• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿಯಲ್ಲಿ ಕೊರೊನಾ ಪ್ರಕರಣ ಏರಿಕೆಗೆ ಬ್ರಿಟನ್ ರೂಪಾಂತರ ಕಾರಣ?

|

ನವದೆಹಲಿ, ಏಪ್ರಿಲ್ 23: ದೆಹಲಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ಪತ್ತೆಯಾಗಿರುವ ಬಹುಪಾಲು ಪ್ರಕರಣಗಳು ಬ್ರಿಟನ್ ರೂಪಾಂತರ ಕೊರೊನಾ ಸೋಂಕು ಆಗಿದೆ ಎಂದು ತಿಳಿದುಬಂದಿದೆ.

ಕೊರೊನಾ ಪರೀಕ್ಷೆಯ ದ್ರವ ಮಾದರಿಗಳ ವಿಶ್ಲೇಷಣೆಯಲ್ಲಿ ಈ ಅಂಶ ತಿಳಿದುಬಂದಿದೆ. ರೋಗ ನಿಯಂತ್ರಣ ರಾಷ್ಟ್ರೀಯ ಸಂಸ್ಥೆ ಈ ಕುರಿತ ಮಾಹಿತಿಯನ್ನು ಬಿಡುಗಡೆ ಮಾಡಿದ್ದು, ದೆಹಲಿಯಲ್ಲಿ 400 ಬ್ರಿಟನ್ ರೂಪಾಂತರ ಸೋಂಕು ಇರುವುದಾಗಿ ತಿಳಿಸಿದೆ.

ಆಕ್ಸಿಜನ್ ಕದ್ದು ತರ್ತೀರೋ, ಭಿಕ್ಷೆ ಬೇಡುತ್ತೀರೋ, ಸಾಲ ತರ್ತೀರೋ ತನ್ನಿ: ದೆಹಲಿ ಹೈಕೋರ್ಟ್ಆಕ್ಸಿಜನ್ ಕದ್ದು ತರ್ತೀರೋ, ಭಿಕ್ಷೆ ಬೇಡುತ್ತೀರೋ, ಸಾಲ ತರ್ತೀರೋ ತನ್ನಿ: ದೆಹಲಿ ಹೈಕೋರ್ಟ್

ದೇಶಾದ್ಯಂತ ಕಂಡುಬಂದಿರುವ ಸೋಂಕಿನ ಪ್ರಕರಣಗಳಲ್ಲಿ 11% ಸೋಂಕು ರೂಪಾಂತರ ಸೋಂಕಾಗಿದ್ದು, ಈ ಅಂಶ ಕಾಳಜಿಯ ವಿಷಯವಾಗಿರುವುದಾಗಿ ಸಂಸ್ಥೆ ತಿಳಿಸಿದೆ. ಭಾರತದಲ್ಲಿ ಇದುವರೆಗೂ 1644 ಬ್ರಿಟನ್ ರೂಪಾಂತರ ಸೋಂಕು ಪತ್ತೆಯಾಗಿದೆ. 112 ಪ್ರಕರಣಗಳು ದಕ್ಷಿಣ ಆಫ್ರಿಕಾ ರೂಪಾಂತರವಾಗಿದ್ದು, 732 ಭಾರತದಲ್ಲಿ ಪತ್ತೆಯಾಗಿರುವ ಎರಡು ರೂಪಾಂತರ ಸೋಂಕಾಗಿದೆ ಎಂದು ತಿಳಿದುಬಂದಿದೆ.

ಮಾರ್ಚ್‌ನಿಂದ ದೆಹಲಿಯಲ್ಲಿ ಬ್ರಿಟನ್ ರೂಪಾಂತರ ಸೋಂಕಿನ ಪ್ರಕರಣ 50% ಏರಿಕೆಯಾಗಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ. ಜೊತೆಗೆ ದೆಹಲಿಯಲ್ಲಿ ಏರಿಕೆಯಾಗುತ್ತಿರುವ ಕೊರೊನಾ ಪ್ರಕರಣಗಳಿಗೆ ಬ್ರಿಟನ್ ರೂಪಾಂತರ ಸೋಂಕು ಕಾರಣವಾಗಿದೆ ಎಂದು ಎನ್‌ಸಿಡಿಸಿಯ ಸುಜೀತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ದೇಶದಲ್ಲಿ ಶುಕ್ರವಾರ ಒಂದೇ ದಿನ 3,32,730 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 1,93,279 ಸೋಂಕಿತರು ಗುಣಮುಖರಾಗಿದ್ದರೆ, 2,263 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

English summary
Uk strain virus is driving covid surge in delhi says National Centre fro Disease Control,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X