ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಬಜೆಟ್: ಹೊಸ ಬಾಟಲಿಯಲ್ಲಿ ಹಳೇ ವೈನ್ ಎಂದ ಕಾಂಗ್ರೆಸ್!

|
Google Oneindia Kannada News

Recommended Video

Budget 2019: ಹೊಸ ಬಾಟಲಿಯಲ್ಲಿ ಹಳೇ ವೈನ್ ಎಂದ ಕಾಂಗ್ರೆಸ್!

ನವದೆಹಲಿ, ಜುಲೈ 05: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬರೋಬ್ಬರಿ 2 ಗಂಟೆ 15 ನಿಮಿಷಗಳಲ್ಲಿ ತಮ್ಮ ಚೊಚ್ಚಲ ಬಜೆಟ್ ಅನ್ನು ಮಂಡಿಸಿದ್ದಾರೆ..

ನಿರ್ಮಲಾ ಚೊಚ್ಚಲ ಬಜೆಟ್ : ಯಾವುದು ಏರಿಕೆ ? ಯಾವುದು ಇಳಿಕೆ?ನಿರ್ಮಲಾ ಚೊಚ್ಚಲ ಬಜೆಟ್ : ಯಾವುದು ಏರಿಕೆ ? ಯಾವುದು ಇಳಿಕೆ?

ಬಜೆಟ್ ನಲ್ಲಿ ಏನೂ ಇಲ್ಲ ಎಂದು ವಿಪಕ್ಷಗಳು ಮೂಗು ಮುರಿದಿದ್ದರೆ ಇದು ಭವ್ಯ ಭಾರತಕ್ಕೆ ಅಡಿಗಲ್ಲು ಎಂದು ಆಡಳಿತ ಪಕ್ಷ ಬಣ್ಣಿಸಿದೆ. ಈ ಬಾರಿಯ ಬಜೆಟ್ ನಲ್ಲಿ ನೀರಿನ ಸಂರಕ್ಷಣೆಗೆ ಸಂಬಂಧಿಸಿದಂತೆ ಮಹತ್ವದ ಯೋಜನೆಗಳು ಹೂರಬಂದಾವು ಎಂಬ ನಿರೀಕ್ಷೆ ಹುಸಿಯಾಗಿದ್ದು, ಹೆಚ್ಚು ಹೊಸ ಯೋಜನೆಗಳನ್ನೇನೂ ಪರಿಚಯಿಸಲಾಗಿಲ್ಲ. ಕಳೆದ ಫೆಬ್ರವರಿಯಲ್ಲೇ ಹಿಂದಿನ ಅವಧಿಯ ಎನ್ ಡಿಎ ಸರ್ಕಾರ ಮಧ್ಯಂತರ ಬಜೆಟ್ ಮಂಡಿಸಿತ್ತು. ಇದೀಗ ಚುನಾವಣೆಯ ನಂತರ ಮತ್ತೆ ಬಜೆಟ್ ಮಂದಿಸಲಾಗಿದ್ದರೂ, ಬಹುತೇಕ ಹಳೆಯ ಯೋಜನೆಗಳನ್ನು ಹಾಗೆಯೇ ಮುಂದುವರಿಸಿಕೊಂಡು ಹೋಗಲು ನಿರ್ಧರಿಸಲಾಗಿದೆ.

ಕೇಂದ್ರ ಬಜೆಟ್ 2019 : ಕರ್ನಾಟಕದ ನಾಯಕರ ಪ್ರತಿಕ್ರಿಯೆಕೇಂದ್ರ ಬಜೆಟ್ 2019 : ಕರ್ನಾಟಕದ ನಾಯಕರ ಪ್ರತಿಕ್ರಿಯೆ

ಹೊಸದೇನೂ ಇಲ್ಲದಿದ್ದರೂ, 2015 ರ ಹೊತ್ತಿಗೆ ಭಾರತವನ್ನು 5 ಟ್ರಿಲಿಯನ್ ಆರ್ಥಿಕತೆಯನ್ನಾಗಿ ಮಾಡುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿರುವುದರಿಂದ, ಮತ್ತು ಮೋದಿಯವರ ಎರಡನೇ ಅವಧಿಯ ಮೊದಲ ಬಜೆಟ್ ಆಗಿದ್ದರಿಂದ ಸಾಕಷ್ಟು ಕುತೂಹಲ ಸೃಷ್ಟಿಯಾಗಿತ್ತು.

ಇಂಥ ಬಜೆಟ್ ಬಗ್ಗೆ ನಾಯಕರ ಪ್ರತಿಕ್ರಿಯೆ ಹೀಗಿದೆ...

ಗೃಹ ಸಚಿವ ಅಮಿತ್ ಶಾ

ಗೃಹ ಸಚಿವ ಅಮಿತ್ ಶಾ

"ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಭಾರತವನ್ನು ಪ್ರಗತಿ ಮತ್ತು ಏಕತೆಯತ್ತ ಕೊಂಡೊಯ್ಯಲು ಅಡಿಪಾಯ ಹಾಕಿಕೊಟ್ಟಿದೆ. ಭಾರತದ ಅಭಿವೃದ್ಧಿಯಲ್ಲಿ 130 ಕೋಟಿ ಭಾರತೀಯರ ಕಠಿಣ ಪರಿಶ್ರಮವಿದೆ. ಭಾರತದ ರೈತರಿಗೆ, ಯುವಕರಿಗೆ, ಮಹಿಳೆಯರಿಗೆ ಮತ್ತು ಬಡವರಿಗೆ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಈ ಬಜೆಟ್ ರೆಕ್ಕೆಗಳನ್ನು ನೀಡಿದೆ" -ಅಮಿತ್ ಶಾ, ಗೃಹ ಸಚಿವ

