ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ 2019: ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ತೀವ್ರಗತಿ

|
Google Oneindia Kannada News

ನವದೆಹಲಿ, ಜುಲೈ 05: ಮೋದಿ ಸರ್ಕಾರದ ಅತ್ಯಂತ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಮತ್ತಷ್ಟು ತೀವ್ರಗತಿ ತರುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಅವರು, 2020-22 ರ ಒಳಗಾಗಿ ಬರೋಬ್ಬರಿ 1.95 ಕೋಟಿ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಅವರು ಇಂದು ಬಜೆಟ್‌ನಲ್ಲಿ ಘೋಷಿಸಿದರು.

ಕೇಂದ್ರ ಬಜೆಟ್ Liive Updates: ಪ್ರತಿ ಮನೆಗೂ ಶುದ್ಧ ಕುಡಿಯುವ ನೀರುಕೇಂದ್ರ ಬಜೆಟ್ Liive Updates: ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು

ಅಷ್ಟೆ ಅಲ್ಲದೆ, ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮನೆಗಳ ನಿರ್ಮಾಣ ಅವಧಿ 2015 ರಲ್ಲಿ 315 ದಿನಗಳಿತ್ತು, ಅದನ್ನು 2018-19 ರ ವೇಳೆಗೆ ಕೇವಲ 119 ದಿನಗಳಿಗೆ ಇಳಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

Union budget 2019: 1.95 crore houses will buid by 2020-22

ಮನೆ ಬಾಡಿಗೆ ಕಾಯಿದೆಯಲ್ಲೂ ಕೆಲವು ಬದಲಾವಣೆ ಮಾಡುವ ಉದ್ದೇಶದ ಬಗ್ಗೆಯೂ ಪ್ರಸ್ತಾಪ ಮಾಡಿದ ನಿರ್ಮಲಾ ಸೀತಾರಾಂನ್, ಈಗಿನ ಬಾಡಿಕೆ ಕರಾರು ಬಾಡಿಗೆದಾರರ ಮನೆಮಾಲಿಕರ ನಡುವಿನ ಸಂಬಂಧವನ್ನು ಸೂಕ್ತವಾಗಿ ನಿರ್ವಹಿಸುತ್ತಿಲ್ಲವೆಂದು ಹೇಳಿದರು.

ಕಡಿಮೆ ವೆಚ್ಚದ ಮನೆ ನಿರ್ಮಾಣದ ಬಗ್ಗೆ ಕೇಂದ್ರವು ಅತ್ಯಂತ ಆಸಕ್ತಿ ಹೊಂದಿರುವುದನ್ನು ಸೂಚ್ಯಗೊಳಿಸಿದ ನಿರ್ಮಲಾ ಸೀತಾರಾಮನ್, ಕಡಿಮೆ ವೆಚ್ಚದ ಮನೆಗಳಿಗೆ ಮೂಲಸೌಕರ್ಯದ ಮಾನ್ಯತೆ ನೀಡಿರುವುದಾಗಿ ಹೇಳಿದರು.

English summary
Union budget 2019: Nirmala Sitaraman has proposed that 1.95 crore houses from financila year 20-22 will constructed under Pradan Mantri Awas Yojana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X