ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಸಿಜೆಐ ಪದಚ್ಯತಿಗೆ ನಕಾರ: ಕಾಂಗ್ರೆಸ್ ಕೊಳಕು ರಾಜಕೀಯಕ್ಕೆ ಉತ್ತರ!"

|
Google Oneindia Kannada News

ನವದೆಹಲಿ, ಏಪ್ರಿಲ್ 23: ಸಿಜೆ ದೀಪಕ್ ಮಿಶ್ರಾ ಪದಚ್ಯುತಿ ಮನವಿಯನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ತಿರಸ್ಕರಿಸಿರುವುದು, 'ಕಾಂಗ್ರೆಸ್ಸಿನ ಕೊಳಕು ರಾಜಕೀಯಕ್ಕೆ ನೀಡಿದ ಉತ್ತರ' ಎಂದು ಟ್ವಿಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ! ಸಿಜೆಐ ಮಹಾಭಿಯೋಗ ಮಂಡನೆ ಕುರಿತಂತೆ ಟ್ವಿಟ್ಟರ್ ನಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.

ದೀಪಕ್ ಮಿಶ್ರಾ... ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿಯಾಗಿ ಈ ಪರಿ ಸುದ್ದಿಯಾದ ಮತ್ತೊಬ್ಬರಿಲ್ಲ. ಅಧಿಕಾರ ಸ್ವೀಕರಿಸಿದ ಲಾಗಾಯ್ತೂ ಅವರ ಸುತ್ತ ವಿವಾದಗಳೂ ಸುತ್ತಿಕೊಂಡೇ ಬರುತ್ತಿವೆ.

ಸಿಜೆಐ ಪದಚ್ಯುತಿ ಮನವಿ ತಿರಸ್ಕರಿಸಿದ ವೆಂಕಯ್ಯ ನಾಯ್ಡು ಸಿಜೆಐ ಪದಚ್ಯುತಿ ಮನವಿ ತಿರಸ್ಕರಿಸಿದ ವೆಂಕಯ್ಯ ನಾಯ್ಡು

ಜನವರಿಯಲ್ಲಿ ನಾಲ್ವರು ನ್ಯಾಯಮೂರ್ತಿಗಳು ಕರೆದ ಸುದ್ದಿಗೋಷ್ಟಿ ಇದ್ದಿರಬಹುದು, ಪ್ರಕರಣಗಳ ಹಂಚಿಕೆಯಲ್ಲಿ ಸಿಜೆಐ ಗೆ ಇರುವ ಅಧಿಕಾರಗಳನ್ನು ಪ್ರಶ್ನಿಸಿ ನ್ಯಾ.ಪ್ರಶಾಂತ್ ಭೂಷಣ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇದ್ದಿರಬಹುದು, ಇದೀಗ ಪದಚ್ಯುತಿ ಮನವಿ ಇರಬಹುದು... ನ್ಯಾಯಾಂಗದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಸಾಬೀತುಪಡಿಸುತ್ತಿದೆ. ಅಷ್ಟಕ್ಕೂ ದೀಪಕ್ ಮಿಶ್ರಾ ಅವರ ಮೇಲೆ ವಿಪಕ್ಷಗಳಿಗೆ ಈ ಪರಿ ಕೋಪ, ತಾಪ ಯಾಕೆ? ಪದಚ್ಯುತಿ ಮನವಿಯನ್ನು ಸಾರಾಸಗಟಾಗಿ ತಿರಸ್ಕರಿಸಿದ ವೆಂಕಯ್ಯ ನಾಯ್ಡು ಅವರ ನಡೆಯನ್ನು ಖಂಡಿಸುತ್ತಿರುವುದೇಕೆ?

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ದೀಪಕ್ ಮಿಶ್ರಾ ಅವರು ನೆಹರು-ಗಾಂಧಿ ಕುಟುಂಬಕ್ಕೆ ವಿಧೇಯರಾಗಿಲ್ಲವೆಂದು ಅವರ ಸುತ್ತ ವಿವಾದ ಸೃಷ್ಟಿಸಲಾಗುತ್ತಿದೆಯೇ ಎಂದು ಟ್ವಿಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಸರಿಯಾಗಿ ಪರಿಶೀಲಿಸದೆ ಪದಚ್ಯುತಿ ಮನವಿಯನ್ನು ತಿರಸ್ಕರಿಸಿದ ವೆಂಕಯ್ಯ ನಾಯ್ಡು ಅವರ ನಡೆಯ ಬಗ್ಗೆಯೂ ಕೆಲವರು ಟೀಕೆ ವ್ಯಕ್ತಪಡಿಸಿದ್ದಾರೆ.

Array

ಕಾಂಗ್ರೆಸ್ ಆತ್ಮಹತ್ಯೆ ಮಾಡಿಕೊಂಡಿದೆ!

