್ ಕಿರಣ್ ಬೇಡಿ ಭಾರತೀಯ ಜನತಾ ಪಕ್ಷವನ್ನು ಸೇರಿದ್ದಾರೆ. ಅಣ್ಣಾ ಹಜಾರೆ ಜೊತೆ ಚಳವಳಿಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದ ಕಿರಣ್ ಬೇಡಿ ಸೇರ್ಪಡೆಯಿಂದ ನವದೆಹಲಿಯಲ್ಲಿ ಬಿಜೆಪಿಗೆ ಭೀಮಬಲ ಬಂದಿದೆ ಎಂದೇ ನಂಬಲಾಗುತ್ತಿದೆ.

ಕಿರಣ್ ಬೇಡಿ ಎಷ್ಟೇ ಜನಪ್ರಿಯತೆ ಹೊಂದಿದ್ದರೂ ಅವರ ಕುರಿತು ಸಾಮಾನ್ಯರಿಗೆ ಇನ್ನೂ ತಿಳಿದಿರದ ಹಾಗೂ ಆಸಕ್ತಿದಾಯಕವಾದ ಹಲವು ಸಂಗತಿಗಳಿವೆ. [ಮೋದಿ ಮೋಡಿಗೆ ಬಿಜೆಪಿ ವಶವಾದವರು]

kiran
  • ಅಮೃತ ಸರ ಮೂಲದ ಕಿರಣ್ ಬೇಡಿ ಪೊಲೀಸ್ ವೃತ್ತಿಯಲ್ಲಿರುವಾಗಲೇ 44ನೇ ವಯಸ್ಸಿನಲ್ಲಿ ನವದೆಹಲಿಯ ಐಐಟಿಯಿಂದ ಸಾಮಾಜಿಕ ವಿಜ್ಞಾನದಲ್ಲಿ ಡಾಕ್ಟರೇಟ್ ಪಡೆದರು.
  • ಅಮೃತಸರದ ಕಾಲೇಜೊಂದರಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. [ಚುನಾವಣೆಗೆ ಮುನ್ನ ಬಿಜೆಪಿ ಸೇರಿದ ಬೇಡಿ]
  • ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಸೇರಿದ ಪ್ರಥಮ ಮಹಿಳೆ ಕಿರಣ್ ಬೇಡಿ.
  • ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಪ್ರಧಾನಿ ಇಂದಿರಾ ಗಾಂಧಿ ಅವರ ಕಾರ್‌ಗೆ ದಂಡ ಹಾಕಿದ್ದರು.
  • ಮಾದಕ ದ್ರವ್ಯ ನಿಯಂತ್ರಣ, ಸಂಚಾರ ನಿರ್ವಹಣೆ ಮತ್ತು ವಿಐಪಿ ರಕ್ಷಣೆಯಲ್ಲಿ ಅವರದ್ದು ಪ್ರಮುಖ ಪಾತ್ರ.
  • ನವದೆಹಲಿಯ ತಿಹಾರ್ ಜೈಲಿನಲ್ಲಿ ಆರ್ಟ್ ಆಫ್ ಲಿವಿಂಗ್‌ನಂತರ ಕಾರ್ಯಕ್ರಮ ಹಮ್ಮಿಕೊಂಡು ಕೈದಿಗಳ ಮನಃಪರಿವರ್ತನೆಗೆ ಕೈಜೋಡಿಸಿದ್ದರು.
  • ಕೈದಿಗಳಿಗೆ ಯೋಗ, ವಿಪಾಸನಾ ಧ್ಯಾನ ಹಾಗೂ ಸಾಕ್ಷರ ಕಾರ್ಯಕ್ರಮ ಜಾರಿಗೆ ತಂದಿದ್ದರು.
  • ಎಷ್ಟೇ ಖ್ಯಾತಿ ಗಳಿಸಿದ್ದರೂ ಪೊಲೀಸ್ ಇಲಾಖೆಯಿಂದ ಕೊನೆಯಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದರು.

ಕಿರಣ್ ಬೇಡಿ ಎಷ್ಟೇ ಪ್ರಖ್ಯಾತರಾಗಿದ್ದರೂ ಅವರ ಸುತ್ತ ವಿವಾದಗಳೂ ಇವೆ.

