ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking:ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಉದ್ಧವ್ ಬಣ

|
Google Oneindia Kannada News

ನವದೆಹಲಿ, ಜುಲೈ 25: ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡಾಯ ಹೂಡಿದ್ದ ಶಾಸಕರನ್ನು ಅನರ್ಹಗೊಳಿಸುವ ನಿರ್ಧಾರ ಪ್ರಟಗೊಳ್ಳುವವರೆಗೂ, ಪಕ್ಷದ ಮೇಲಿನ ನಿಯಂತ್ರಣದ ಬಗ್ಗೆ ಚುನಾವಣಾ ಆಯೋಗ ನಿರ್ಧರಿಸುವುದನ್ನು ತಡೆಯಬೇಕು ಎಂದು ಉದ್ಧವ್ ಠಾಕ್ರೆ ಅವರ ಶಿವಸೇನೆ ಬಣವು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಣ ಮತ್ತು ಬಿಜೆಪಿಯ ಬೆಂಬಲದೊಂದಿಗೆ ಸರ್ಕಾರ ರಚಿಸಿದ ಹಾಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣ ಇಬ್ಬರು ತಮ್ಮದು ನಿಜವಾದ ಶಿವಸೇನೆ ಎಂದು ಹೇಳಿಕೊಂಡಿವೆ.

ಶಿಂಧೆ V/s ಠಾಕ್ರೆ: ಶಿವಸೇನೆಯ ಆ 'ಬಿಲ್ಲು-ಬಾಣ'ಕ್ಕೆ ಯಾರು ಒಡೆಯ!?ಶಿಂಧೆ V/s ಠಾಕ್ರೆ: ಶಿವಸೇನೆಯ ಆ 'ಬಿಲ್ಲು-ಬಾಣ'ಕ್ಕೆ ಯಾರು ಒಡೆಯ!?

ಮಹಾರಾಷ್ಟ್ರದ ಈ ಪಕ್ಷವನ್ನು ಯಾರು ಪ್ರತಿನಿಧಿಸುತ್ತಾರೆ ಎಂಬುದನ್ನು ಸಾಬೀತುಪಡಿಸಲು ಆಗಸ್ಟ್ 8 ರೊಳಗೆ ಸಾಕ್ಷ್ಯಚಿತ್ರದ ಸಾಕ್ಷಿ ಮತ್ತು ಲಿಖಿತ ಹೇಳಿಕೆಗಳನ್ನು ನೀಡುವಂತೆ ಚುನಾವಣಾ ಆಯೋಗವು ಎರಡೂ ಸೇನಾ ಗುಂಪುಗಳಿಗೆ ತಿಳಿಸಿದೆ. ಆ ಬಳಿಕವಷ್ಟೇ ಚುನಾವಣಾ ಆಯೋಗ ಪ್ರಕರಣದ ವಿಚಾರಣೆ ನಡೆಸಲಿದೆ.

Uddhav Thackeray Team Petitions Supreme Court Against Election Commission

ಕಳೆದ ತಿಂಗಳು ಉದ್ಧವ್ ಸರ್ಕಾರವನ್ನು ಕೆಳಗಿಳಿಸಲು ಗುಜರಾತ್‌ನಿಂದ ಅಸ್ಸಾಂಗೆ ಅಲ್ಲಿಂದ ಗೋವಾಕ್ಕೆ ಬಂದು ಬಂಡಾಯ ಹೂಡಿದ್ದ ಶಾಸಕರ ಅನರ್ಹತೆಯ ಬಗ್ಗೆ ಸ್ಪಷ್ಟತೆ ಸಿಗಬೇಕು. ಅಲ್ಲಿಯವರೆಗೆ ಶಿವಸೇನೆಯನ್ನು ಯಾವ ಗುಂಪು ಪ್ರತಿನಿಧಿಸುತ್ತದೆ ಎಂಬುದನ್ನು ಚುನಾವಣಾ ಆಯೋಗವು ನಿರ್ಧರಿಸಲು ಸಾಧ್ಯವಿಲ್ಲ ಎಂದು ಠಾಕ್ರೆ ಬಣ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಚುನಾವಣೆಗಳಿಗೆ ಪಕ್ಷದ ಚಿಹ್ನೆಗಳನ್ನು ಹಂಚುವ ಮತ್ತು ಚುನಾವಣೆ ನಡೆಸುವ ಜವಾಬ್ದಾರಿ ಹೊಂದಿರುವ ಸಾಂವಿಧಾನಿಕ ಸಂಸ್ಥೆ ಚುನಾವಣಾ ಆಯೋಗಕ್ಕೆ ಏಕನಾಥ್ ಶಿಂಧೆ ಬಣ ಪತ್ರ ಬರೆದಿದ್ದು, ತಮ್ಮ ತಂಡವು 55 ಶಾಸಕರ ಪೈಕಿ 40 ಮತ್ತು 18 ಲೋಕಸಭೆಯ ಸಂಸದರ ಪೈಕಿ 12 ಸಂಸದರ ಬೆಂಬಲವನ್ನು ಹೊಂದಿದೆ ಎಂದು ಘೋಷಿಸಿಕೊಂಡಿದ್ದಾರೆ.

Uddhav Thackeray Team Petitions Supreme Court Against Election Commission

"ಶಿವಸೇನೆಯಲ್ಲಿ ಒಡಕು ಇರುವುದು ಸ್ಪಷ್ಟವಾಗಿದೆ, ಅದರಲ್ಲಿ ಒಂದು ಗುಂಪನ್ನು ಏಕನಾಥ್ ಶಿಂಧೆ ಮುನ್ನಡೆಸುತ್ತಿದ್ದಾರೆ ಮತ್ತು ಇನ್ನೊಂದು ಗುಂಪನ್ನು ಉದ್ಧವ್ ಠಾಕ್ರೆ ಮುನ್ನಡೆಸುತ್ತಿದ್ದಾರೆ. ಎರಡೂ ಗುಂಪುಗಳು ತಮ್ಮದು ನಿಜವಾದ ಶಿವಸೇನೆ ಎಂದು ಹೇಳಿಕೊಳ್ಳುತ್ತವೆ. ತಮ್ಮ ನಾಯಕ ಶಿವಸೇನಾ ಪಕ್ಷದ ಅಧ್ಯಕ್ಷ ಎಂದು ಹೇಳಿಕೊಳ್ಳುತ್ತವೆ. ಹೀಗಾಗಿ ಆಗಸ್ಟ್ 8 ರೊಳಗೆ ಪಕ್ಷದ ನಿಯಂತ್ರಣಕ್ಕೆ ಸಾಕ್ಷ್ಯಚಿತ್ರದ ಸಾಕ್ಷಿ ನೀಡಿ" ಎಂದು ಎಂದು ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.

Recommended Video

Tiger Crossing Road: ಹುಲಿಯನ್ನ ರಸ್ತೆ ದಾಟಿಸಿದ ಪೊಲೀಸ್ ಅಧಿಕಾರಿ | *India | OneIndia Kannada

English summary
Uddhav Thackeray's Shiv Sena Team requested Supreme Court to stop the Election Commission from deciding on who has control of the party. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X