• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿ ಜತೆ ಅಮೆರಿಕದ ಅತಿಥಿಗಳು, ವೀಸಾ ಬಗ್ಗೆ ಚರ್ಚೆ!

By Mahesh
|

ನವದೆಹಲಿ, ಫೆಬ್ರವರಿ 22: ಅಮೆರಿಕ ಕಾಂಗ್ರೆಸ್ಸಿನ ಇಪ್ಪತ್ತಾರು ಸದಸ್ಯರ ಉಭಯಪಕ್ಷೀಯ ಜಂಟಿ ನಿಯೋಗ ಮಂಗಳವಾರದಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು. ಈ ಸಂದರ್ಭದಲ್ಲಿ ಎಚ್ 1 ವೀಸಾ ನಿಯಮದಲ್ಲಿ ಸಡಿಲಿಕೆ, ಭಾರತದ ಕೌಶಲ್ಯಪೂರ್ಣ ಉದ್ಯೋಗಿಗಳಿಂದ ಅಮೆರಿಕಕ್ಕೆ ಆಗುತ್ತಿರುವ ಕೊಡುಗೆ ಬಗ್ಗೆ ಮೋದಿ ಅವರು ಚರ್ಚಿಸಿದರು ಎಂದು ತಿಳಿದು ಬಂದಿದೆ.

ಪ್ರಧಾನಮಂತ್ರಿಯವರು ಕಾಂಗ್ರೆಸ್ ಪ್ರತಿನಿಧಿಗಳನ್ನು ಭಾರತಕ್ಕೆ ಸ್ವಾಗತಿಸಿ, ಅಮೆರಿಕದ ಹೊಸ ಆಡಳಿತ ಮತ್ತು ಕಾಂಗ್ರೆಸ್ ನೊಂದಿಗೆ ದ್ವಿಪಕ್ಷೀಯ ವಿನಿಮಯದ ಉತ್ತಮ ಆರಂಭ ಶುಭ ಸೂಚನೆಯಾಗಿದೆ ಎಂದು ಅವರು ಹೇಳಿದರು.[ಎಚ್ 1 ಬಿ ಎಫೆಕ್ಟ್: ಇನ್ಫಿ,ವಿಪ್ರೋ, ಟಿಸಿಎಸ್ ಷೇರು ಕುಸಿತ]

ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರೊಂದಿಗಿನ ಧನಾತ್ಮಕ ಸಂವಾದವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಆಳವಾಗಿರುವ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಹಂಚಿಕೆಯ ಬದ್ಧತೆಯನ್ನು ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಭಾರತ ಮತ್ತು ಅಮೆರಿಕದ ಪಾಲುದಾರಿಕೆಗೆ ಕಾಂಗ್ರೆಸ್ ನ ಉಭಯಪಕ್ಷೀಯ ಬೆಂಬಲವನ್ನು ಅವರು ಗುರುತಿಸಿದರು.

ಪರಸ್ಪರರ ಪ್ರಗತಿಗೆ ಹಲವಾರು ವರ್ಷಗಳಿಂದ ಕೊಡುಗೆ ನೀಡುತ್ತಿರುವ ಜನರೊಂದಿಗಿನ ಸಂಪರ್ಕ ಸೇರಿದಂತೆ, ಎರಡೂ ರಾಷ್ಟ್ರಗಳು ಇನ್ನೂ ಹೆಚ್ಚು ಆಪ್ತವಾಗಿ ಕಾರ್ಯ ನಿರ್ವಹಿಸಬಹುದಾದ ಕ್ಷೇತ್ರಗಳ ಮೇಲೆ ಪ್ರಧಾನಿಯವರು ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು.

ಈ ನಿಟ್ಟಿನಲ್ಲಿ, ಅಮೆರಿಕದ ಆರ್ಥಿಕತೆ ಮತ್ತು ಸಮಾಜವನ್ನು ಶ್ರೀಮಂತಗೊಳಿಸುವಲ್ಲಿ ಭಾರತೀಯ ಪ್ರತಿಭಾವಂತರ ಕೌಶಲ್ಯದ ಮಹತ್ವ ಪಾತ್ರವನ್ನು ಅವರು ಉಲ್ಲೇಖಿಸಿದರು. ಪ್ರತಿಫಲನಾತ್ಮಕ, ಸಮತೋಲಿತ ಮತ್ತು ದೂರದರ್ಶಿತ್ವದ ದೃಷ್ಟಿಕೋನವುಳ್ಳ ನುರಿತ ವೃತ್ತಿಪರರ ಸುಗಮ ಸಂಚಾರ ಅಭಿವೃದ್ಧಿಪಡಿಸಲು ಅವರು ಒತ್ತಾಯಿಸಿದರು.

