ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಬ್ರಿಟನ್ ಕೊರೊನಾ ರೂಪಾಂತರ ಪ್ರಕರಣಗಳ ಸಂಖ್ಯೆ ಎಷ್ಟಾಗಿದೆ?

|
Google Oneindia Kannada News

ನವದೆಹಲಿ, ಜನವರಿ 01: ಭಾರತದಲ್ಲಿ ಶುಕ್ರವಾರ ಮತ್ತೆ ನಾಲ್ಕು ಕೊರೊನಾ ರೂಪಾಂತರ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋಂಕಿನ ಪ್ರಕರಣಗಳ ಸಂಖ್ಯೆ 29ಕ್ಕೆ ಏರಿಕೆಯಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಮಂಗಳವಾರ ಹಾಗೂ ಬುಧವಾರ 20 ಪ್ರಕರಣಗಳು ದಾಖಲಾಗಿದ್ದವು. ಗುರುವಾರ ಐದು ಪ್ರಕರಣಗಳು ಕಂಡುಬಂದಿದ್ದು, ಇಂದು ನಾಲ್ವರಲ್ಲಿ ಕೊರೊನಾ ರೂಪಾಂತರ ಸೋಂಕು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

ದೇಶದಲ್ಲಿ ರೂಪಾಂತರ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆದೇಶದಲ್ಲಿ ರೂಪಾಂತರ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆ

ಈ 29 ಪ್ರಕರಣಗಳಲ್ಲಿ ದೆಹಲಿಯ ಎನ್ ಸಿಡಿಸಿ ಸಂಸ್ಥೆಯು 8 ಪ್ರಕರಣಗಳನ್ನು ಪತ್ತೆ ಹಚ್ಚಿದೆ. ದೆಹಲಿಯ ಐಜಿಐಬಿ ಎರಡು ಪ್ರಕರಣಗಳನ್ನು ಪರೀಕ್ಷಿಸಿದ್ದು, ಪುಣೆಯ ಎನ್ ಐವಿ ಸಂಸ್ಥೆಯಲ್ಲಿ ಐದು ಪ್ರಕರಣಗಳು, ಹೈದರಾಬಾದ್ ನ ಸಿಸಿಎಂಬಿಯಲ್ಲಿ ಮೂರು, ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಹತ್ತು ಹಾಗೂ ಕಲ್ಯಾಣಿಯ ಎನ್ ಐಬಿಎಂಜಿ ಒಂದು ಪ್ರಕರಣವನ್ನು ಪತ್ತೆ ಹಚ್ಚಲಾಗಿದೆ.

UK Strain Coronavirus Cases In India Reaches 29

ಕೊರೊನಾ ವೈರಸ್ ನ ಹೊಸ ರೂಪಾಂತರವು ಡಿಸೆಂಬರ್ 22ರಂದು ಬ್ರಿಟನ್ ನಲ್ಲಿ ಪತ್ತೆಯಾಗಿತ್ತು. ಸೋಂಕು ಅತಿ ವೇಗವಾಗಿ ಹರಡಬಹುದಾದ ಸಾಧ್ಯತೆಯಿಂದ ಕೂಡಲೇ ಹಲವು ದೇಶಗಳು ಬ್ರಿಟನ್ ನಿಂದ ವಿಮಾನಗಳನ್ನು ರದ್ದುಪಡಿಸಿದವು. ಭಾರತ ಜನವರಿ 7ರವರೆಗೂ ಬ್ರಿಟನ್ ವಿಮಾನಗಳನ್ನು ರದ್ದುಪಡಿಸಿದೆ.

ಪ್ರಸ್ತುತ ಇರುವ ಸೋಂಕಿಗಿಂತ ಈ ರೂಪಾಂತರ ಸೋಂಕು ಅತಿ ವೇಗವಾಗಿ ಹರಡಬಲ್ಲದ್ದಾಗಿದ್ದು, ಯುವ ಜನರಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಸೋಂಕಿನ ಹರಡುವಿಕೆ ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಭಾರತದಲ್ಲಿ ಕಳೆದ ಹದಿನಾಲ್ಕು ದಿನಗಳಲ್ಲಿ ಬ್ರಿಟನ್ ನಿಂದ ಮರಳಿದವರನ್ನು ಪತ್ತೆಹಚ್ಚಿ ಅವರನ್ನು ಪರೀಕ್ಷಿಸುವ ಕಾರ್ಯ ನಡೆಯುತ್ತಿದೆ. ಸರ್ಕಾರ ನಿಯೋಜಿಸಿದ ಭಾರತದ ಹತ್ತು ಸಂಸ್ಥೆಗಳಲ್ಲಿ ಕೊರೊನಾ ರೂಪಾಂತರದ ಜೆನೋಮ್ ಪರೀಕ್ಷೆಯನ್ನು ನಡೆಸಲಾಗುತ್ತಿದೆ.

ಭಾರತದ ಹೊರತಾಗಿ ಡೆನ್ಮಾರ್ಕ್, ನೆದರ್ ಲ್ಯಾಂಡ್, ಆಸ್ಟ್ರೇಲಿಯಾ, ಇಟಲಿ, ಸ್ವೀಡನ್, ಫ್ರಾನ್ಸ್, ಸ್ವಿಡ್ಜರ್ಲೆಂಡ್, ಜರ್ಮನಿ, ಕೆನಡಾ, ಜಪಾನ್, ಲೆಬನಾನ್ ಹಾಗೂ ಸಿಂಗಪುರದಲ್ಲಿ ಈ ಬ್ರಿಟನ್ ಕೊರೊನಾ ಸೋಂಕು ಪತ್ತೆಯಾಗಿದೆ.

English summary
Total of 29 people in the country have tested new UK variant of Covid-19, with four added to the list on Friday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X