ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು, ರಾಜ್ಯಸಭೆಯಲ್ಲಿ ಅಂಗೀಕಾರ

|
Google Oneindia Kannada News

ಶ್ರೀನಗರ, ಆಗಸ್ಟ್ 5: ನರೇಂದ್ರ ಮೋದಿ ಸರ್ಕಾರದಿಂದ ಐತಿಹಾಸಿಕ ಮಸೂದೆ ಮಂಡನೆ ಮಾಡಿದ್ದು, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಅಧಿಕಾರ, ಸ್ಥಾನಮಾನ ನೀಡುವ ಸಂವಿಧಾನದ 370 ಮತ್ತು 35ಎ ಅನುಚ್ಛೇದ ರದ್ದುಗೊಳಿಸುವಂತೆ ಮಸೂದೆ ಮಂಡಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದೊಂದು ವಾರದಿಂದ ಸೃಷ್ಟಿಯಾಗಿರುವ ಆತಂಕದ ವಾತಾವರಣಕ್ಕೆ ಸೋಮವಾರ ಉತ್ತರ ಉತ್ತರ ಸಿಕ್ಕಿದೆ.

'ಇತಿಹಾಸದ ಮರು ನಿರ್ಮಾಣ': ಜೆ&ಕೆ ವಿಶೇಷ ಸ್ಥಾನಮಾನ ರದ್ದು'ಇತಿಹಾಸದ ಮರು ನಿರ್ಮಾಣ': ಜೆ&ಕೆ ವಿಶೇಷ ಸ್ಥಾನಮಾನ ರದ್ದು

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವಾಲಯ ಸಭೆ ಬೆಳಗ್ಗೆ 9. 30ಕ್ಕೆ ಆರಂವಾಗಿದೆ. ಈ ಸಭೆಯಲ್ಲಿ ಪ್ರಮುಖ ನಿರ್ಧಾರಗಳು ಸಂಪುಟ ಸಭೆ ಬಳಿಕ ರಾಜ್ಯಸಭೆಯಲ್ಲಿ ಮಂಡನೆ ಮಾಡಲಾಗಿದೆ.

ಲೋಕಸಭೆ ಅಧಿವೇಶನದಲ್ಲಿ ಕೇಂದ್ರ ಈ ವಿಷಯವನ್ನು ಪ್ರಸ್ತಾಪಿಸುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಬುಧವಾರ ಅಥವಾ ಗುರುವಾರ ನಡೆಯಬೇಕಿದ್ದ, ಕೇಂದ್ರ ಸಚಿವ ಸಂಪುಟ ಸಭೆ ಇಂದು ಸಂಸತ್ ಭವನದಲ್ಲಿ ನಡೆಯುತ್ತಿದೆ.

Union Government May Announce  Its Decision On Kashmir Issue LIVE Updates

ಕಾಶ್ಮೀರ ವಿಚಾರದ ಬಗ್ಗೆ ಈ ಸಭೆಯಲ್ಲಿ ಏನಾದರೂ ತೀರ್ಮಾನ ಮಾಡಬಹುದೇನೋ ಎಂಬ ಸಂದೇಹಗಳು ವ್ಯಕ್ತವಾಗುತ್ತಿದೆ.

'ಕದಡಿದ ಕಾಶ್ಮೀರ': ಕಣಿವೆ ರಾಜ್ಯದಲ್ಲಿ ಏನಾಗುತ್ತಿದೆ?'ಕದಡಿದ ಕಾಶ್ಮೀರ': ಕಣಿವೆ ರಾಜ್ಯದಲ್ಲಿ ಏನಾಗುತ್ತಿದೆ?

ಇದಕ್ಕೆ ಪೂರಕವಾಗಿಯೇ ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಗೃಹ ಕಾರ್ಯದರ್ಶಿ ಹಾಗೂ ಭದ್ರತಾ ಸಲಹೆಗಾರರೊಂದಿಗೆ ತುರ್ತು ಸಭೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಒಟ್ಟಾರೆ ಕಾಶ್ಮೀರ ಕುತೂಹಲಕ್ಕೆ ಇಂದು ತೆರೆ ಬೀಳುವ ಸಾಧ್ಯತೆ ಇದೆ.

