• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆರ್ಥಿಕತೆ ಮಂದಗತಿ: ಕಾಂಗ್ರೆಸ್ ಮುಖಂಡರ ವಿರುದ್ಧ ಸಚಿವ ಅನುರಾಗ್ ವಾಗ್ದಾಳಿ

|

ನವದೆಹಲಿ, ಸೆಪ್ಟೆಂಬರ್ 5: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಪಿ ಚಿದಂಬರಂ ವಿರುದ್ಧ ಕೇಂದ್ರ ಸಚಿವ ಅನುರಾಗ್ ಠಾಕೂರ್ ವಾಗ್ದಾಳಿ ನಡೆಸಿದ್ದಾರೆ.

ಜಿಡಿಪಿ ಅಂಕಿಅಂಶಗಳು ಕುಸಿಯುತ್ತಿರುವ ಬಗ್ಗೆ ಕೇಂದ್ರವನ್ನು ಟೀಕಿಸಿದ್ದಕ್ಕಾಗಿ ಕಾಂಗ್ರೆಸ್ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿರುವ ಅನುರಾಗ್ ಠಾಕೂರ್ ನಿಮ್ಮ ಅಧಿಕಾರಾವಧಿಯಲ್ಲಿ ಭಾರತೀಯ ಆರ್ಥಿಕತೆ ಹೇಗಿತ್ತು ಒಮ್ಮೆ ತಿರುಗಿ ನೋಡಿ ಎಂದಿದ್ದಾರೆ.

ಮೋದಿ ಸರ್ಕಾರ ಆರ್ಥಿಕತೆಯನ್ನು ಹೆಚ್ಚಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಪ್ರತಿಪಾದಿಸಿದರು.

ಮಾಜಿ ಹಣಕಾಸು ಮಂತ್ರಿ ಮತ್ತು ಮಾಜಿ ಪ್ರಧಾನಿ ಇಬ್ಬರೂ ಮೊದಲು ಹಿಂತಿರುಗಿ ನೋಡಬೇಕು ಮತ್ತು ಅವರ ಅಧಿಕಾರಾವಧಿಯಲ್ಲಿ ಆರ್ಥಿಕತೆಯ ಸ್ಥಿತಿ ಏನು ಎಂದು ಗೊತ್ತಾಗುತ್ತದೆ.

ವಿಡಿಯೋ: ಸಿಬಿಐ ವಶದಲ್ಲಿದ್ದರೂ ಕೇಂದ್ರದ ವಿರುದ್ಧ ಚಿದಂಬರಂ ವ್ಯಂಗ್ಯದ ಬಾಣ

ಅವರು ಅಧಿಕಾರದಲ್ಲಿದ್ದಾಗ ಹಣದುಬ್ಬರ ದರವು ಎರಡು ಅಂಕೆಗಳಲ್ಲಿತ್ತು ಮತ್ತು ಆರ್ಥಿಕತೆಯು ಶೇ.5 ಅಡಿಯಲ್ಲಿತ್ತು. ನೀವು ಹೆಚ್ಚು ಹಿಂತಿರುಗಿ ನೋಡಬೇಕಾಗಿಲ್ಲ. ಆರು ಅಥವಾ ಏಳು ವರ್ಷಗಳ ಹಿಂದೆ ಹೋದರೆ ನಿಮಗೆ ಇದೆಲ್ಲವೂ ಗೋಚರವಾಗುತ್ತದೆ ಎಂದು ಹೇಳಿದರು.

ಆರ್ಥಿಕತೆಯ ಚಿಂತೆ ಕಾಡುತ್ತಿದೆ

ಆರ್ಥಿಕತೆಯ ಚಿಂತೆ ಕಾಡುತ್ತಿದೆ

ಮೋದಿ ಸರ್ಕಾರ ಆರ್ಥಿಕತೆಯನ್ನು ದುರುಪಯೋಗ ಮಾಡಿಕೊಂಡಿದೆ ಎನ್ನುವ ಮಾತು ಸುಳ್ಳು, ಸರ್ಕಾರಕ್ಕೂ ಆರ್ಥಿಕತೆಗೂ ಸಂಬಂಧವಿಲ್ಲ, ಆರ್ಥಿಕತೆಯನ್ನು ಮೇಲೆತ್ತಲೂ ಸರ್ಕಾರದಿಂದ ಆಗುವ ಎಲ್ಲಾ ರೀತಿಯ ಕಸರತ್ತುಗಳನ್ನು ಮಾಡಲಾಗುತ್ತಿದೆ ಎಂದರು.