ವೆಂಕಯ್ಯ ನಾಯ್ಡು ಅವರ ನಿರ್ಧಾರ ಸರಿಯಾಗಿದೆ. ಇದಕ್ಕಾಗಿ ಅವರು ಎರಡು ದಿನ ಸಮಯ ತೆಗೆದುಕೊಳ್ಳುವ ಅಗತ್ಯವಿರಲಿಲ್ಲ. ಈ ವಿಷಯ ಚರ್ಚೆಯಾಗುತ್ತಿದ್ದ ಮೊದಲ ಹಂತದಲ್ಲೇ ಅವರ ಮನವಿಯನ್ನು ತಿರಸ್ಕರಿಸಬೇಕಿತ್ತು. ಈ ಮೂಲಕ ಕಾಂಗ್ರೆಸ್ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.

ಸಿಜೆಐ ವಿರುದ್ಧ ಮಹಾಭಿಯೋಗ ನಿಲುವಳಿ ಮಂಡನೆ: ನಾಯ್ಡು ಪರಿಶೀಲನೆಸಿಜೆಐ ವಿರುದ್ಧ ಮಹಾಭಿಯೋಗ ನಿಲುವಳಿ ಮಂಡನೆ: ನಾಯ್ಡು ಪರಿಶೀಲನೆ

ನಾಟಕ ನಿಲ್ಲಿಸಿ!

ಕಾಂಗ್ರೆಸ್ಸಿಗರೇ, ಈಗ ಉಪರಾಷ್ಟ್ರಪತಿಗಳನ್ನು ಪದಚ್ಯುತಿಗೊಳಿಸಲು ಪ್ರಯತ್ನಿಸಿ! ವಿಪಕ್ಷಗಳಿಗೆ ನಾಟಕ ಮಾಡುವುದನ್ನು ಬಿಟ್ಟರೆ ಬೇರೆ ದಾರಿಯಿಲ್ಲ. ವಿರೋಧಪಕ್ಷ ಎಂದು ಹೇಳಿಸಿಕೊಳ್ಳುವ ಸಲುವಾಗಿಯೇ ವಿರೋಗಧಪಕ್ಷಗಳು ಎಲ್ಲವನ್ನೂ ವಿರೋಧಿಸುತ್ತಿವೆ ಎಂದಿದ್ದಾರೆ ಅಂಶುಲ್ ಸಕ್ಸೇನಾ.

ಕಾಂಗ್ರೆಸ್ ಕೊಳಕು ರಾಜಕೀಯಕ್ಕೆ ಉತ್ತರ

ಭಾರತದ ನ್ಯಾಯಾಂಗವನ್ನು ನೆಲಕ್ಕೆ ಬೀಳಿಸಲು ಪ್ರಯತ್ನಿಸಿದ್ದ ಕಾಂಗ್ರೆಸ್ ನ ಕೊಳಕು ನಡೆಗೆ ತಕ್ಕ ಉತ್ತರ ಸಿಕ್ಕಿದೆ. ದೀಪಕ್ ಮಿಶ್ರಾ ಅವರ ಪದಚ್ಯುತಿ ಮಂಡನೆಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ನಿರಾಕರಿಸಿದ್ದಾರೆ ಎಂದಿದ್ದಾರೆ ಮಹೇಶ್ ಜೋಶಿ.

ಇದು ಅನ್ಯಾಯ!

ಸಾಮಾನ್ಯ ಜ್ಞಾನದಲ್ಲಿ ಹೇಳುವುದಾದರೆ ರಾಜ್ಯಸಭಾ ಅಧ್ಯಕ್ಷರಿಗೆ ಮಹಾಭಿಯೋಗ ನಿಲುವಳಿಯನ್ನು ತಿರಸ್ಕರಿಸುವ ಅಧಿಕಾರವಿಲ್ಲ. ಅದೂ ಅಗತ್ಯವಿರುವಷ್ಟು ಸಂಸದರು ಅದಕ್ಕೆ ಸಹಿ ಆಡಿದ ಮೇಲೆ! ಇದು ಅನ್ಯಾಯ ಎಂದಿದ್ದಾರೆ ಅಬ್ದುಲ್ಲಾ ಮದುಮೂಲೆ.

ನ್ಯಾಯಾಂಗದ ಘನತೆ ಉಳಿಸುವಂಥ ನಿರ್ಧಾರ

"ನಮ್ಮ ದೇಶದ ನ್ಯಾಯಾಂಗದ ಘನತೆಯನ್ನುಉಳಿಸುವಂಥ ನ್ಯಾಯಯುತ ತೀರ್ಮಾನ ಕೈಗೊಂಡ ವೆಂಕಯ್ಯ ನಾಯ್ಡು ಅವರಿಗೆ ಅಭಿನಂದನೆಗಳು. ನಮ್ಮ ಸುಂದರ ಪ್ರಜಾಪ್ರಭುತ್ವವನ್ನು ಉಳಿಸಲು ಇದೊಂದು ಉತ್ತಮ ಹೆಜ್ಜೆ. ಅವರ ಈ ನಡೆಯನ್ನು ನಾವೆಲ್ಲರೂ ಸ್ವಾಗತಿಸುತ್ತೇವೆ" ಎಂದಿದ್ದಾರೆ ರಾಜೆಂದ್ರ ಕುಮಾರ್ ಸಿಂಗ್.

English summary
Vice President and Rajyasabha chief M Venkaiah Naidu rejects the Impeachment Motion by Congress led opposition parties against Chief Justice of India Dipak Misra. Many leaders responded about the decision of Venkaiah Naidu
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X