ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಫೈಟರ್ ಜೆಟ್‌ಗಳನ್ನು ತಯಾರಿಸಲು ಬ್ರಿಟನ್‌ ನೆರವು?

|
Google Oneindia Kannada News

ನವದೆಹಲಿ, ಏಪ್ರಿಲ್‌ 22: ಎರಡು ದಿನಗಳ ಪ್ರವಾಸದಲ್ಲಿರುವ ಬ್ರಿಟನ್‌ ಪ್ರಧಾನಿ ಜಾನ್ಸನ್‌ ಬೋರಿಸ್‌ ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಭೇಟಿಯಾಗಿದ್ದಾರೆ. ಬೋರಿಸ್‌ ಅವರನ್ನು ಪ್ರಧಾನಿ ಮೋದಿ ಸಾಂಪ್ರದಾಯಿಕವಾಗಿ ಸ್ವಾಗತಿಸಿ ಬರಮಾಡಿಕೊಂಡರು ಬಳಿಕ ರಾಷ್ಟ್ರಪತಿ ಭವನದಲ್ಲಿ ಬ್ರಿಟನ್ ಪ್ರಧಾನಿಗಳಿಗೆ ರಕ್ಷಣಾ ಪಡೆಗಳಿಂದ ಗೌರವ ವಂದನೆ ಸಲ್ಲಿಸಲಾಯಿತು. ಇನ್ನು ಬ್ರಿಟನ್‌ ದೇಶದ ಪ್ರಧಾನಿ ಜಾನ್ಸನ್‌ ಬೋರಿಸ್‌ ಮತ್ತು ಪ್ರಧಾನಿ ಮೋದಿ ಭೇಟಿ ವಿಶ್ವದ ಗಮನ ಸೆಳೆದಿದ್ದು, ಭಾರರಕ್ಕೆ ರಕ್ಷಣಾ ಕ್ಷೇತ್ರದಲ್ಲಿ ಸಹಾಯಕ್ಕೆ ಮುಂದೆ ಬಂದಿರುವ ಬೋರಿಸ್‌ ಭಾರತಕ್ಕೆ ಸ್ವಂತ ಜೆಟ್‌ ವಿಮಾನಗಳ ನಿರ್ಮಾನಕ್ಕಾಗಿ ಬ್ರಿಟನ್ ನೆರವು ನೀಡಲಿದೆ ಎಂಬ ಮಾಹಿತಿ ಸಿಕ್ಕಿದೆ.

ಬ್ರಿಟಿಷ್‌ ಪ್ರಧಾನಿ ಬೋರಿಸ್ ಜಾನ್ಸನ್ ಭಾರತ ಪ್ರವಾಸ, ಎಲ್ಲೆಲ್ಲಿ ಭೇಟಿ?ಬ್ರಿಟಿಷ್‌ ಪ್ರಧಾನಿ ಬೋರಿಸ್ ಜಾನ್ಸನ್ ಭಾರತ ಪ್ರವಾಸ, ಎಲ್ಲೆಲ್ಲಿ ಭೇಟಿ?