ತೆರಿಗೆ ಪಾವತಿದಾರರಿಗೆ ಕಿರುಕುಳ ನೋಡದಂತೆ ಕ್ರಮ

ತೆರಿಗೆ ಪಾವತಿದಾರರಿಗೆ ಕಿರುಕುಳ ನೋಡದಂತೆ ಕ್ರಮ

ತೆರಿಗೆ ಪಾವತಿದಾರರು ತೆರಿಗೆ ಪಾವತಿಸುವ ಮೂಲಕ ದೇಶದ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ. ತೆರಿಗೆ ಪಾವತಿದಾರರಿಗೆ ಕಿರುಕುಳ ನೀಡದಂತೆ ನೋಡಿಕೊಳ್ಳಲು ದೇಶಾದ್ಯಂತದ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು.

 ಚಿದಂಬರಂ ಆರ್ಥಿಕತೆ ಕುರಿತ ಮಾತು

ಚಿದಂಬರಂ ಆರ್ಥಿಕತೆ ಕುರಿತ ಮಾತು

ಹಲವು ದಿನಗಳಿಂದ ಸಿಬಿಐ ವಶದಲ್ಲಿದ್ದರೂ ಪಿ.ಚಿದಂಬರಂ ಅವರ ವ್ಯಂಗ್ಯದ, ಹೋರಾಟದ ಮನೋಭಾವ ಕಡಿಮೆ ಆಗಿಲ್ಲ. ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದ ಪಿ.ಚಿದಂಬರಂ ನ್ಯಾಯಾಲಯದಿಂದ ಹೊರಗ್ಗೆ ಬರುತ್ತಾ ಮಾಧ್ಯಮದವರ ಮುಂದೆ ಆಡಿರುವ ಮಾತು ಭಾರಿ ವೈರಲ್ ಆಗಿದೆ. ಅವರು ಹೇಳಿದ್ದು ಇಷ್ಟೆ '5%'. ಚಿದಂಬರಂ ವಿಚಾರಣೆ ಮುಗಿಸಿದ ಸಿಬಿಐ: ಮುಂದೇನು? ನ್ಯಾಯಾಲಯದ ಕೊಠಡಿಯಿಂದ ಹೊರ ಬಂದ ಪಿ.ಚಿದಂಬರಂ ಅವರನ್ನು ಮಾಧ್ಯಮದವರೊಬ್ಬರು, 'ಸರ್ ಇಷ್ಟು ದಿನದಿಂದ ಸಿಬಿಐ ವಶದಲ್ಲಿದ್ದೀರಿ, ಇದರ ಬಗ್ಗೆ ಏನಾದರೂ ಹೇಳಿ' ಎಂದು ಕೇಳಿದ್ದಾರೆ.

ಸರ್ಕಾರವು ಹಣದುಬ್ಬರವನ್ನು ನಿಯಂತ್ರಣದಲ್ಲಿಟ್ಟಿದೆ

ಸರ್ಕಾರವು ಹಣದುಬ್ಬರವನ್ನು ನಿಯಂತ್ರಣದಲ್ಲಿಟ್ಟಿದೆ

ನಮ್ಮ ಸರ್ಕಾರ ಹಣದುಬ್ಬರ ಮತ್ತು ಹಣಕಾಸಿನ ಕೊರತೆಯನ್ನು ನಿಯಂತ್ರಣದಲ್ಲಿಟ್ಟುಕೊಂಡಿದೆ. ಆರ್ಥಿಕತೆಗೆ ಉತ್ತೇಜನ ನೀಡಲು ನಾವು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ.

ಪರಿಣಾಮಕಾರಿ ಕ್ರಮಗಳನ್ನು ಜಾರಿಗೆ ತರಲು ನಾವು ಅಧಿಕಾರಿಗಳು, ವ್ಯಾಪಾರಿಗಳು, ಉದ್ಯಮಿಗಳು ಮತ್ತು ಗ್ರಾಹಕರನ್ನು ಭೇಟಿ ಮಾಡುತ್ತಿದ್ದೇವೆ, ಇದು ನಮ್ಮೆಲ್ಲರಿಗೂ ಪ್ರಯೋಜನಕಾರಿಯಾಗಲಿದೆ ಮತ್ತು ದೇಶವು ಮತ್ತಷ್ಟು ಅಭಿವೃದ್ಧಿಯಾಗಲು ಕಾರಣವಾಗುತ್ತದೆ. 2025ರೊಳಗೆ ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆ 2024-25ಕ್ಕೂ ಮೊದಲು ಭಾರತವು 5 ಟ್ರಿಲಿಯ್ ಡಾಲರ್ ಆರ್ಥಿಕತೆ ತಲುಪಲಿದೆ. ಹೇಳಿರುವ ಸಮಯಕ್ಕೆ ಮೋದಿಯವರು ಗುರಿಯನ್ನು ತಲುಪುತ್ತಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Union Minister Anurag Thakur Attacks Manmohan Singh, P Chidambaram, Hitting back at former Prime Minister Manmohan Singh and former finance minister P Chidambaram for criticising the Centre over the plunging GDP figures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more