• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇಂದ್ರ ಸಂಪುಟ ಸಭೆ ನಿರ್ಧಾರ: ಜವಳಿ ವಲಯಕ್ಕೆ 10,600 ಕೋಟಿ ಪ್ರೋತ್ಸಾಹ ಧನ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 8: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆಸ ಸಭೆಯಲ್ಲಿ ಜವಲಿ ಕ್ಷೇತ್ರಕ್ಕೆ ಬಂಪರ್ ಕೊಡುಗೆ ನೀಡಲಾಗಿದೆ. ಜವಳಿ ಉತ್ಪಾದನೆ ಪ್ರೋತ್ಸಾಹಿತ ಯೋಜನೆಗೆ 10,600 ಕೋಟಿ ರೂಪಾಯಿ ಅನುಮೋದನೆ ನೀಡಲಾಗಿದೆ.

ಕೇಂದ್ರ ಸರ್ಕಾರ ಮಂಡಿಸಿದ 2021ನೇ ಬಜೆಟ್ ನಲ್ಲಿ ಒಟ್ಟು 13 ಕ್ಷೇತ್ರಗಳಿಗೆ ಉತ್ಪಾದನೆ ಸಂಬಂಧಿತ ಪ್ರೋತ್ಸಾಹಕ(ಪಿಎಲ್ಐ) ಯೋಜನೆಯನ್ನು ಘೋಷಿಸಲಾಗಿದೆ. ಒಟ್ಟು 1.97 ಲಕ್ಷ ಕೋಟಿ ರೂಪಾಯಿ ಮೌಲ್ಯದ ಪ್ರೋತ್ಸಾಹದಲ್ಲಿ ಜವಳಿ ಕ್ಷೇತ್ರವೂ ಒಂದಾಗಿದೆ.

ಸಂಪುಟ ಸಭೆ ಬಳಿಕ ಕೇಂದ್ರ ಸಚಿವರ ಸುದ್ದಿಗೋಷ್ಠಿಯ ಪ್ರಮುಖ ಅಂಶಗಳುಸಂಪುಟ ಸಭೆ ಬಳಿಕ ಕೇಂದ್ರ ಸಚಿವರ ಸುದ್ದಿಗೋಷ್ಠಿಯ ಪ್ರಮುಖ ಅಂಶಗಳು

ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾದ ವಿಷಯಗಳೇನು. ಕೇಂದ್ರ ಸಂಪುಟ ಸಭೆಯಲ್ಲಿನ ಪ್ರಮುಖ ನಿರ್ಧಾರಗಳೇನು ಎಂಬುದನ್ನು ಮುಂದಿನ ಪಟ್ಟಿಯಲ್ಲಿ ತಿಳಿದುಕೊಳ್ಳೋಣ.

ಪ್ರಧಾನಿ ಮೋದಿ ಸಂಪುಟ ಸಭೆ ನಿರ್ಧಾರದ ಪ್ರಮುಖಾಂಶಗಳು:

* ಮುಂದಿನ 5 ವರ್ಷಗಳಲ್ಲಿ ಜವಳಿ ವಲಯದ ಪಿಎಲ್‌ಐ ಯೋಜನೆಯಡಿ 10,683 ಕೋಟಿ ಮೌಲ್ಯದ ಪ್ರೋತ್ಸಾಹಧನ ನೀಡಲಾಗುವುದು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದರು.

* ಈ ನಿರ್ಧಾರವು ಕೆಲವು ಜಾಗತಿಕ ಚಾಂಪಿಯನ್‌ಗಳನ್ನು ಹುಟ್ಟು ಹಾಕುತ್ತದೆ ಎಂದು ನಾವು ಭಾವಿಸುತ್ತೇವೆ. ಮಹತ್ವಾಕಾಂಕ್ಷೆಯ ಜಿಲ್ಲೆಗಳು ಅಥವಾ 3 ಮತ್ತು 4ನೇ ಶ್ರೇಣಿ ನಗರಗಳನ್ನು ಆಧರಿಸಿದ ಕಾರ್ಖಾನೆಗಳಿಗೆ ಆದ್ಯತೆ ನೀಡಲಾಗುವುದು. ಇದರಿಂದ ಗುಜರಾತ್, ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಪಂಜಾಬ್, ಆಂಧ್ರಪ್ರದೇಶ, ತೆಲಂಗಾಣ ಇತ್ಯಾದಿಗಳಿಗೆ ಅನುಕೂಲವಾಗಲಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದರು.

* ಐದು ವರ್ಷಗಳಲ್ಲಿ ರೂ 19,000 ಕೋಟಿಗಿಂತ ಹೆಚ್ಚಿನ ಹೂಡಿಕೆ.

* ಐದು ವರ್ಷಗಳಲ್ಲಿ 3 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಉತ್ಪಾದನಾ ವಹಿವಾಟು.