Newest FirstOldest First
7:39 PM, 5 Aug

ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರನ್ನು ಬಂಧಿಸಲಾಗಿದೆ. ಅವರು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ ಮುಖ್ಯಸ್ಥರೂ ಆಗಿದ್ದಾರೆ. ಮೆಹಬೂಬಾ ಮಫ್ತಿ ಅವರನ್ನು ಬಂಧಿಸಿ ಪ್ರವಾಸಿ ಬಂಗಲೆಯೊಂದರಲ್ಲಿ ಇರಿಸಲಾಗಿದೆ.
7:06 PM, 5 Aug

"ನಮಗೆ ಕಾಲಾವಕಾಶ ನೀಡಿ, ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಅಭಿವೃದ್ಧಿ ಕಂಡ ನಂತರ ಜಮ್ಮು ಮತ್ತು ಕಾಶ್ಮೀರ ಮತ್ತೊಮ್ಮೆ ಪೂರ್ಣಾಧಿಕಾರಯುಳ್ಳ ಒಕ್ಕೂಟ ವ್ಯವಸ್ಥೆಯ ರಾಜ್ಯವಾಗಲಿದೆ"- ಅಮಿತ್ ಶಾ
6:58 PM, 5 Aug

ವಿಧೇಕಯದ ಪರ 125 ಮತಗಳು ಬಂದಿದ್ದರೆ, ವಿಧೇಯಕದ ವಿರುದ್ಧ 61 ಮತಗಳು ಚಲಾವಣೆ ಆಗಿವೆ.
6:57 PM, 5 Aug

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ರದ್ದು. ಜಮ್ಮು, ಕಾಶ್ಮೀರ, ಲಡಾಕ್ ವಿಭಜನೆ ಮತ್ತು 10% ಮೀಸಲಾತಿ ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಒಪ್ಪಿಗೆ ದೊರೆತಿದೆ.
6:53 PM, 5 Aug

"ನಮಗೆ ಕಾಲಾವಕಾಶ ನೀಡಿ, ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಅಭಿವೃದ್ಧಿ ಕಂಡ ನಂತರ ಜಮ್ಮು ಮತ್ತು ಕಾಶ್ಮೀರ ಮತ್ತೊಮ್ಮೆ ಪೂರ್ಣಾಧಿಕಾರಯುಳ್ಳ ಒಕ್ಕೂಟ ವ್ಯವಸ್ಥೆಯ ರಾಜ್ಯವಾಗಲಿದೆ"- ಅಮಿತ್ ಶಾ
6:53 PM, 5 Aug

ಕಾಶ್ಮೀರ ವಿಭಜನೆ ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರಗೊಂಡಿದೆ. ವಿಶೇಷ ಸ್ಥಾನ ಮಾನ ರದ್ದು ವಿಚಾರ ಅಂಗೀಕಾರ ಬಾಕಿ ಇದೆ.
2:55 PM, 5 Aug

ಕೇಂದ್ರ ಸರ್ಕಾರದ ನಿರ್ಧಾರಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬೆಂಬಲ ಸೂಚಿಸಿದ್ದಾರೆ.
Advertisement
2:10 PM, 5 Aug

ಕೇಂದ್ರ ನಿರ್ಧಾರ ಪ್ರಶ್ನಿಸಿ ಕರ್ತವ್ಯ ನಿರತ ಪೊಲೀಸರು ಪ್ರತಿಭಟನೆ ನಡೆಸುತ್ತಿದ್ದಾರೆ.
1:39 PM, 5 Aug

