ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ರೂಪಾಂತರ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆ

|
Google Oneindia Kannada News

ನವದೆಹಲಿ, ಡಿಸೆಂಬರ್ 31: ಬ್ರಿಟನ್ ನ ಕೊರೊನಾ ರೂಪಾಂತರ ಸೋಂಕಿನ ಪ್ರಕರಣಗಳು ದೇಶದಲ್ಲಿಯೂ ಕಂಡುಬರುತ್ತಿದ್ದು, ಗುರುವಾರ ಐದು ಹೊಸ ಪ್ರಕರಣಗಳು ಪತ್ತೆಯಾಗಿರುವುದಾಗಿ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಗುರುವಾರ ರೂಪಾಂತರ ಸೋಂಕಿನ ಐದು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ದೇಶದಲ್ಲಿ 25 ಮಂದಿಗೆ ಸೋಂಕು ತಗುಲಿರುವುದಾಗಿ ತಿಳಿದುಬಂದಿದೆ. ಪುಣೆಯ ಎನ್ ಐವಿ ಸ್ ಸಂಸ್ಥೆ ನಾಲ್ಕು, ದೆಹಲಿಯ ಐಬಿಐಬಿ ಸಂಸ್ಥೆ ಒಂದು ಪ್ರಕರಣವನ್ನು ಪತ್ತೆ ಹಚ್ಚಿವೆ. 25 ಮಂದಿಯನ್ನೂ ಐಸೊಲೇಷನ್ ನಲ್ಲಿರಿಸಿ ಸರ್ಕಾರ ಚಿಕಿತ್ಸೆ ವ್ಯವಸ್ಥೆ ಮಾಡಿದೆ.

ಭಾರತಕ್ಕೆ ಕೆಲವೇ ದಿನಗಳಲ್ಲಿ ಕೊರೊನಾ ಲಸಿಕೆ ಲಭ್ಯ: ಏಮ್ಸ್ ನಿರ್ದೇಶಕಭಾರತಕ್ಕೆ ಕೆಲವೇ ದಿನಗಳಲ್ಲಿ ಕೊರೊನಾ ಲಸಿಕೆ ಲಭ್ಯ: ಏಮ್ಸ್ ನಿರ್ದೇಶಕ

ಬುಧವಾರ ಭಾರತದಲ್ಲಿ ಬ್ರಿಟನ್ ರೂಪಾಂತರದ 14 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದವು. ಮಂಗಳವಾರ ಆರು ಮಂದಿಯಲ್ಲಿ ಪತ್ತೆಯಾಗಿತ್ತು. ಅದರಲ್ಲಿ ಕರ್ನಾಟಕದಿಂದ ಮೂರು ಮಂದಿಯಲ್ಲಿ, ಆಂಧ್ರ, ತೆಲಂಗಾಣ, ಉತ್ತರ ಪ್ರದೇಶದಿಂದ ತಲಾ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ನವೆಂಬರ್ 25ರಿಂದ ಡಿ.23ರವರೆಗೂ ಬ್ರಿಟನ್ ನಿಂದ ಭಾರತಕ್ಕೆ ಸುಮಾರು 33,000 ಪ್ರಯಾಣಿಕರು ಬಂದಿದ್ದು, ಈ ಪ್ರಯಾಣಿಕರನ್ನು ಹಂತ ಹಂತವಾಗಿ ಪರೀಕ್ಷೆ ನಡೆಸಲಾಗುತ್ತಿದೆ.

UK Corona Virus Strain Cases rises to 25 In India

ಬ್ರಿಟನ್ ನ ರೂಪಾಂತರ ಸೋಂಕಿನ ಭೀತಿ ನಡುವೆ ಹೊಸ ವರ್ಷವೂ ಕಾಲಿಡುತ್ತಿದ್ದು, ಬೆಂಗಳೂರು, ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ನೈಟ್ ಕರ್ಫ್ಯೂ ಹೇರಲಾಗಿದೆ.

English summary
India on Thursday recorded five new cases of mutated coronavirus disease and total cases rises to 25
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X