ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನುಮಾನಾಸ್ಪದ ಬ್ಯಾಗ್ ಪತ್ತೆ: ರೈಲು ನಿಲ್ಲಿಸಿ ಬಾಂಬ್ ನಿಷ್ಕ್ರಿಯ ದಳ ತನಿಖೆ

|
Google Oneindia Kannada News

ನವದೆಹಲಿ ಮಾರ್ಚ್ 14: ಸೋಮವಾರ ಬೆಳಗ್ಗೆ ರಾಷ್ಟ್ರ ರಾಜಧಾನಿಯಲ್ಲಿ ಶಂಕಿತ ಬಾಂಬ್ ಎಚ್ಚರಿಕೆ ಕರೆ ಬಂದಿದೆ. ಇದರ ಬೆನ್ನಲ್ಲೆ ಸ್ಥಳೀಯ ರೈಲಿನಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದೆ. ಸ್ಥಳೀಯ ರೈಲು ಹರ್ಯಾಣದಿಂದ ದೆಹಲಿಯ ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದಾಗ ಬ್ಯಾಗ್ ಕಂಡುಬಂದಿದೆ. ಜೊತೆಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ದೆಹಲಿಯ ಆದರ್ಶ ನಗರ ರೈಲು ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಲಾಗಿದೆ. ಬಾಂಬ್ ನಿಷ್ಕ್ರಿಯ ದಳ ಸದ್ಯ ಚೀಲವನ್ನು ಪರಿಶೀಲಿಸುತ್ತಿದೆ ಎಂದು ಹೇಳಲಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಹರ್ಯಾಣದಿಂದ ದೆಹಲಿಯ ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣಕ್ಕೆ ಬರುತ್ತಿದ್ದ ಲೋಕಲ್ ರೈಲಿನಲ್ಲಿ ಸೋಮವಾರ ಬ್ಯಾಗ್ ವೊಂದು ಪತ್ತೆಯಾಗಿದೆ. ಈ ಬ್ಯಾಗ್‌ ಬಗ್ಗೆ ಪ್ರಯಾಣಿಕರನ್ನು ಸುತ್ತಮುತ್ತಲಿನ ಜನರನ್ನು ವಿಚಾರಿಸಿದಾಗ ಬ್ಯಾಗ್ ಯಾರದು ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಬ್ಯಾಗ್ ಬಗ್ಗೆ ಯಾರಿಗೂ ಮಾಹಿತಿ ತಿಳಿದಿರಲಿಲ್ಲ. ಈ ವೇಳೆ ತಕ್ಷಣವೇ GRP ಮತ್ತು RPF ಗೆ ಕರೆ ಮಾಡಲಾಗಿದೆ. ತರಾತುರಿಯಲ್ಲಿ ಬಂದ ಸೈನಿಕರು ಶಂಕಿತನನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಬಿಗಿ ಭದ್ರತೆ ನೀಡಿದ್ದಾರೆ. ಇದೀಗ ಆದರ್ಶ ನಗರ ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿ ತಪಾಸಣೆ ನಡೆಸಲಾಗುತ್ತಿದೆ.

Unattended Bag Found on Local Train in Delhi, Bomb Disposal Squad on the Spot

Recommended Video

IPL 2022 ಈ ಎಲ್ಲಾ ವಿಚಾರಗಳಿಂದ ತುಂಬಾ ವಿಶೇಷ | Oneindia Kannada

English summary
There was a suspected bomb alert in the national capital on Monday morning when an unattended bag was recovered inside a local train. The local train was travelling to the Hazrat Nizamuddin Railway Station in Delhi from Haryana when the bag was found lying unattended.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X