ಜಮ್ಮು ಮತ್ತು ಕಾಶ್ಮೀರ ಮಸೂದೆ ಮಂಡನೆ-ಜೆಡಿಯು ಹೊರತುಪಡಿಸಿ ವಿಪಕ್ಷಗಳಿಂದ ಅನಿರೀಕ್ಷಿತ ಬೆಂಬಲ , ಬಿಜೆಪಿ ಮಿತ್ರ ಪಕ್ಷ ಜೆಡಿಯುನಿಂದ ಕಲಾಪ ಬಹಿಷ್ಕಾರ
1:23 PM, 5 Aug

ಅಮಿತ್ ಶಾ ಅವರು ಮಂಡಿಸಿರುವ 370 ವಿಧೇಯಕಕ್ಕೆ ಶಿವಸೇನಾ ಬೆಂಬಲ ನೀಡಿದೆ. ''ಇಂದು ಜಮ್ಮು ಮತ್ತು ಕಾಶ್ಮೀರವನ್ನು ಪಡೆದಿದ್ದೇವೆ, ನಾಳೆ ಬಲೂಚಿಸ್ಥಾನ, ಪಿಓಕೆಯನ್ನು ಪಡೆದುಕೊಳ್ಳುತ್ತೇವೆ. ಪ್ರಧಾನಿ ಮೋದಿಯವರು ಹಿಂದೂಸ್ಥಾನದ ಪ್ರತಯೊಬ್ಬರ ಕನಸನ್ನು ನನಸು ಮಾಡುತ್ತಾರೆ ಎನ್ನುವ ವಿಶ್ವಾಸವಿದೆ'' ಸಂಜಯ್ ರೌತ್, ಶಿವಸೇನೆ.
1:11 PM, 5 Aug

370ನೇ ವಿಧಿ ರದ್ದತಿ ಹಿನ್ನೆಲೆ, ಜಮ್ಮು ಕಾಶ್ಮೀರದಲ್ಲಿ ಹೈ ಅಲರ್ಟ್ ಘೋಷಣೆ, ಗುಂಪು ಗುಂಪಾಗಿ ಹೊರಗಡೆ ಓಡಾಡುವುದಿಲ್ಲ, ಮನೆಯಿಂದ ಯಾರೂ ಹೊರಗೆ ಬರುವಂತಿಲ್ಲ.
1:07 PM, 5 Aug

ಮಸೂದೆ ಅಂಗೀಕಾರಕ್ಕೆ ಸರಳ ಬಹುಮತ ಸಾಕು, ಈಗಾಗಲೇ 370 ವಿಧಿ ರದ್ದತಿಗೆ ರಾಷ್ಟ್ರಪತಿಯವರು ಅಂಕಿತ ಹಾಕಿದ್ದಾರೆ.
Advertisement
1:05 PM, 5 Aug

ಬಿಜೆಡಿ, ಎಂಪಿ, ಪ್ರಸನ್ನ ಆಚಾರ್ಯ ಹೇಳಿಕೆ'' ಜಮ್ಮು ಕಾಶ್ಮೀರ ಈಗ ಭಾರತದ ಒಂದು ಭಾಗವಾಗಿದೆ. ಬಿಜೆಡಿಯು ಕೇಂದ್ರ ಸರ್ಕಾರದ ನಿರ್ಣಯಕ್ಕೆ ಬೆಂಬಲ ನೀಡುತ್ತದೆ. ನಮ್ಮದು ರೀಜನಲ್ ಪಕ್ಷವಾಗಿದ್ದರೂ ಕೂಡ, ದೇಶ ಮೊದಲು.''
1:03 PM, 5 Aug

ಎಐಎಡಿಎಂಕೆ ಹಾಗೂ ಬಿಎಸ್‌ಪಿ ಎರಡೂ ಮಸೂದೆ ರದ್ದತಿ ಪ್ರಸ್ತಾಪಕ್ಕೆ ಬೆಂಬಲ ಸೂಚಿಸಿವೆ.
12:49 PM, 5 Aug