* 7.5 ಲಕ್ಷಕ್ಕೂ ಅಧಿಕ ಜನರಿಗೆ ಉದ್ಯೋಗ ಸೃಷ್ಟಿ ಮತ್ತು ಬೆಂಬಲಿತ ಚಟುವಟಿಕೆಗಳಿಗೆ ಪ್ರೋತ್ಸಾಹ.

* ಯಾವುದೇ ವ್ಯಕ್ತಿಯು ಭೂಮಿ ಮತ್ತು ಆಡಳಿತಾತ್ಮಕ ಕಟ್ಟಡದ ವೆಚ್ಚವನ್ನು ಹೊರತುಪಡಿಸಿ ಉತ್ಪಾದನೆಗೆ ಸಂಬಂಧಿಸಿದಂತೆ (ಜವಳಿ ವಲಯ) ಸಸ್ಯ ಬೆಳೆಸುವಿಕೆ, ಯಂತ್ರೋಪಕರ, ಸಲಕರಣೆ ಮತ್ತು ಸಹಕಾರಿ ಕಾರ್ಯಗಳಿಗೆ ಹಾಗೂ ತಾಂತ್ರಿಕವಾಗಿ ಬಟ್ಟೆ ಉತ್ಪಾದಿಸುವುದಕ್ಕೆ ಸಂಬಂಧಿಸಿದಂತೆ 300 ಕೋಟಿ ರೂಪಾಯಿ ಹಣ ಹೂಡಿಕೆ ಮಾಡಲು ಅರ್ಹರಾಗಿರುತ್ತಾರೆ.

* ಕನಿಷ್ಠ 100 ಕೋಟಿ ಹೂಡಿಕೆ ಮಾಡಲು ಇಚ್ಛಿಸುವ ಯಾವುದೇ ವ್ಯಕ್ತಿ (ಸಂಸ್ಥೆ / ಕಂಪನಿ ಸೇರಿದಂತೆ) ಈ ಯೋಜನೆಯ ಭಾಗವಾಗಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

* ಇದರ ಜೊತೆಗೆ 3 ಮತ್ತು 4ನೇ ಶ್ರೇಣಿ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೂಡಿಕೆಗೆ ಆದ್ಯತೆ ನೀಡಲಾಗುವುದು. ಆ ಮೂಲಕ ಹಿಂದುಳಿದ ಪ್ರದೇಶಕ್ಕೆ ಉದ್ಯಮಗಳು ಲಗ್ಗೆ ಇಡಲು ಪ್ರೋತ್ಸಾಹ ನೀಡಲಾಗುವುದು.

* ಈ ಯೋಜನೆ ವಿಶೇಷವಾಗಿ ಗುಜರಾತ್, ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಪಂಜಾಬ್, ಆಂಧ್ರ ಪ್ರದೇಶ, ತೆಲಂಗಾಣ, ಒಡಿಶಾ ಸೇರಿದಂತೆ ಮುಂತಾದ ರಾಜ್ಯಗಳ ಮೇಲೆ ಹೆಚ್ಚು ಸಕಾರಾತ್ಮಕ ಪರಿಣಾಮ ಬೀರುತ್ತದೆ.

* PLI ಯೋಜನೆಯು ಭಾರತದ ಕಂಪನಿಗಳು ಜಾಗತಿಕ ಮಟ್ಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಲು ಸಹಾಯ ಮಾಡುತ್ತದೆ, ಕೇಂದ್ರ ಸರ್ಕಾರವು ಇದು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು.

* ಇಲ್ಲಿಯವರೆಗೆ, ನಾವು ಮುಖ್ಯವಾಗಿ ಹತ್ತಿ ಜವಳಿ ಮೇಲೆ ಕೇಂದ್ರೀಕರಿಸಿದ್ದೇವೆ. ಆದರೆ ಅಂತರರಾಷ್ಟ್ರೀಯ ಜವಳಿ ಮಾರುಕಟ್ಟೆಯ 2/3 ಪಾಲು ಮಾನವ ನಿರ್ಮಿತ ಮತ್ತು ತಾಂತ್ರಿಕ ಜವಳಿ. ಈ ಪಿಎಲ್‌ಐ ಯೋಜನೆಯನ್ನು ಅನುಮೋದಿಸಲಾಗಿದೆ. ಇದರಿಂದ ಭಾರತವು ಮಾನವ ನಿರ್ಮಿತ ನಾರುಗಳ ಉತ್ಪಾದನೆಗೆ ಕೊಡುಗೆ ನೀಡುತ್ತದೆ ಎಂದು ಗೋಯಲ್ ಹೇಳಿದ್ದಾರೆ.

English summary
Union Cabinet chaired by PM Narendra Modi approved Production Linked Incentive (PLI) Scheme worth over Rs 10,600 crore for Textiles sector, check benefits and key details in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X