ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಿಂದ ಭಾರತಕ್ಕೆ ವೈದ್ಯಕೀಯ ಸಾಮಗ್ರಿಗಳ ಹೊತ್ತು ಬಂದಳಿದಿವೆ 6 ವಿಮಾನಗಳು

|
Google Oneindia Kannada News

ನವದೆಹಲಿ, ಮೇ 07: ಕೊರೊನಾ ಎರಡನೇ ಅಲೆಯಲ್ಲಿ ಭಾರತದ ಜತೆಯಾಗಿರುತ್ತೇನೆ ಎಂದು ಹೇಳಿದ್ದ ಅಮೆರಿಕ ಇದೀಗ ತನ್ನ ಮಾತು ಉಳಿಸಿಕೊಂಡಿದೆ.

ಅಮೆರಿಕದಿಂದ 6 ವಿಮಾನಗಳಲ್ಲಿ ವಿವಿಧ ವೈದ್ಯಕೀಯ ಸಾಮಗ್ರಿಗಳನ್ನು ಭಾರತಕ್ಕೆ ಕಳುಹಿಸಿಕೊಟ್ಟಿದೆ. ಕಳೆದ ಒಂದು ವಾರದಲ್ಲಿ ಅಮೆರಿಕವು ಜೀವ ಉಳಿಸುವ ತುರ್ತು ಅಗತ್ಯವುಳ್ಳ ವೈದ್ಯಕೀಯ ಸಾಮಗ್ರಿಗಳನ್ನು ಆರು ವಿಮಾನಗಳಲ್ಲಿ ಕಳುಹಿಸಿಕೊಟ್ಟಿದೆ.

ಭಾರತದಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡುವಂತೆ ಅಮೆರಿಕ ಸಲಹೆಭಾರತದಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡುವಂತೆ ಅಮೆರಿಕ ಸಲಹೆ

ತೀವ್ರ ಸಮಸ್ಯೆಯಿಂದ ಬಳಲುತ್ತಿರುವವರ ಜೀವ ಉಳಿಸಲು 20 ಸಾವಿರ ಕೋರ್ಸಸ್ ಅಂದರೆ 125,000 ವಯಲ್ಸ್‌ ರೆಮ್‌ಡೆಸಿವಿರ್ ಲಸಿಕೆಯನ್ನು ಕಳುಹಿಸಿದೆ.
ಸೂಮಾರು 1500 ಆಕ್ಸಿಜನ್ ಸಿಲಿಂಡರ್‌ಗಳು, ಹಾಗೆಯೇ 550 ಮೊಬೈಲ್ ಆಕ್ಸಿಜನ್ ಸಿಲಿಂಡರ್‌ಗಳನ್ನು ಕಳುಹಿಸಿದೆ.

United States Delivers Six Planes To india With Emergency Medical Supplies

ಹಾಗೆಯೇ ಅದರ ಜತೆಗೆ 2.5 ಮಿಲಿಯನ್ ಎನ್‌95 ಮಸ್ಕ್ ಕಳುಹಿಸಿದೆ, 210 ಪಲ್ಸ್ ಆಕ್ಸಿಮೀಟರ್‌ಗಳನ್ನು ಕಳುಹಿಸಿದೆ. 400 ಕ್ಕೂ ಹೆಚ್ಚು ಆಮ್ಲಜನಕ ಸಿಲಿಂಡರ್‌ಗಳು, ಸುಮಾರು ಒಂದು ಮಿಲಿಯನ್ ಕ್ಷಿಪ್ರ ಕೊರೊನಾ ಪರೀಕ್ಷಾ ಕಿಟ್‌ಗಳು ಮತ್ತು ಇತರ ಆಸ್ಪತ್ರೆ ಉಪಕರಣಗಳೊಂದಿಗೆ ಸೂಪರ್ ಗ್ಯಾಲಕ್ಸಿ ಮಿಲಿಟರಿ ಟ್ರಾನ್ಸ್‌ಪೋರ್ಟರ್ ಇಂದು ಬೆಳಿಗ್ಗೆ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದಿದೆ.

ಕೆಲವು ದಿನಗಳ ಹಿಂದೆ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ನಿರಂತರ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದ್ದರು.

"ಸಾಂಕ್ರಾಮಿಕ ರೋಗದ ಆರಂಭದಲ್ಲಿ ನಾವು ತೊಂದರೆಗೊಳಗಾಗಿದ್ದಾಗ ಭಾರತವು ನಮಗೆ ತುರ್ತು ಸಹಾಯ ಮಾಡಿದೆ. ಅದರಂತೆ ಭಾರತದ ಅಗತ್ಯ ಸಮಯದಲ್ಲಿ ನಾವು ಸಹಾಯ ಮಾಡಲು ನಿರ್ಧರಿಸಿದ್ದೇವೆ" ಎಂದು ಟ್ವೀಟ್​ನಲ್ಲಿ ತಿಳಿಸಿದ್ದರು.

English summary
Through a massive mobilisation effort, the U.S. Government is delivering on its commitment to stand with the people of India as they fight a devastating second wave of COVID-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X