  • ವಿಚಾರಣಾಧೀನ ವಿದೇಶಿ ಕೈದಿಯ ಆರೋಗ್ಯ ಕುರಿತು ಕಾಳಜಿ ವಹಿಸದ ಕಿರಣ್ ಬೇಡಿ ಅವರ ಧೋರಣೆಯನ್ನು ಸುಪ್ರೀಂ ಕೋರ್ಟ್ 1993ರಲ್ಲಿ ಟೀಕಿಸಿತ್ತು. ಇದೇ ಕಾರಣಕ್ಕಾಗಿ ನ್ಯಾಯಾಂಗ ನಿಂದನೆಯನ್ನೂ ಬೇಡಿ ಎದುರಿಸಿದ್ದರು. [ಕಿರಣ್ ಬೇಡಿ ಮುಂದಿನ ಸಿಎಂ?]
  • ತಮ್ಮ ಕಚೇರಿ ಎದುರು ಪ್ರತಿಭಟಿಸುತ್ತಿದ್ದ ವಕೀಲರ ಮೇಲೆ ಲಾಠಿ ಚಾರ್ಜ್ ನಡೆಸಿದ್ದಕ್ಕಾಗಿ ಟೀಕೆಗೊಳಗಾಗಿದ್ದರು. ಓರ್ವ ವಕೀಲನ ಬಂಧನ ಖಂಡಿಸಿ ವಕೀಲರು ಪ್ರತಿಭಟನೆ ನಡೆಸುತ್ತಿದ್ದರು.
  • ಕಿರಣ್ ಬೇಡಿ ನಿಲುವಳಿ ಉಲ್ಲಂಘಿಸಿದ್ದಾರೆಂದು ಆರೋಪಿಸಿ ಅವರ ವಿರುದ್ಧ ಸಂಸದರು ಕ್ರಮಕ್ಕೆ ಆಗ್ರಹಿಸಿದ್ದರು.
  • ಲೋಕಪಾಲ್ ಬಿಲ್‌ಗಾಗಿ ಪ್ರತಿಭಟಿಸುತ್ತಿದ್ದಾಗ ಸಂಸದರನ್ನು ಅಪಹಾಸ್ಯ ಮಾಡಿದ ಆರೋಪಕ್ಕೊಳಗಾಗಿದ್ದರು.
  • ವಿಮಾನದಲ್ಲಿ ಎರಡನೇ ದರ್ಜೆಯಲ್ಲಿ ಪ್ರಯಾಣಿಸಿದ್ದರೂ, ಪ್ರಥಮ ದರ್ಜೆ ಖರ್ಚು ಕೇಳಿದ್ದರು. ತಮ್ಮ ಎನ್‌ಜಿಓ ನಡೆಸಲು ಈ ಹಣ ಉಪಯೋಗಿಸಿದ್ದೇನೆಯೇ ಹೊರತು, ವೈಯಕ್ತಿಕ ಉದ್ದೇಶಕ್ಕಲ್ಲ ಎಂದು ಅವರು ಸ್ಪಷ್ಟೀಕರಣ ನೀಡಿದ್ದರು. [ಕಿರಣ್ ಬೇಡಿ ಸಂದರ್ಶನ]
  • ಬೇಡಿ ಅವರ ಮಗಳು ಭಾರತದ ಈಶಾನ್ಯ ಭಾಗದ ವಿದ್ಯಾರ್ಥಿಗಳ ಕೋಟಾ ಉಪಯೋಗಿಸಿದ್ದರೂ, ನವದೆಹಲಿಯ ಕಾಲೇಜೊಂದರಲ್ಲಿ ಎಂಬಿಬಿಎಸ್ ಸೀಟು ಪಡೆದಿದ್ದರು. ಆದರೆ, ಮಗಳನ್ನು ಸಮರ್ಥಿಸಿಕೊಂಡಿದ್ದ ಅವರು, ಕೇಂದ್ರ ಸರ್ಕಾರಿ ನೌಕರರಿಗೆ ಈ ಸೌಲಭ್ಯವಿದೆ ಎಂದು ತಿಳಿಸಿದ್ದರು.

ನಿರ್ಧಾರಗಳಲ್ಲಿ ದಿಢೀರ್ ಬದಲಾವಣೆ.

  • ಗುಜರಾತ್ ದಂಗೆ ಕುರಿತು ನರೇಂದ್ರ ಮೋದಿ ಅವರನ್ನು ಟೀಕಿಸಿದ್ದರು. ಈಗ ಮೋದಿ ನೇತೃತ್ವದ ಬಿಜೆಪಿಯನ್ನು ಸೇರಿದ್ದಾರೆ.
  • ಅರವಿಂದ ಕೇಜ್ರಿವಾಲ್ ರಾಜಕೀಯ ಪಕ್ಷ ಸ್ಥಾಪಿಸಿದ್ದನ್ನು ವಿರೋಧಿಸಿದ್ದ ಕಿರಣ್, ಈಗ ಬಿಜೆಪಿ ಸೇರಿದ್ದಾರೆ.
  • ಕೇಜ್ರೀವಾಲ್ ಅವರು 2014ರಲ್ಲಿ ಆಪ್ ಟಿಕೆಟ್‌ನೊಂದಿಗೆ ನವದೆಹಲಿಯಲ್ಲಿ ಸ್ಪರ್ಧಿಸಲು ಬೇಡಿಯವರನ್ನು ಆಹ್ವಾನಿಸಿದ್ದರು. ಆದರೆ, ತಾವೊಬ್ಬ 'ರಾಜಕೀಯೇತರ ವ್ಯಕ್ತಿ' ಎಂದು ಹೇಳಿ ಅದನ್ನು ತಿರಸ್ಕರಿಸಿದ್ದರು.
English summary
Kiran Bedi once a famous police officer in India. But people are unknown and interesting facts about her many things. Here are a few points.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X