ಉಭಯ ದೇಶದ ಪ್ರಧಾನಿಗಳು ಈಗಾಗಲೇ ದೆಹಲಿಯಲ್ಲಿ ಭೇಟಿ ಮಾಡಿದ್ದು, ಬ್ರಿಟನ್‌ ಪ್ರಧಾನಿ ಜಾನ್ಸನ್‌ ಕೂಡ ಭಾರತಕ್ಕೆ ಭೇಟಿ ನೀಡಿರುವ ಉದ್ದೇಶವನ್ನು ಕಳೆದ ಎರಡು ದಿನಗಳಿಂದಲೂ ಮಾಧ್ಯಮಗಳಲ್ಲಿ ಹೇಳಿಕೊಂಡ ಬಂದಿರುವ ವಿಷಯಗಳು ರಕ್ಷಣಾ ಕ್ಷೇತ್ರ ಪ್ರಮುಖ ಬೆಳವಣಿಗೆಗಳು ಭಾರತದೊಂದಿಗೆ ಹಂಚಿಕೊಳ್ಳಲಿದ್ದೇನೆ ಎಂದಿದ್ದಾರೆ. ಯುಕೆ ಪ್ರಧಾನಿ ಬೋರಿಸ್‌ ಭಾರತ ದೇಶ ತನ್ನದೇ ಆದ ಯುದ್ಧ ವಿಮಾನಗಳನ್ನು ಹೊಂದಲು ಬ್ರಿಟನ್‌ ದೇಶ ಭಾರತಕ್ಕೆ ಮೂಲ ಸೌಕರ್ಯಗಳನ್ನು ಮತ್ತು ಯುದ್ಧ ವಿಮಾನಗಳ ಜೆಟ್‌ ತಯಾರಿಕೆಗಾಗಿ ಪರವಾನಗಿ ನೀಡಲು ಸಿದ್ಧವಿದೆ ಎಂದು ಮೋದಿಯೊಂದಿಗೆ ಹೇಳಿಕೊಂಡಿದ್ದಾರೆ.

UK PM Boris Johnson To Offer India Help To Build Its Own Fighter Jets

ಪ್ರಧಾನಿ ಮಂತ್ರಿಯಾಗಿ ಬೋರಿಸ್ ಜಾನ್ಸನ್ ಹೊಸ ದೆಹಲಿಗೆ ತನ್ನ ಮೊದಲ ಭೇಟಿ ಮಾಡಿದ್ದು, ಇಂದಿನ ಮಾತುಕತೆಯಲ್ಲಿ ಅರ್ಧದಷ್ಟು ಮಿಲಿಟರಿ ಯಂತ್ರಾಂಶವನ್ನು ರಷ್ಯಾದಿಂದ ಖರೀದಿಸುವ ದಕ್ಷಿಣ ಏಷ್ಯಾದ ದೇಶದೊಂದಿಗೆ ವ್ಯಾಪಾರ ಮತ್ತು ಭದ್ರತಾ ಸಂಬಂಧಗಳನ್ನು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಲಿದ್ದಾರೆ.

UK PM Boris Johnson To Offer India Help To Build Its Own Fighter Jets

ಇನ್ನು ಯುಕೆ ಪ್ರಧಾನಿ ಭಾರತವು ಹೊಸದಾಗಿ ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದ ಫೈಟರ್ ಜೆಟ್‌ಗಳಿಗೆ ಬೆಂಬಲವನ್ನು ಚರ್ಚಿಸುವ ನಿರೀಕ್ಷೆಯಿದೆ, ಯುದ್ಧ-ವಿಜೇತ ವಿಮಾನಗಳನ್ನು ನಿರ್ಮಿಸಲು ಬ್ರಿಟನ್ನಿನ ಅತ್ಯುತ್ತಮ ತಂತ್ರಜ್ಞಾನವನ್ನು ನೀಡಲು ಬ್ರಿಟನ್‌ ಸಿದ್ಧವಿದೆ ಎಂದಿರುವ ಬೋರಿಸ್‌ ಇಂದಿನ ಮೋದಿ ಜೊತೆಗಿನ ಭೇಟಿಯ ವಿಷಯಗಳು ಹಾಗೂ ರಕ್ಷಣಾ ಕ್ಷೇತ್ರದ ಒಪ್ಪಂದಗಳು ಸಾಕಷ್ಟು ಗಮನಸೆಳದಿವೆ.

English summary
British the first Prime Minister Boris Johnson will visit India, the first time he will visit Gujarat via Ahmedabad.British Prime Minister Boris Johnson, who is on a two-day tour of India, why The British The First Prime Minister Boris Johnson will visit in India? UK PM Boris Johnson To Offer India Help To Build Its Own Fighter Jets?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X