ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಸ್ ಭೀತಿ: ಗೃಹಬಂಧನಕ್ಕೊಳಗಾದ ಕೇಂದ್ರ ಸಚಿವ ಮುರಳೀಧರನ್

|
Google Oneindia Kannada News

ನವದೆಹಲಿ, ಮಾರ್ಚ್ 17: ಭಾರತದಲ್ಲಿ ಕೊರೊನಾವೈರಸ್ ಭೀತಿ ವ್ಯಾಪಿಸುತ್ತಲೇ ಇದೆ. ಕೇರಳ, ಮಹಾರಾಷ್ಟ್ರದಲ್ಲಿ ತೀವ್ರತೆ ಹೆಚ್ಚಾಗಿದೆ. ಕರ್ನಾಟಕ,ದೆಹಲಿ ಹಾಗೂ ಮಹಾರಾಷ್ಟ್ರದಲ್ಲಿ ಸಾವಿನ ನೋವು ಕಂಡು ಬಂದಿದೆ. ಈ ನಡುವೆ ಕೇಂದ್ರ ರಾಜ್ಯ ಸಚಿವ ವಿ ಮುರಳೀಧರನ್ ಅವರಿಗೂ ಸೋಂಕಿನ ಭೀತಿ ಎದುರಾಗಿದೆ. ಕೇರಳ ಪ್ರವಾಸಕ್ಕೆ ತೆರಳಿದ್ದ ಸಚಿವರು, ದೆಹಲಿಗೆ ಹಿಂತಿರುಗಿದ ಬಳಿಕ ಗೃಹಬಂಧನಕ್ಕೊಳಪಟ್ಟಿದ್ದಾರೆ.

Recommended Video

Is Brandy And Beer The Best Medicine For Coronavirus | Oneindia Kannada

ಮಾರ್ಚ್ 14ರಂದು ಕೇರಳದ ತಿರುವನಂತಪುರಂನಲ್ಲಿ ಸಭೆಯೊಂದರಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸೋಂಕು ಪೀಡಿತ ವೈದ್ಯರನ್ನು ಭೇಟಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿಗೆ ಹಿಂತಿರುಗಿದ ಬಳಿಕ ಸ್ವಯಂಪ್ರೇರಿತರಾಗಿ ದೆಹಲಿಯ ತಮ್ಮ ಮನೆಯಲ್ಲೇ ಪ್ರತ್ಯೇಕ ಕೊಠಡಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಕೊರೊನಾವೈರಸ್ ಹರಡದಂತೆ ಎಲ್ಲೆಡೆ ಸ್ವಚ್ಛತೆ ಅಭಿಯಾನ

ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ ಮುರಳೀಧರನ್ ಅವರಿಗೆ ವೈದ್ಯಕೀಯ ನೆರವು ನೀಡಲಾಗಿದ್ದು, ಸೋಂಕು ತಗುಲಿರುವ ಬಗ್ಗೆ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಪರೀಕ್ಷಾ ವರದಿಗಳು ಬರುವ ತನಕ ಕೊರೊನಾವೈರಸ್ ತಗುಲಿರುವ ಬಗ್ಗೆ ಸ್ಪಷ್ಟಪಡಿಸಲಾಗುವುದಿಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ.

Union Minister Muraleedharan in Self Quarantine After Visiting Kerala Hospital

ಪ್ರಸ್ತುತ ಕೇರಳದಲ್ಲಿ ಒಟ್ಟು 24 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಸದಾಗಿ ಮೂರು ಪ್ರಕರಣಗಳೊಂದಿಗೆ ದೇಶದಲ್ಲಿ ಒಟ್ಟಾರೆ ಈ ಸೋಂಕು ತಗುಲಿದವರ ಸಂಖ್ಯೆ 130ಕ್ಕೆ ಏರಿಕೆ ಆಗಿದೆ. ಮಾರ್ಚ್ 17ರ ಈ ಸಮಯಕ್ಕೆ ಭಾರತದಲ್ಲಿ ಮೂವರು ಕೊವಿಡ್19ಕ್ಕೆ ಬಲಿಯಾಗಿದ್ದಾರೆ.

English summary
minister of state for external affairs V Muraleedharan is in self quarantine after he visited a Kerala hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X