ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ದಾಖಲೆಯ ಪ್ರಮಾಣದಲ್ಲಿ ಬಡವರ ಸಂಖ್ಯೆಯಲ್ಲಿ ಇಳಿಕೆ: ವಿಶ್ವಸಂಸ್ಥೆ ವರದಿ

|
Google Oneindia Kannada News

ನವದೆಹಲಿ, ಜುಲೈ 18: ಭಾರತದಲ್ಲಿ 2005-06 ರಿಂದ 2015-16ರ ಅವಧಿಯಲ್ಲಿ 273 ಮಿಲಿಯನ್ ಜನರು ಬಡತನದಿಂದ ಹೊರಬಂದಿದ್ದಾರೆ. ಈ ಅವಧಿಯಲ್ಲಿ ಇತರ ದೇಶಗಳಿಗಿಂತ ಭಾರತದಲ್ಲಿ ಬಡವರ ಸಂಖ್ಯೆ ಭಾರೀ ಇಳಿಕೆ ಕಂಡು ಬಂದಿದೆ ಎಂದು ವಿಶ್ವಸಂಸ್ಥೆಯ ವರದಿ ಬಹಿರಂಗ ಪಡಿಸಿದೆ.

ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಂ (ಯುಎನ್‌ಡಿಎ) ಮತ್ತು ಆಕ್ಸ್‌ಫರ್ಡ್ ಪಾವರ್ಟಿ ಅಂಡ್ ಹ್ಯೂಮನ್ ಡೆವಲಪ್ಮೆಂಟ್ ಇನಿಶಿಯೇಟಿವ್ (ಒಪಿಹೆಚ್ಐ) ಬಿಡುಗಡೆ ಮಾಡಿದ ದತ್ತಾಂಶವು ಅಧ್ಯಯನ ಮಾಡಿದ 75 ದೇಶಗಳಲ್ಲಿ 65 ದೇಶಗಳು 2000 ಮತ್ತು 2019 ರ ನಡುವೆ ತಮ್ಮ ಬಹು ಆಯಾಮದ ಬಡತನದ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡಿವೆ ಎಂದು ತೋರಿಸುತ್ತದೆ.

ಭಾರತಕ್ಕೆ UNSCಯಲ್ಲಿ 8ನೇ ಬಾರಿ ತಾತ್ಕಾಲಿಕ ಸದಸ್ಯತ್ವಭಾರತಕ್ಕೆ UNSCಯಲ್ಲಿ 8ನೇ ಬಾರಿ ತಾತ್ಕಾಲಿಕ ಸದಸ್ಯತ್ವ

ಕಳಪೆ ಆರೋಗ್ಯ, ಶಿಕ್ಷಣದ ಕೊರತೆ, ಜೀವನಮಟ್ಟದಲ್ಲಿ ಅಸಮರ್ಪಕತೆ, ಕೆಲಸದ ಗುಣಮಟ್ಟ, ಹಿಂಸಾಚಾರದ ಬೆದರಿಕೆ ಮತ್ತು ಪರಿಸರೀಯ ಪ್ರದೇಶಗಳಲ್ಲಿ ವಾಸಿಸುವಂತಹ ದೈನಂದಿನ ಜೀವನದಲ್ಲಿ ಬಡ ಜನರು ಅನುಭವಿಸುವ ವಿವಿಧ ಅಭಾವಗಳನ್ನು ಬಹುಆಯಾಮದ ಬಡತನ ಒಳಗೊಂಡಿದೆ.

UN Report: 273 Million Indians Moved Out Of Poverty Between 2005-06 To 2015-16

ಈ 65 ದೇಶಗಳಲ್ಲಿ 50 ದೇಶಗಳು ಬಡತನದಲ್ಲಿ ವಾಸಿಸುವ ಜನರ ಸಂಖ್ಯೆಯನ್ನು ಕಡಿಮೆ ಮಾಡಿವೆ. ಭಾರತದಲ್ಲಿ ಅತಿದೊಡ್ಡ ಅಂದರೆ ಅಲ್ಲಿ 273 ಮಿಲಿಯನ್ ಜನರು ಬಡತನಕ್ಕಿಂತ ಮೇಲೇರಲು ಸಾಧ್ಯವಾಯಿತು ಎಂದು ವರದಿ ಹೇಳಿದೆ.

English summary
India lifted Record 273 Million out of poverty in 10 years between 2005-06 To 2015-16 say United Nations report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X