ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಟನ್‌ನಿಂದ ಭಾರತಕ್ಕೆ ಬಂದಿಳಿದ ವಿಮಾನ: ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯ

|
Google Oneindia Kannada News

ನವದೆಹಲಿ, ಜನವರಿ 08: ಭಾರತ ಮತ್ತು ಬ್ರಿಟನ್‌ ನಡುವಿನ ವಿಮಾನಗಳು ಇಂದು ಪುನರಾರಂಭಗೊಳ್ಳುತ್ತಿದ್ದಂತೆ ರಾಷ್ಟ್ರ ರಾಜಧಾನಿಗೆ ಆಗಮಿಸಲಿರುವ ಪ್ರಯಾಣಿಕರಿಗಾಗಿ ದೆಹಲಿ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಬ್ರಿಟನ್‌ನಲ್ಲಿ ಹೊರಹೊಮ್ಮಿದ ಕೊರೊನಾವೈರಸ್‌ನ ರೂಪಾಂತರ ವೇಗವಾಗಿ ಹರಡುವ ಆತಂಕದ ಮಧ್ಯೆ ಬ್ರಿಟನ್‌ನಿಂದ ಏರ್ ಇಂಡಿಯಾ ವಿಮಾನವು 246 ಪ್ರಯಾಣಿಕರೊಂದಿಗೆ ದೆಹಲಿಗೆ ಬಂದಿಳಿದಿದೆ. ಹೀಗಾಗಿ ಮುಖ್ಯ ಕಾರ್ಯದರ್ಶಿ ವಿಜಯ್ ದೇವ್ ಹೊರಡಿಸಿದ ಆದೇಶದಲ್ಲಿ ಬ್ರಿಟನ್‌ನಿಂದ ಬರುವ ಎಲ್ಲ ಪ್ರಯಾಣಿಕರು ಕೊರೊನಾ ಪಾಸಿಟಿವ್ ಆದರೆ ಅವರನ್ನು ಪ್ರತ್ಯೇಕವಾಗಿ ಕಳುಹಿಸಲಾಗುವುದು ಎಂದು ದೆಹಲಿ ಸರ್ಕಾರ ಶುಕ್ರವಾರ ನಿರ್ಧರಿಸಿದೆ.

ಭಾರತದಲ್ಲಿ ಮತ್ತೆ 11 ಮಂದಿಯಲ್ಲಿ ರೂಪಾಂತರಿ ಕೊರೊನಾ ಸೋಂಕು ಪತ್ತೆ ಭಾರತದಲ್ಲಿ ಮತ್ತೆ 11 ಮಂದಿಯಲ್ಲಿ ರೂಪಾಂತರಿ ಕೊರೊನಾ ಸೋಂಕು ಪತ್ತೆ

ಇದೇ ಸಮಯದಲ್ಲಿ ನೆಗೆಟಿವ್ ಇರುವ ಪ್ರಯಾಣಿಕರು ಏಳು ದಿನಗಳ ಕಾಲ ಕ್ವಾರಂಟೈನ್ ನಿರ್ಬಂಧವನ್ನು ಹೊಂದಿರುತ್ತಾರೆ. ಒಂದು ವಾರದ ನಂತರ, ಪ್ರಯಾಣಿಕರ ಆರೋಗ್ಯಕ್ಕೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

UK Flights To India Resume: Delhi Makes RT-PCR Tests, 14 Day Quarantine Must

ಕೊರೊನಾವೈರಸ್ ಹೊಸ ರೂಪಾಂತರವು ಬ್ರಿಟನ್‌ನಲ್ಲಿ ಹೊರಹೊಮ್ಮಿದ್ದರಿಂದ ಭಾರತವು ಡಿಸೆಂಬರ್ 23 ರಿಂದ ಜನವರಿ 7ರವರೆಗೆ ಉಭಯ ದೇಶಗಳನ್ನು ಸಂಪರ್ಕಿಸುವ ಎಲ್ಲಾ ಪ್ರಯಾಣಿಕ ವಿಮಾನಗಳನ್ನು ಸ್ಥಗಿತಗೊಳಿಸಿತ್ತು.

ಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತುಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತು

ಕೊರೊನಾವೈರಸ್‌ನ ಹೊಸ ರೂಪಾಂತರವಾದ SARS-CoV-2 ಸೋಂಕಿತ ಭಾರತೀಯರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಹೊಸ ರೂಪಾಂತರದಿಂದ ಸೋಂಕಿತ ಪ್ರಕರಣಗಳ ಸಂಖ್ಯೆ ಈಗ ಭಾರತದಲ್ಲಿ 82 ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ತಿಳಿಸಿದೆ.

English summary
Delhi government has issued a set of Standard Operating Procedures (SOPs) for passengers who will be arriving in the national capital from the United Kingdom (UK) as flights between India and the UK resumed today
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X