ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಜಯ, ಪಾಕಿಸ್ತಾನಕ್ಕೆ ಮುಖಭಂಗ: ಮಸೂದ್ ಅಜರ್ ಜಾಗತಿಕ ಉಗ್ರ

|
Google Oneindia Kannada News

Recommended Video

Pulwama: ದೇಶಕ್ಕೆ ಒಲಿಯಿತು ದೊಡ್ಡ ರಾಜತಾಂತ್ರಿಕ ಗೆಲುವು | Oneindia Kannada

ನವದೆಹಲಿ, ಮೇ 02: ಪಾಕಿಸ್ತಾನಿ ಮೂಲದ ಉಗ್ರ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಘೋಷಣೆ ಮಾಡಲಾಗಿದೆ. ಈ ಮೂಲಕ ಭಅರತಕ್ಕೆ ರಾಜತಾಂತ್ರಿಕ ಗೆಲುವು ಲಭಿಸಿದೆ.

ಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ಚೀನಾ ಸಹಮತಿ ಸಾಧ್ಯತೆಅಜರ್‌ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ಚೀನಾ ಸಹಮತಿ ಸಾಧ್ಯತೆ

ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ನಾಯಕ ಮಸೂದ್ ಅಜರ್, ಫೆಬ್ರವರಿ 14 ರಂದು ನಡೆದ ಪುಲ್ವಾಮಾ ದಾಳಿಯ ಸಂಚುಕೋರನಾಗಿದ್ದ ಎಂಬುದು ತಿಳಿಯುತ್ತಿದ್ದಂತೆಯೇ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರಿ, ಆತನನ್ನು ಜಾಗತಿಕ ಉಗ್ರ ಎಂದು ಘೋಷಿಸುವಂತೆ ವಿಶ್ವಸಂಸ್ಥೆಗೆ ಮನವಿ ಮಾಡಿತ್ತು.

ಮಸೂದ್ ಜಾಗತಿಕ ಉಗ್ರ: ಭಾರತದ ಗೆಲುವು ಎಂದ ಪ್ರಧಾನಿ ಮೋದಿಮಸೂದ್ ಜಾಗತಿಕ ಉಗ್ರ: ಭಾರತದ ಗೆಲುವು ಎಂದ ಪ್ರಧಾನಿ ಮೋದಿ

UN security council declares Masood Azhar a global terrorist

ನಾಲ್ಕನೇ ಬಾರಿಗೆ ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ಅಜರ್ ನನ್ನು ರಕ್ಷಿಸಿದ ಚೀನಾನಾಲ್ಕನೇ ಬಾರಿಗೆ ವಿಶ್ವಸಂಸ್ಥೆ ಭದ್ರತಾ ಸಮಿತಿಯಲ್ಲಿ ಅಜರ್ ನನ್ನು ರಕ್ಷಿಸಿದ ಚೀನಾ

ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ಅಡ್ಡಗಾಲು ಹಾಕಿದ್ದ ಚೀನಾ, ಕೊನೆಗೂ ತನ್ನ ಪಟ್ಟು ಸಡಲಿಸಿದ ಕಾರಣ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಈ ಘೋಷಣೆ ಮಾಡಿದೆ. ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ಒತ್ತಡಕ್ಕೆ ಮಣಿದು ಚೀನಾ ತನ್ನ ನಡೆಯನ್ನು ಬದಲಿಸಿಕೊಂಡಿದೆ ಎನ್ನಲಾಗಿದೆ. ಈ ನಡೆ ಪಾಕಿಸ್ತಾನಕ್ಕೆ ಭಾರೀ ಮುಖಭಂಗವೆನ್ನಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು 'ಇದು ಪ್ರತಿ ಭಾರತೀಯನ ಹೆಮ್ಮೆ, ನಮಗೆ ಸಿಕ್ಕ ಗೆಲುವು' ಎಂದಿದ್ದಾರೆ.

English summary
UN Security Council has declared Pakistan-based terrorist, Jaish-e-mohammed leader Masood Azhar as Global terrorist
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X