ಮೋದಿ ಜತೆ ಸತ್ಯ ನಡೆಲ್ಲಾ

ಮೋದಿ ಜತೆ ಸತ್ಯ ನಡೆಲ್ಲಾ

ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೆಲ್ಲಾ ಅವರು ಮಾತನಾಡಿ, ಮೈಕ್ರೋಸಾಫ್ಟ್ ಸಂಸ್ಥೆ ಸೇರಿ ಅಲ್ಲಿ ಉನ್ನತ ಹುದ್ದೇಗೇರಲು ಭಾರತದ ವೀಸಾ ನೀತಿ ಹಾಗೂ ಕೌಶಲ್ಯ ಪೂರ್ಣ ಉದ್ಯೋಗಿಗಳಿಗೆ ನೀಡುವ ಪ್ರೋತ್ಸಾಹವೇ ಕಾರಣ ಎಂದರು. ಆದರೆ, ಎಚ್ 1 ವೀಸಾ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಲಿಲ್ಲ.

26 ಮಂದಿ ಯುಎಸ್ ಪ್ರತಿನಿಧಿಗಳು

26 ಮಂದಿ ಯುಎಸ್ ಪ್ರತಿನಿಧಿಗಳು

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವೀಸಾ ನೀತಿಯ ದೆಸೆಯಿಂದ ಸುಮಾರು 150 ಬಿಲಿಯನ್ ಡಾಲರ್ ಮೌಲ್ಯದ ಭಾರತದ ಐಟಿ ಕ್ಷೇತ್ರ ಆತಂಕದಲ್ಲಿದೆ. ವೀಸಾ ನೀತಿಯಲ್ಲಿ ಮಾರ್ಪಾಟು ಹಾಗೂ ಎಚ್ 1 ಬಿ ವೀಸಾ ಪಡೆಯುವ ಪ್ರತಿಭಾವಂತರ ಬಗ್ಗೆ ಮೋದಿ ಅವರು ಹೆಚ್ಚಿನ ಒತ್ತು ನೀಡಿ ವಿವರಿಸಿದರು ಎಂದು ತಿಳಿದು ಬಂದಿದೆ.

ಎಚ್ 1 ಬಿ ವೀಸಾ ಭಾರತೀಯರೇ ಮುಂದೆ

ಎಚ್ 1 ಬಿ ವೀಸಾ ಭಾರತೀಯರೇ ಮುಂದೆ

ಪ್ರತಿ ವರ್ಷ ಸುಮಾರು 65,000 ಎಚ್ 1 ಬಿ ವೀಸಾ ನೀಡಲಾಗುತ್ತಿದೆ. ಈ ಮಾದರಿ ವೀಸಾ ಪಡೆಯುವುದರಲ್ಲಿ ಭಾರತೀಯರೇ ಮುಂದಿದ್ದಾರೆ. ಯುಎಸ್ ನಲ್ಲಿ ಮಾಸ್ಟರ್ ಡಿಗ್ರಿ ಪಡೆದವರಿಗೆ ವಿನಾಯಿತಿ ಸೇರಿದಂತೆ ಈ ಸಂಖ್ಯೆ ಹೆಚ್ಚಳ ಹಾಗೂ ಸಂಸ್ಥೆಗಳಿಂದ ಬೇಡಿಕೆ ಅಧಿಕವಾಗುತ್ತಿದೆ. ಆದರೆ, ಇದಕ್ಕೆ ನೇರವಾಗಿ ತಡೆಯೊಡ್ಡದೆ ಪರೋಕ್ಷವಾಗಿ ಟ್ರಂಪ್ ಆದೇಶ ಹೊರಡಿಸಿದರು.

ರಫ್ತು ಆದಾಯದ ಶೇಕಡಾ 60ರಷ್ಟು

ರಫ್ತು ಆದಾಯದ ಶೇಕಡಾ 60ರಷ್ಟು

ಅಮೆರಿಕದ ಸಂಸತ್ತಿನಲ್ಲಿ (ಯುಎಸ್ ಹೌಸ್ ಆಫ್ ರೆಪ್ರಸೆಂಟೇಟಿವ್ಸ್) ಎಚ್-1ಬಿ ವೀಸಾದಾರರಿಗೆ ಕನಿಷ್ಠ ವೇತನವನ್ನು ದುಪ್ಪಟ್ಟಿಗಿಂತಲೂ ಹೆಚ್ಚು ಅಂದರೆ 60,000 ಡಾಲರ್​ನಿಂದ 1,30,000 ಡಾಲರ್​ಗಳಿಗೆ ಏರಿಸಲು ಕರೆ ನೀಡಿದ ಎಚ್-1ಬಿ ವೀಸಾ ಸುಧಾರಣಾ ಮಸೂದೆ ಮಂಡನೆಯಾಗಿದೆs ಅಮೆರಿಕದ ಸಂಸತ್ತಿನಲ್ಲಿ ಎಚ್ 1 ಬಿ ವೀಸಾದಾರರ ಕನಿಷ್ಠ ವೇತನವನ್ನು ದುಪ್ಪಟ್ಟುಗೊಳಿಸುವ ಮಸೂದೆ ಅಂಗೀಕೃತವಾದರೆ ಈ ವೇತನ ಮೊತ್ತ ಭಾರತೀಯ ಐಟಿ ರಂಗದ ರಫ್ತು ಆದಾಯದ ಶೇಕಡಾ 60ರಷ್ಟು ಆಗುತ್ತದೆ

English summary
A bi-partisan delegation of twenty-six members of the United States Congress jointly called on Prime Minister Shri Narendra Modi today. During the meet Modi urged the US to keep an open mind on admitting skilled Indian workers and relax norms related to H1 B visas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X