ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೌತ್‌ವಾಶ್ ಬಳಸಿದರೆ 30 ಸೆಕೆಂಡ್‌ಗಳಲ್ಲಿ ಶೇಕಡಾ 99.9 ರಷ್ಟು ಕೊರೊನಾವೈರಸ್ ನಾಶ: ಯೂನಿಲಿವರ್

|
Google Oneindia Kannada News

ನವದೆಹಲಿ, ನವೆಂಬರ್ 21: ಮೌತ್‌ವಾಶ್ ಬಳಸಿದರೆ ಲಾಲಾರಸದಲ್ಲಿರುವ ಶೇಕಡಾ 99.9 ರಷ್ಟು ಕೊರೊನಾವೈರಸ್ ಅನ್ನು ನಾಶಪಡಿಸುತ್ತದೆ ಎಂದು ಯೂನಿಲಿವರ್ ಕಂಪನಿ ಶನಿವಾರ ಘೋಷಿಸಿದೆ. ತನ್ನ ಮೌತ್‌ವಾಶ್‌ನಲ್ಲಿರುವ ಸಿಪಿಸಿ ತಂತ್ರಜ್ಞಾನ (ಸೆಟಿಲ್ಪಿರಿಡಿನಿಯಮ್ ಕ್ಲೋರೈಡ್) 30 ಸೆಕೆಂಡುಗಳ ಕಾಲ ಬಾಯಿ ತೊಳೆದ ನಂತರ ಕೋವಿಡ್-19 ವೈರಸ್‌ನ್ನು ಕೊಲ್ಲಲು ಸಾಧ್ಯವಾಯಿತು ಎಂದು ಕಂಪನಿ ತಿಳಿಸಿದೆ.

"ಸಿಪಿಸಿ ತಂತ್ರಜ್ಞಾನವನ್ನು ಹೊಂದಿರುವ ಮೌತ್‌ವಾಶ್ ಅನ್ನು 30 ಸೆಕೆಂಡುಗಳ ಬಾಯಿ ಮುಕ್ಕಳಿಸಿದರ ನಂತರ ಕೋವಿಡ್-19 ಗೆ ಕಾರಣವಾಗುವ SARS-CoV-2 ವೈರಸ್‌ ಅನ್ನು ಶೇಕಡಾ 99.9ರಷ್ಟು ನಾಶ ಮಾಡುತ್ತದೆ ಎಂದು ಪ್ರಾಥಮಿಕ ಲ್ಯಾಬ್ ಪರೀಕ್ಷಾ ಫಲಿತಾಂಶಗಳು ತೋರಿಸುತ್ತವೆ" ಎಂದು ಯೂನಿಲಿವರ್ ಕಂಪನಿ ಹೇಳಿದೆ.

Uniliver

ಡಿಸೆಂಬರ್‌ನಲ್ಲಿ ತನ್ನ ಮೌತ್‌ವಾಶ್ ಅನ್ನು ಭಾರತಕ್ಕೆ ತರಲಿದೆ ಎಂದು ಕಂಪನಿ ತಿಳಿಸಿದೆ. ಯೂನಿಲಿವರ್‌ನ ಭಾರತೀಯ ಅಂಗಸಂಸ್ಥೆ, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (ಎಚ್‌ಯುಎಲ್) ಹೊಸ ತಂತ್ರಜ್ಞಾನವನ್ನು ಪೆಪ್ಸೋಡೆಂಟ್ ಜರ್ಮಿಕ್ ಚೆಕ್ ಮೌತ್ ಫ್ಲಶ್ ದ್ರವವನ್ನು ಮುಂದಿನ ತಿಂಗಳು ಬಿಡುಗಡೆ ಮಾಡಲಿದೆ.

''ಇದು ಕೊರೊನಾವೈರಸ್ ಹರಡುವುದನ್ನು ತಡೆಗಟ್ಟುವ ಚಿಕಿತ್ಸೆ ಅಥವಾ ಔಷಧಿಯಾಗಿ ಸಾಬೀತಾಗಿಲ್ಲ ಎಂದು ನಮಗೆ ಸ್ಪಷ್ಟವಾಗಿದ್ದರೂ, ನಮ್ಮ ಫಲಿತಾಂಶಗಳು ಆಶಾದಾಯಕವಾಗಿವೆ" ಎಂದು ಯೂನಿಲಿವರ್ ಓರಲ್ ಕೇರ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಹೆಡ್ ಗ್ಲಿನ್ ರಾಬರ್ಟ್ಸ್ ಹೇಳಿದ್ದಾರೆ.

ಸಿಪಿಸಿ ತಂತ್ರಜ್ಞಾನವನ್ನು ಹೊಂದಿರುವ ಅದರ ಮೌತ್‌ವಾಶ್‌ನ ಪರೀಕ್ಷೆಯನ್ನು ಸ್ವತಂತ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಮೈಕ್ರೋಬ್ಯಾಕ್ ಲ್ಯಾಬೊರೇಟರೀಸ್ ನಡೆಸಿದೆ ಎಂದು ಯೂನಿಲಿವರ್ ತಿಳಿಸಿದೆ.

ಇತ್ತೀಚೆಗೆ, ಇಂಗ್ಲೆಂಡ್‌ನ ಕಾರ್ಡಿಫ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ತಂಡವು ಇದೇ ರೀತಿಯ ಹೇಳಿಕೆಯನ್ನು ನೀಡಿತು, ಲ್ಯಾಬ್‌ನಲ್ಲಿ ಬಳಸಿದ ಮೌತ್‌ವಾಶ್ 30 ಸೆಕೆಂಡುಗಳಲ್ಲಿ ಕೊರೊನಾವೈರಸ್ ಅನ್ನು ನಾಶಮಾಡಲು ಸಹಾಯ ಮಾಡುತ್ತದೆ ಎಂದಿತ್ತು.

English summary
Unilever on Saturday claimed that its mouthwash could destroy 99.9 per cent coronavirus present in saliva
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X