ಅಧೀರ್ ರಂಜನ್ ಚೌಧರಿ

ಅಧೀರ್ ರಂಜನ್ ಚೌಧರಿ

ಬಜೆಟ್ ನಲ್ಲಿ ಹೊಸತೇನೂ ಇಲ್ಲ. ಹಳೇ ಭರವಸೆಗಳನ್ನೇ ಪುನರುಚ್ಚರಿಸಲಾಗಿದೆ. ಅವರು ಹೊಸ ಭಾರತದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಬಜೆಟ್ ಮಾತ್ರ ಹೊಸ ಬಾಟಲಿಯಲ್ಲಿರುವ ಹಳೇ ವೈನ್! ನಿರುದ್ಯೋಗ ಸೃಷ್ಟಿಗೆ ಯೋಜನೆಗಳಿಲ್ಲ, ಹೊಸತನವಿಲ್ಲ- ಅಧೀರ್ ರಂಜನ್ ಚೌಧರಿ, ಕಾಂಗ್ರೆಸ್ ಲೋಕಸಭೆ ಮುಖಂಡ

ಸರ್ಕಾರಿ ನೌಕರರಿಗೆ ಮತ್ತೆ ನಿರಾಶೆ ಮೂಡಿಸಿದ ಕೇಂದ್ರ ಬಜೆಟ್ಸರ್ಕಾರಿ ನೌಕರರಿಗೆ ಮತ್ತೆ ನಿರಾಶೆ ಮೂಡಿಸಿದ ಕೇಂದ್ರ ಬಜೆಟ್

ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲಾ

ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲಾ

ಇದು ಖಂಡಿತವಾಗಿಯೂ ನೀರಸ, ಅಪ್ರಸ್ತುತ, ಉತ್ತೇಜನವಿಲ್ಲದ, ಗುರಿ ಇಲ್ಲದ ಬಜೆಟ್. ಆರ್ಥಿಕ ಬೆಳವಣಿಗೆಗೆ ಸೊನ್ನೆ, ಗ್ರಾಮೀಣ ಅಭಿವೃದ್ಧಿಗೆ ಸೊನ್ನೆ, ಉದ್ಯೋಗ ಸೃಷ್ಟಿಗೆ ಸೊನ್ನೆ, ನಗರಗಳ ಶುದ್ಧೀಕರಣಕ್ಕೆ ಸೊನ್ನೆ...

ಜನರ ಕಣ್ಣು ಕಟ್ಟಲು ಇರುವ ಸಂಮಕ್ಷಿಪ್ತ ರೂಪವೇ ಈ 'ನ್ಯೂ ಇಂಡಿಯಾ' ಎಂದು ಕರೆಯಬಹುದು- ರಂದೀಪ್ ಸುರ್ಜೇವಾಲಅ, ಕಾಂಗ್ರೆಸ್ ವಕ್ತಾರ

ಕೇಂದ್ರ ಬಜೆಟ್ Live Updates: ತೈಲ, ಚಿನ್ನ, ಮದ್ಯ ದುಬಾರಿಕೇಂದ್ರ ಬಜೆಟ್ Live Updates: ತೈಲ, ಚಿನ್ನ, ಮದ್ಯ ದುಬಾರಿ

ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್

ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್

ಪ್ರಧಾನಿ ಮತ್ತು ಹಣಕಾಸು ಸಚಿವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಈ ಬಜೆಟ್ ಭಾರತದ ಅಭೂತಪೂರ್ವ ಬೆಳವಣಿಗೆಗೆ ಅದರಲ್ಲೂ ಮಹಿಳಾ ಸಬಲೀಕರಣ ಮತ್ತು ಯುವಕರ ಉದ್ಯೋಗಾವಕಾಶಕ್ಕೆ ಹೆಚ್ಚಿನ ಒತ್ತುಕೊಡಲಿದೆ- ಸುಷ್ಮಾ ಸ್ವರಾಜ್, ಮಾಜಿ ವಿದೇಶಾಂಗ ಸಚಿವೆ

ರೈಲ್ವೇ ಸಚಿವ ಪಿಯೂಶ್ ಗೋಯಲ್

ರೈಲ್ವೇ ಸಚಿವ ಪಿಯೂಶ್ ಗೋಯಲ್

ರೈಲ್ವೇ ಇಲಾಖೆಯ ಬಗ್ಗೆ ಹಣಕಾಸು ಸಚಿವರಿಗೆ ಸಾಕಷ್ಟು ದೂರದೃಷ್ಟಿ ಇದೆ. ಮುಂದಿನ ಹತ್ತು ವರ್ಷಗಳಲ್ಲಿ ಸುಮಾರು 50 ಲಕ್ಷ ಕೋಟಿ ರೂ.ನಷ್ಟು ಬಂಡವಾಳವನ್ನು ರೈಲ್ವೇ ಇಲಾಖೆಗಾಗಿ ಹೂಡುವಂತೆ ಮಾಡುವ ಅವರ ದೂರದೃಶಃ್ಟಿ ಶ್ಲಾಘನೀಯ- ಪಿಯೂಶ್ ಗೋಯಲ್, ರೈಲ್ವೇ ಸಚಿವ

English summary
Union Budget 2019: First woman full time Finance minister Nirmala Sitharaman has presented her first budget in Parliament today(July 5). Here are what leaders said about her budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X