370 ವಿಧಿ ವಿರೋಧಿಸಿದ್ದ ಶ್ಯಾಂ ಪ್ರಸಾದ್ ಮುಖರ್ಜಿ, 60 ವರ್ಷಗಳ ಹಿಂದೆ ಲೋಕಸಭೆಯಲ್ಲಿ ಏಕಾಂಗಿ ಹೋರಾಟ ನಡೆಸಿದ್ದರು, ಕಾಶ್ಮೀರ ನೀತಿಯನ್ನು ಧಿಕ್ಕರಿಸಿದ್ದ ಶ್ಯಾಮ್​ ಪ್ರಸಾದ್​ , ಅಂದು ನೆಹರು ಸಂಪುಟದಿಂದ ಹೊರಬಂದಿದ್ದರು.
12:48 PM, 5 Aug

ಒಂದೇ ದೇಶದಲ್ಲಿ ಎರಡು ಕಾನೂನು, ಎರಡು ಧ್ವಜ ಇದು ಸಾಧ್ಯವೇ ಇಲ್ಲ ಎಂದು ಬಿಜೆಪಿ ಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಹೇಳಿದ್ದರು
12:45 PM, 5 Aug

ಜಮ್ಮು ಕಾಶ್ಮೀರವನ್ನು ಕೇಂದ್ರ ಸರ್ಕಾರವೇ ನೋಡಿಕೊಳ್ಳಲಿರುವುದರಿಂದ , ಜಮ್ಮು ಮತ್ತು ಕಾಶ್ಮೀರಕ್ಕೆ ಸಾಕಷ್ಟು ಹಣ ಹರಿದುಬರಲಿದೆ.ಇಷ್ಟು ದಿನ ದೇಶಕ್ಕೆ ಅನ್ವಯಿಸುವ ಕಾನೂನು ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯವಾಗುತ್ತಿರಲಿಲ್ ಆದರ ಈಗ ದೇಶದೆಲ್ಲೆಡೆ ಒಂದೇ ಕಾನೂನು.
12:25 PM, 5 Aug

ಜಮ್ಮು ಕಾಶ್ಮೀರ ಮಸೂದೆಗೆ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಬೆಂಬಲ
12:22 PM, 5 Aug

ಜಮ್ಮು ಕಾಶ್ಮೀರಕ್ಕೆ ಮತ್ತೆ 8 ಸಾವಿರ ಯೋಧರ ನಿಯೋಜನೆ
12:12 PM, 5 Aug

ಪ್ರತ್ಯೇಕವಾದಿ ಕಾಟಕ್ಕೆ , ಭಯೋತ್ಪಾದಕ ಆಟಕ್ಕೆ ಅಂತ್ಯ ಬೀಳಲಿದೆ, ಜಮ್ಮು ಕಾಶ್ಮೀರದ ಐದು ಜಿಲ್ಲೆಗಳಲ್ಲಿ ಪ್ರತ್ಯೇಕವಾದಿಗಳ ಅಟ್ಟಹಾಸವಿದೆ. ಅದೆಲ್ಲವೂ ನಿಯಂತ್ರಣಕ್ಕೆ ಬರಲಿದೆ.
12:06 PM, 5 Aug

ಜಮ್ಮು ಕಾಶ್ಮೀರದಲ್ಲಿ ಹೊರಗಿನವರು ಕೂಡ ಭೂಮಿ ಖರೀದಿಸಬಹುದಾಗಿದೆ. ಇಡೀ ದೇಶಕ್ಕೆ ಈಗ ಒಂದೇ ಕಾನೂನು ಅನ್ವಯವಾಗಲಿದೆ.
12:03 PM, 5 Aug

ಕಣಿವೆ ರಾಜ್ಯದಲ್ಲಿ ಕಲಂ-35 ಎ ಸಿಂಧುತ್ವ ಹೋರಾಟ, ಏನಿದು ವಿವಾದ?

ಜಮ್ಮು ಮತ್ತು ಕಾಶ್ಮೀರದ ನಾಗರಿಕರಿಗೆ ನೀಡಲಾಗಿರುವ ವಿಶೇಷಾಧಿಕಾರ ಕಲಂ 35-ಎ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದೂಡಿದೆ. ಆಗಸ್ಟ್ 27ರಂದು ಅರ್ಜಿಯ ವಿಚಾರಣೆ ನಡೆಯಲಿದೆ.
12:02 PM, 5 Aug

ಭಾರತ ಸಂವಿಧಾನದ 370ನೇ ಪರಿಚ್ಛೇದ ಏನು? ಎತ್ತ?

ಭಾರತದ ಸಂವಿಧಾನವು ಭಾರತದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಅದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರಕಾರದ ಮೂರು ಮುಖ್ಯ ಅಂಗಗಳಾಗಿ ಏರ್ಪಡಿಸುತ್ತದೆ. ಸಂವಿಧಾನವು ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವುದಲ್ಲದೆ ಅವುಗಳ ಜವಾಬ್ದಾರಿಯನ್ನೂ ಖಚಿತಗೊಳಿಸುತ್ತದೆ.
12:01 PM, 5 Aug

ಇಂದು ಭಾರತದ ಅತ್ಯಂತ ಕರಾಳದಿನ, ಇದರಿಂದ ವಿನಾಶಕಾರಿ ಪರಿಣಾಮಗಳಾಗುತ್ತವೆ- ಮೆಹಬೂಬಾ ಮುಫ್ತಿ ಹೇಳಿಕೆ
11:52 AM, 5 Aug

ಜಮ್ಮು ಮತ್ತು ಕಾಶ್ಮೀರದ ವಿಧಾನಮಂಡಲಕ್ಕೆ ಇನ್ನು ಅಧಿಕಾರವಿರುವುದಿಲ್ಲ, ಜಮ್ಮು-ಕಾಶ್ಮೀರದ ಆಡಳಿತ ಮುಖ್ಯಸ್ಥ ರಾಜ್ಯಪಾಲಾರಾಗಿತ್ತಾರೆ.
11:49 AM, 5 Aug

ಆಗಸ್ಟ್ 7 ರಂದು ದೇಶವನ್ನುದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ
11:42 AM, 5 Aug

ಜಮ್ಮು ಮತ್ತು ಕಾಶ್ಮೀರಕ್ಕೆ ವಿಧಾನಸಭೆ ಇರಲಿದೆ.ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಲಿದೆ. ಲಡಾಖ್‌ ಕೇಂದ್ರಾಡಳಿತ ಪ್ರದೇಶವಾಗಲಿದ್ದು, ವಿಧಾನಸಭೆ ಇರುವುದಿಲ್ಲ.
11:40 AM, 5 Aug

ರಾಜ್ಯಸಭೆ ಪ್ರಮುಖ ನಿರ್ಣಯ: ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ, ಲಡಾಕ್ ಕೇಂದ್ರಾಡಳಿತ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ರಾಜ್ಯವಲ್ಲ ಕೇಂದ್ರಾಡಳಿತ ಪ್ರದೇಶ
11:36 AM, 5 Aug

ಲಡಾಕ್‌ಗೆ ಕೇಂದ್ರಾಡಳಿತ ಸ್ಥಾನಮಾನ ನೀಡಲು ಅಮಿತ್ ಶಾ ಪ್ರಸ್ತಾವನೆ, 370ನೇ ವಿಧಿ ರದ್ದಾದರೆ ವಿಶೇಷ ಸ್ಥಾನಮಾನ ಇರುವುದಿಲ್ಲ.
11:33 AM, 5 Aug

ಪ್ರಸ್ತಾವನೆಗೆ ರಾಷ್ಟ್ರಪತಿ ಸಹಿ ಹಾಕಿದ ಮೇಲೆ ಯಾವ ಉಪ ವಿಧಿಯೂ ಜಾರಿಯಲ್ಲಿರುವುದಿಲ್ಲ
READ MORE

English summary
Jammu and Kashmir Issue:Union Government may announce its crucial decision on long-pending in parliament, there are some chances that the government may announce this division in parliament. Live updates in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X